ಬೆಂಗಳೂರು:-ಬೆಂಗಳೂರಿನಲ್ಲಿ ನಾಯಿ ಮಾಂಸ ಸೇಲ್ ಕೇಸ್ ಗೆ ಸಂಬಧಪಟ್ಟಂತೆ ವರದಿ ಮುನ್ನವೇ ಗೃಹ ಸಚಿವ ಜಿ ಪರಮೇಶ್ವರ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ರಾಜಸ್ಥಾನದಿಂದ ವಾರಕ್ಕೊಮ್ಮೆ, ಬೇಕಾದಾಗ ಮಾಂಸವನ್ನು ತಂದು ಮಾರಾಟ ಮಾಡುತ್ತಿರುವುದು ಅವರ ವೃತ್ತಿ. ಅದು ನಡೆದುಕೊಂಡು ಬಂದಿದೆ. ಯಾರೋ ಹೋಗಿ ನಾಯಿ ಮಾಂಸ ಎಂದು ಹೇಳಿ ಅನಾವಶ್ಯಕವಾಗಿ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಸಹ ಬಂದಿದ್ದು, ಅದು ನಾಯಿ ಮಾಂಸವಲ್ಲ, ಮೇಕೆ ಮಾಂಸ ಎಂದು ವರದಿಯಲ್ಲಿದೆಯೆಂದು ತಿಳಿದು ಬಂದಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಯಾರೇ ಆದರೂ ದುರುದ್ದೇಶ ಇಟ್ಟುಕೊಂಡು ಗಲಾಟೆ ಮಾಡಲು ಮುಂದಾದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಬಂಧನ ಸಮರ್ಥಿಸಿದರು.