ವಿಜಯಪುರ: ನಾನು ಆಳಂದ ಶಾಸಕ ಬಿ. ಆರ್. ಪಾಟೀಲ ಜೊತೆ ಮಾತನಾಡಿಲ್ಲ. ನನಗೆ ಆ ವಿಷಯ ಗೊತ್ತೂ ಇಲ್ಲ. ನಾನು ಎರಡ್ಮೂರು ದಿನಗಳಿಂದ ಮತಕ್ಷೇತ್ರದಲ್ಲಿ ಇರಲಿಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದು ಶಾಸಕ ಬಿಆರ್ ಪಾಟೀಲ ಅವರ ಪತ್ರದ ಕುರಿತು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಮತ್ತು ವಿಧಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ನಾನು ಓರ್ವ ಹಿರಿಯ ಶಾಸಕರು ವ್ಯಕ್ತಪಡಿಸಿರುವ ಆತಂಕಗಳ ಹಿನ್ನೆಲೆಯಲ್ಲಿ ಬಹಳ ಜನ ಶಾಸಕರೂ ಸಹಮತ ವ್ಯಕ್ತಪಡಿಸಿದ್ದರು.
Bengaluru: ನಿವಾಸಿಗಳೇ, ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದೀರಾ!? – ಇಲ್ಲಿದೆ ಗುಡ್ ನ್ಯೂಸ್
ಅಂದು ಬಿಆರ್ ಪಾಟೀಲ ಅವರು ಮಾತನಾಡಿರುವುದಕ್ಕೆ ನನ್ನ ಬೆಂಬಲ ಇದೆ ಎಂದರು. ಪ್ರತಿಯೊಂದಕ್ಕೂ ಮಾಧ್ಯಮಗಳ ಬಳಿ ಹೋಗುವುದು ಬೇಡ. ಅಂದು ಅವರು ಮಾತನಾಡಿದ್ದನ್ನು ನಾನು ಹೇಳಿದ್ದೇನೆ. ಅದನ್ನು ಬಿಟ್ಟು ಗೊತ್ತಿರದ ವಿಷಯದ ಕುರಿತು ನಾನು ಮಾತನಾಡುವುದಿಲ್ಲ ಎಂದು ಹೇಳಿದರು.