ಮನೆಕಟ್ಟುವಾಗ ವಾಸ್ತು ಪಾಲಿಸುವುದು ತುಂಬಾ ಅಗತ್ಯ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು, ಪ್ರತಿಯೊಂದು ಮೂಲೆಯು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಇದು ಆರ್ಥಿಕ, ಮಾನಸಿಕ ಮತ್ತು ದೈಹಿಕ ಸ್ಥಿತಿಗಳ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ.
ಅನೇಕ ಬಾರಿ ಮನೆಯಲ್ಲಿ ಜಾಗಗಳು ಬಹಳ ಕಡಿಮೆ ಇರುವುದರಿಂದ ಇದ್ದ ಜಾಗದಲ್ಲಿಯೇ ವಸ್ತುಗಳನ್ನಿಡುತ್ತೇವೆ ಅಥವಾ ಕಟ್ಟುವಾಗಲೇ ಸಣ್ಣದಾಗಿ ಕಟ್ಟುತ್ತೇವೆ. ಬಹಳ್ಷುಟ ಜನರು ಮೆಟ್ಟಿಲುಗಳ ಕೆಳಗೆ ಏನಾದರೂ ಕಟ್ಟಿರುತ್ತಾರೆ ಅಥವಾ ವಸ್ತುಗಳನ್ನ ಇಡುತ್ತಾರೆ.
ಜ್ಯೋತಿಷ್ಯದ ಪ್ರಕಾರ ಈ ರೀತಿ ಮಾಡುವುದು ಬಹಳ ತಪ್ಪು. ಕೆಲ ವಸ್ತುಗಳನ್ನ ಮನೆಯಲ್ಲಿ ಇಡುವುದು ನಮ್ಮ ಪ್ರಗತಿ ಮತ್ತು ಜೇಬಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೆಟ್ಟಲುಗಳ ಕೆಳಗೆ ಯಾವ ವಸ್ತುಗಳನ್ನ ಇಡಬಾರದು ಎಂಬುದು ಇಲ್ಲಿದೆ.
ಸಾಮಾನ್ಯವಾಗಿ ಮನೆಯ ಮೆಟ್ಟಿಲುಗಳ ಕೆಳಗೆ ಇರುವ ಜಾಗವನ್ನು ಜನರು ಕಸವನ್ನು ಇಡಲು ಬಳಸುತ್ತಾರೆ. ಅಲ್ಲಿ ಕಸದ ತೊಟ್ಟಿಗಳನ್ನು ಇಡುತ್ತಾರೆ, ಒರೆಸುವ ಬಟ್ಟೆಗಳನ್ನು ಇಡುತ್ತಾರೆ. ಹೀಗೆ ಮಾಡುವುದರಿಂದ ಇದು ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುವುದಲ್ಲದೆ ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ.
ಜಾಗವನ್ನು ಉಳಿಸುವ ಸಲುವಾಗಿ, ಜನರು ಮೆಟ್ಟಿಲುಗಳ ಕೆಳಗೆ ಪೂಜಾ ಸ್ಥಳ, ಸ್ನಾನಗೃಹ ಅಥವಾ ಅಡುಗೆಮನೆಯನ್ನು ನಿರ್ಮಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ವಾಸ್ತು ಪ್ರಕಾರ ಹೀಗೆ ಮಾಡುವುದು ಸರಿಯಲ್ಲ. ಮೆಟ್ಟಿಲುಗಳ ಕೆಳಗೆ ದಿನಬಳಕೆಯ ಕೊಠಡಿಗಳನ್ನು ಮಾಡಬಾರದು ಎಂದು ವಾಸ್ತುದಲ್ಲಿ ಹೇಳಲಾಗಿದೆ. ಕೆಲವರು ಮೆಟ್ಟಿಲುಗಳ ಕೆಳಗಿರುವ ಜಾಗವನ್ನು ಸ್ಟೋರ್ ರೂಂ ಆಗಿ ಬಳಸಬಹುದು. ಆದರೆ ಈ ಸ್ಥಳದ ಸ್ವಚ್ಛತೆ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.
ಮೆಟ್ಟಿಲುಗಳ ಕೆಳಗೆ ಆಭರಣಗಳ ವಾರ್ಡ್ರೋಬ್ ಮತ್ತು ಹಣದ ವಾರ್ಡ್ರೋಬ್ ಅನ್ನುಇಡಬೇಡಿ. ಸೇಫ್ ಮತ್ತು ಬೀರುಗಳನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.
ಮೆಟ್ಟಿಲುಗಳ ಕೆಳಗೆ ಟ್ಯಾಪ್ಗಳನ್ನು ಸ್ಥಾಪಿಸಿದರೆ, ಆ ಟ್ಯಾಪ್ಗಳಿಂದ ನೀರು ಸೋರಿಕೆಯಾಗುತ್ತಿದ್ದರೆ, ಇದರಿಂದ ಕೂಡ ಹಣದ ಕೊರತೆ ಉಂಟಾಗಬಹುದು.
ಇಂತಹ ವಸ್ತುಗಳು ತೊಂದರೆಯನ್ನು ಹೆಚ್ಚಿಸುತ್ತವೆ
ಮೆಟ್ಟಿಲುಗಳು ಯಾವಾಗಲೂ ಅಗಲವಾಗಿರಬೇಕು. ಮೆಟ್ಟಿಲುಗಳ ಮೇಲೆ ಕತ್ತಲೆ ಇರಬಾರದು. ಬೆಳಕು ಹೆಚ್ಚು ಪ್ರಕಾಶಮಾನವಾಗಿಲ್ಲದಿದ್ದರೆ, ಇದರಿಂದ ಆರ್ಥಿಕ ಸಂಕಷ್ಟ ಎದುರಿಸಬಹುದು. ಹಾಗೂ ಮೆಟ್ಟಿಲುಗಳ ಪ್ರಾರಂಭ ಮತ್ತು ಕೊನೆಯಲ್ಲಿ ಗೇಟ್ಗಳಿರಬೇಕು. ಅಲ್ಲದೆ, ಮೆಟ್ಟಿಲುಗಳ ಕೆಳಗೆ ಶೂಗಳು ಮತ್ತು ಚಪ್ಪಲಿಗಳು ಅಥವಾ ಅನುಪಯುಕ್ತ ವಸ್ತುಗಳನ್ನು ಇಡಬಾರದು. ಇದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ.