ಮಂಡ್ಯ : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನೆಗೆ ಅಕ್ರಮವಾಗಿ ನಾವು ವಿದ್ಯುತ್ ಕನೆಕ್ಷನ್ ಕೊಡಿಸಿದ್ವಾ? ಗೊತ್ತಿಲ್ಲದೇ ತಪ್ಪಾಗಿದೆ ಅಂತಾ ಹೇಳಿದ್ರೆ ಮುಗಿತಿತ್ತು. ಅದು ಬಿಟ್ಟು ಎಲ್ಲರನ್ನು ಲಘುವಾಗಿ ಬಾಯಿಗೆ ಬಂದಾಗೆ ಮಾತನಾಡಿದರು. ಇವರಿಗೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ರಕ್ಷಣೆ ಇದೆ ಅಂತಾ ಬಾಯಿಗೆ ಬಂದಾಗೆ ಮಾತಾಡ್ತಾರಾ.? ಮಾತನಾಡುವ ನಾಲಿಗೆಗೆ ಇತಿಮಿತಿ ಇರುತ್ತೆ ಅಲ್ವ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿ ಕಾರಿದರು.
ಮಂಡ್ಯ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಮನೆಗೆ ಅಕ್ರಮವಾಗಿ ವಿದ್ಯುತ್ ಕನೆಕ್ಷನ್ ನಾವು ಕೊಡಿಸಿದ್ವಾ? 68 ಸಾವಿರ ಪೆನಾಪ್ಟಿ ಕಟ್ಟೋಕೆ ನಾವು ಹೇಳಿದ್ವಾ? ಹಳ್ಳಿಗಳಲ್ಲಿ ಅಕ್ರಮವಾಗಿ ಮನೆ ಕಟ್ಟುವಾಗ ವಿದ್ಯುತ್ ತಕೊಂಡಿರ್ತಾರೆ. ಆ ಸಂದರ್ಭ ನಾನೇ ಮಂತ್ರಿಯಾಗಿ ಬುದ್ದಿ ಹೇಳ್ತೀನಿ.
Vishwas Vaidya: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ CM ಆಗುವುದು ಅಷ್ಟೇ ಸತ್ಯ: ಕಾಂಗ್ರೆಸ್ ಶಾಸಕ
ದಂಡವನ್ನ ಕಡಿಮೆ ಮಾಡಿ ಅಂತಾ ಅಧಿಕಾರಿಗೆ ಹೇಳಿದ್ದೇವೆ. ಗೊತ್ತಿಲ್ಲದೇ ತಪ್ಪಾಗಿದೆ ಅಂತಾ ಹೇಳಿದ್ರೆ ಮುಗಿತಿತ್ತು. ಅದು ಬಿಟ್ಟು ಎಲ್ಲರನ್ನು ಲಘುವಾಗಿ ಬಾಯಿಗೆ ಬಂದಾಗೆ ಮಾತನಾಡಿದರು. ಇವರಿಗೆ ಪ್ರಧಾನಿ, ಮಾಜಿ ಪ್ರಧಾನಿ ರಕ್ಷಣೆ ಇದೆ ಅಂತಾ ಬಾಯಿಗೆ ಬಂದಾಗೆ ಮಾತಾಡ್ತಾರಾ.? ಮಾತನಾಡುವ ನಾಲಿಗೆಗೆ ಇತಿಮಿತಿ ಇರುತ್ತೆ ಅಲ್ವ. ನಾನು ಸಂಸ್ಕಾರ, ಸಂಸ್ಕೃತಿ ಗೌರವಿಸಿ ಮಂತ್ರಿಯಾಗಿ ಕೆಲಸ ಮಾಡುವವನು ಎಂದು ಹೇಳಿದರು.