ಬೆಂಗಳೂರು: ಇಬ್ರಾಹಿಂ ಜೊತೆ ಯಾವುದೇ ಗೊಂದಲ ಮಾಡಿಕೊಳ್ಳಬೇಡಿ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜಮೀರ್ಗೆ ಸಲಹೆ ನೀಡಿದರು. ಸಿಎಂ ಇಬ್ರಾಹಿಂ ವಿಚಾರದಲ್ಲಿ ಶಾಸಕ ಜಮೀರ್ ಬೇಸರ ವ್ಯಕ್ತಪಡಿಸಿದ್ದು, ಉಪಚುನಾವಣೆ, ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಬಾರದಿದಕ್ಕೆ ಶಾಸಕ ಜಮೀರ್ ಅಸಮಾಧಾನ ವ್ಯಕ್ತಪಡಿಸಿದ್ರು.
ಅಷ್ಟೇ ಅಲ್ಲ ಸಿಎಂ ಇಬ್ರಾಹಿಂ ದಳಪತಿಗಳ ಸಂಪರ್ಕವಿದ್ದ ಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂರನ್ನ ಜೆಡಿಎಸ್ಗೆ ಹೋಗದಂತೆ ಜಮೀರ್ ಅಹಮದ್ಗೆ ಸೂಚನೆ ನೀಡಿದ್ರು. ಅಷ್ಟೇ ಅಲ್ಲ 2023ರ ಸಾರ್ವತ್ರಿಕ ಚುನಾವಣೆಗೆ ಇಬ್ರಾಹಿಂ ಪಕ್ಷದಲ್ಲೇ ಇರಬೇಕು. ಅವರು ಅದ್ಬತ ಭಾಷಣದ ವರ್ಚಸ್ಸು ಇದೆ. ಹೀಗಾಗಿ ಇಬ್ರಾಹಿಂ ಜೊತೆ ಯಾವುದೇ ಗೊಂದಲ ಮಾಡಿಕೊಳ್ಳಬೇಡಿ ಅಂತ ಜಮೀರ್ಗೆ ಸಿದ್ದರಾಮಯ್ಯ ಸಲಹೆ ನೀಡಿದರು. ಇನ್ನು ಸಿದ್ದರಾಮಯ್ಯ ಸಂದೇಶಕ್ಕೆ ಶಾಸಕ ಜಮೀರ್ ಅಹಮದ್ ಒಪ್ಪಿಗೆ ನೀಡಿದರು.
