ಹಾಲು ನಮ್ಮ ದೇಹಕ್ಕೆ ಬೇಕಾದಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಒಂದು ಸಂಪೂರ್ಣ ಆಹಾರವಾಗಿದೆ. ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಬಯಸಿದರೆ, ಪ್ರತಿನಿತ್ಯ ಒಂದು ಲೋಟ ಹಾಲು ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಹಾಲು ಆರೋಗ್ಯಕ್ಕೆ ಅಗತ್ಯವಾದ ಹಲವಾರು ಜೀವಸತ್ವಗಳು ಮತ್ತು ಖನಿಜಗಳನನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ನಾವು ಹಲವಾರು ಆರೋಗ್ಯ ಪ್ರಯೋಜಗಳನ್ನು ಪಡೆಯಬಹುದು. ಆದ್ರೆ ಹೆಚ್ಚು ಹಾಲು ಸೇವಿಸುವುದು ನಿಮಗೆ ಹಾನಿಕಾರಕ ಎಂದು ತಿಳಿದಿದೆಯೇ?
ಹಾಲನ್ನು ಅತಿಯಾಗಿ ಕುಡಿಯುವುದರಿಂದ ಆಗುವ ಅನನುಕೂಲಗಳೇನು? ಮತ್ತು ದಿನಕ್ಕೆ ಎಷ್ಟು ಹಾಲನ್ನು ಕುಡಿಯಬೇಕು? ಎನ್ನುವುದರ ಮಾಹಿತಿ ಇಲ್ಲಿದೆ. ಪ್ರತಿದಿನ ಹೆಚ್ಚು ಹಾಲು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ಹಾಲಿನಲ್ಲಿ ಬಹಳಷ್ಟು ಕೊಬ್ಬು ಮತ್ತು ಕ್ಯಾಲೋರಿಗಳು ಕಂಡುಬರುತ್ತವೆ. ಇದು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. 1 ಕಪ್ ಹಾಲು 5 ಗ್ರಾಂ ಕೊಬ್ಬು ಮತ್ತು 152 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ನೈಸರ್ಗಿಕ ಸಕ್ಕರೆಯಾದ ದೊಡ್ಡ ಪ್ರಮಾಣದಲ್ಲಿ ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ನಿಮ್ಮ ತೂಕ ಹೆಚ್ಚಾಗುವುದು ಮಾತ್ರವಲ್ಲದೆ ನೀವು ಇತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಹೆಚ್ಚು ಹಾಲು ಕುಡಿಯುವುದರಿಂದ ಉಂಟಾಗುವ ದುಷ್ಪರಿಣಾಮಗಳೇನು?:
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು:
ಜನರು ಪ್ರತಿದಿನ ಹಾಲು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಉದಾಹರಣೆಗೆ, ಗ್ಯಾಸ್ಟ್ರಿಕ್, ಅತಿಸಾರ ಅಥವಾ ಮಲಬದ್ಧತೆ. ಹೆಚ್ಚು ಹಾಲು ಕುಡಿಯುವುದರಿಂದ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ನಡುವೆ ಅಸಮತೋಲನ ಉಂಟಾಗುತ್ತದೆ, ಇದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು:
ಹಾಲಿನ ಅತಿಯಾದ ಸೇವನೆಯಿಂದ ಜನರು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಲ್ಲಿರುವ ಲ್ಯಾಕ್ಟೋಸ್ನಿಂದಾಗಿ ಜನರ ಜೀರ್ಣಕ್ರಿಯೆಯು ಹಾಳಾಗುತ್ತದೆ. ಕಳಪೆ ಜೀರ್ಣಕ್ರಿಯೆಯು ವಾಂತಿ ಮತ್ತು ಚಡಪಡಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಚರ್ಮದ ಸಮಸ್ಯೆಗಳು:
ನೀವು ಮೊಡವೆ ಮತ್ತು ಪಿಗ್ಮೆಂಟೇಶನ್ನಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ ನೀವು ಹೆಚ್ಚು ಹಾಲನ್ನು ಸೇವಿಸಬಾರದು. ಅಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಲು ಕುಡಿಯಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಲಿನ ಅತಿಯಾದ ಸೇವನೆಯು ಚರ್ಮದ ಅಲರ್ಜಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ದೇಹದ ವಿವಿಧ ಸ್ಥಳಗಳಲ್ಲಿ ಮೊಡವೆಗಳು ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ.
ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು:
ನಿಮಗೆ ಯಾವುದೇ ಯಕೃತ್ತು ಸಂಬಂಧಿತ ಸಮಸ್ಯೆಗಳು ಅಥವಾ ಕಾಯಿಲೆಗಳಿದ್ದರೆ ನೀವು ಹಾಲು ಸೇವಿಸಬಾರದು. ಹಾಲು ಕೊಬ್ಬಿನಿಂದ ಸಮೃದ್ಧವಾಗಿರುತ್ತದೆ. ಇದರಿಂದ ಯಕೃತ್ತು ಹಾಲನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಯಕೃತ್ತು ಊದಿಕೊಳ್ಳಬಹುದು.