ಹೆಚ್ಚಿನ ಭಾರತೀಯರು ತಮ್ಮ ಮುಂಜಾವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ಕೆಲವರು ಬ್ಲ್ಯಾಕ್ ಟೀ, ಕುಡಿಯುತ್ತಾರೆ, ಕೆಲವರು ಹಾಲಿನ ಚಹಾ ಕುಡಿಯುತ್ತಾರೆ. ಆದರೆ ಬರೀ ಚಹಾ ಕುಡಿಯದೇ ಜನರು ಇದರೊಂದಿಗೆ, ಬಿಸ್ಕತ್ತುಗಳು, ನಮ್ಕೀನ್ ಮತ್ತು ಚಿಪ್ಸ್ ತಿನ್ನಲು ಇಷ್ಟಪಡುತ್ತಾರೆ. ಹೀಗಿರೋವಾಗ, ಅನೇಕ ಜನರು ಚಹಾದೊಂದಿಗೆ ಬ್ರೆಡ್ ಸಹ ತಿನ್ನುತ್ತಾರೆ.
ಅದಲ್ಲದೆ ಬರೀ ಚಹಾವಷ್ಟೇ ಸಾಲದು, ಚಹಾದೊಳಗೆ ಅದ್ದಿ ತೆಗೆದು ಬಾಯಿಗಿಡಲು ಎರಡು ಬಿಸ್ಕತ್ತುಗಳೂ ಇರಬೇಕು ಎನ್ನುವ ರೂಢಿ ಇನ್ನೂ ಕೆಲವರದ್ದು. ಚಹಾ ಬಿಸ್ಕತ್ತು ತಿಂದ ಮೇಲೆಯೇ, ಮತ್ತೆ ನಿಧಾನವಾಗಿ ಬೆಳಗಿನ ತಿಂಡಿ ಸಮಾರಾಧನೆ ನಡೆಯೋದು ಅನ್ನುವ ಮಂದಿ ಹಲವರು. ಇಂಥ ಆಭ್ಯಾಸವಿರುವ ಮಂದಿ ಇಲ್ಲಿ ಕೇಳಿ. ಬೆಳಗ್ಗೆ ಎದ್ದ ಕೂಡಲೇ ಚಹಾ ಬಿಸ್ಕತ್ತು ಸವಿಯುವ ಮಂದಿ ನೀವಾಗಿದ್ದರೆ ಈಗಲೇ ಅಭ್ಯಾಸ ಬದಲಾಯಿಸಿಕೊಳ್ಳಿ. ಯಾಕೆಂದರೆ, ಬಿಸ್ಕತ್ತು ಬೆಳಗನ್ನು ಆರಂಭಿಸುವ ಅತ್ಯಂತ ಕೆಟ್ಟ ಆಯ್ಕೆಯಂತೆ!
ನಿಮಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ..? ತುಂಬಾ ಡೇಂಜರ್ ಇದು!
ಈ ಕಾಂಬಿನೇಶನ್ ದೇಹದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಏರುಪೇರು ಮಾಡುತ್ತದಂತೆ. ಅಸಿಡಿಟಿ ಎಂದು ನೀವು ಒದ್ದಾಡುತ್ತಿದ್ದರೆ ಅದಕ್ಕೆಲ್ಲ ಮೂಲ ಕಾರಣ ಬೆಳಗಿನ ಈ ಬಿಸ್ಕತ್ತೇ ಆಗಿರಬಹುದಂತೆ. ಇನ್ನು ಹೊಟ್ಟೆ ಸಂಬಂಧಿ ತೊಂದರೆಗಳು, ತೂಕದಲ್ಲಿ ಏರಿಕೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣದಲಿ ಏರುಪೇರು, ಪಚನ ತೊಂದರೆಗಳು ಮತ್ತಿತರ ಅನೇಕ ಸಮಸ್ಯೆಗಳ ಕಟ್ಟಿಟ್ಟ ಬುತ್ತಿ. ಹೀಗೆ ಜೀರ್ಣಕ್ರಿಯೆ ಹಾಗೂ ಅಸಿಡಿಟಿ ಸಮಸ್ಯೆಗಳಿರುವ ಮಂದಿ ಬೆಳಗ್ಗೆ ಎದ್ದಕೂಡಲೇ ಚಹಾ ಬಿಸ್ಕತ್ತಿನ ಬದಲು ಏನನ್ನು ಸೇವಿಸಬಹುದು ಹಾಗೂ ಅವರಿಗೆ ಯಾವುದು ಉತ್ತಮ ಎಂಬುದನ್ನು ನೋಡೋಣ
೧. ಬಡೇಸೊಪ್ಪಿನ ನೀರು: ಸೋಂಪು ಅಥವಾ ಬಡೇಸೊಪ್ಪಿನ ನೀರು ಅಸಿಡಿಟಿ ಮತ್ತಿತರ ಸಮಸ್ಯೆಗಳನ್ನು ನಿವಾರಿಸುವ ತಾಕತ್ತನ್ನು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.
೨. ಕೊತ್ತಂಬರಿ ನೀರು: ಹೊಟ್ಟೆ ಉಬ್ಬರಿಸಿದಂತಾಗುವುದು ಹಾಗೂ ಅಸಿಡಿಟಿ ಸಮಸ್ಯೆಗಳಿದ್ದರೆ ಅಂಥವರಿಗೆ ಕೊತ್ತಂಬರಿ ಕಾಳನ್ನು ನನೆನೆಸಿದ ನೀರೂ ಕೂಡಾ ಒಳ್ಳೆಯದು.
೩. ಆಲೊವೆರಾ ಜ್ಯೂಸ್: ಮಲಬದ್ಧತೆಯಂಥಾ ಸಮಸ್ಯೆಯಿದ್ದರೆ, ಬೆಳಗ್ಗೆದ್ದ ಕೂಡಲೇ ಶೌಚವೇ ದೊಡ್ಡ ಸಮಸ್ಯೆಯಾಗಿದ್ದರೆ ಅಂಥವರು ಬೆಳಗ್ಗೆ ಅಲೊವೆರಾ ಜ್ಯೂಸ್ ಕುಡಿಯಬಹುದು.
೪. ಎಳನೀರು ಹಾಗೂ ದಾಲ್ಚಿನಿ: ಎಳನೀರಿಗೆ ದಾಲ್ಚಿನಿ ಪುಡಿ ಹಾಕಿ ಕುಡಿಯುವುದರಿಂದ ಬೆಳಗ್ಗೆ ಎದ್ದ ಕೂಡಲೇ ಆರಂಭವಾಗುವ ಸಕ್ಕರೆ ಚಪಲತೆಯನ್ನು ಇದು ಕಡಿಮೆಗೊಳಿಸುತ್ತದೆ. ಇದು ಮಧುಮೇಹ ತೊಂದರೆ ಇರುವ ಮಂದಿಗೂ ಒಳ್ಳೆಯದು.
೫. ಎಳನೀರು ಹಾಗೂ ಹಲೀಂ ಬೀಜ: ಎಳನೀರಿನೊಂದಿಗೆ ಹಲೀಂಬೀಜವನ್ನು ನೆನೆಸಿ ಕುಡಿಯುವುದರಿಂದ ಚರ್ಮ ಹಾಗೂ ಕೂದಲ ಸಮಸ್ಯೆ ಇರುವ ಮಂದಿಗೂ ಉತ್ತಮವಂತೆ. ಇದರಲ್ಲಿರುವ ಕಬ್ಬಿಣದಂಶ ಕೂದಲು ಉದುರದಂತೆ ಕಾಪಾಡುತ್ತದಂತೆ.