ಬೆಂಗಳೂರು: ಹೊಸವರ್ಷದ ಹಿಂದಿನ ದಿನವಾದ ಇಂದು ಆರು ಗಂಟೆಯಿಂದಲೇ ನಿರ್ಬಂಧ ವಿಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೂ ಕೊರೊನಾ ಹರಡುತ್ತಿದ್ದು, ಹೀಗಾಗಿ ಸರ್ಕಾರ ಕೆಲ ನಿರ್ಭಂದಗಳನ್ನ ಹಾಕಿದೆ.
ನಿರ್ಬಂಧಗಳನ್ನ ಹಾಕಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದ್ದು, ಜನರು ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು. ಇನ್ನೂ ಹೊಸ ವರ್ಷವನ್ನು ಅವರವರ ಮನೆಯಲ್ಲೇ ಸೆಲೆಬ್ರೇಶನ್ ಮಾಡಬೇಕು. ಗುಂಪುಗೂಡಿ ಸೆಲೆಬ್ರೇಶನ್ ಮಾಡಬಾರದು. ಯಾರು ಪೊಲೀ ಸರಿಗೆ ಕೆಲಸ ಕೊಡುವ ರೀತಿ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
