ಗರ್ಭಾವಸ್ಥೆಯಲ್ಲಿ ನೀವು ತಿನ್ನುವ ಪ್ರತಿಯೊಂದು ಆಹಾರ, ಜೀವನಶೈಲಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಕೆಲವೊಂದು ಆಹಾರಗಳನ್ನು ಕಟ್ಟುನಿಟ್ಟಾಗಿ ಸೇವಿಸುವಂತಿಲ್ಲ. ಅವುಗಳಲ್ಲಿ ಹಣ್ಣುಗಳು ಹೊರತಲ್ಲ. ಕೆಲವು ಹಣ್ಣುಗಳು ಭ್ರೂಣದಲ್ಲಿರುವ ಶಿಶುವಿಗೆ ನಕಾರಾತ್ಮಕ ಪರಿಣಾಮಗಳನ್ನು ತಂದೊಡ್ಡುತ್ತದೆ. ಅಷ್ಟೇ ಅಲ್ಲದೆ, ಗರ್ಭಪಾತವಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಈ ಕಾರಣದಿಂದ ಕೆಲವೊಂದು ಹಣ್ಣುಗಳನ್ನು ತಿನ್ನಬಾರದು.
ಪಪ್ಪಾಯಿ, ಅನಾನಸ್, ಕರಿ ದ್ರಾಕ್ಷಿ ಗರ್ಭಿಣಿಯರು ಏಕೆ ಸೇವಿಸಬಾರದು? ಇಲ್ಲಿದೆ ಮಾಹಿತಿ.

ಅನಾನಸ್
ಹಿರಿಯರು, ಗರ್ಭಿಣಿಯರಿಗೆ ಅನಾನಸ್ ಹಣ್ಣನ್ನು ಸೇವಿಸದಿರಲು ಸಲಹೆ ನೀಡುತ್ತಾರೆ. ಇದು ಗರ್ಭಪಾತವಾಗುತ್ತದೆ ಎಂಬ ಅಭಿಪ್ರಾಯ ಅವರಲ್ಲಿದೆ. ಇದು ವಾಸ್ತವವು ಹೌದು.
ಅನಾನಸ್ ಬ್ರೋಮೆಲಿನ್ ಎಂಬ ಅಂಶವನ್ನು ಹೆಚ್ಚಾಗಿ ಹೊಂದಿರುತ್ತದೆ. ಅಲ್ಲದೆ, ಅನಾನಸ್ ತಿನ್ನುವುದರಿಂದ ಗರ್ಭಾಶಯದ ಚೂಪಾದ ಸಂಕೋಚನಕ್ಕೆ ಕಾರಣವಾಗಬಹುದು. ಇದು ಗರ್ಭಪಾತಕ್ಕೆ ದಾರಿ ಮಾಡಿಕೊಡಬಹುದು. ಬ್ರೋಮೆಲಿನ್ ಪ್ರೋಟೀನ್ ಅನ್ನು ಒಡೆಯುವ ಕಿಣ್ವವಾಗಿದ್ದು, ಗರ್ಭಕಂಠವನ್ನು ಮೃದುಗೊಳಿಸಿ ಆರಂಭಿಕ ಹೆರಿಗೆಗೆ ಕಾರಣವಾಗುತ್ತದೆ. ಈ ಕಾರಣದಿಂದಲೇ ಗರ್ಭಾವಸ್ಥೆಯಲ್ಲಿ ಅನಾನಸ್ ಹಣ್ಣು ಸೇವಿಸಬಾರದು.
ಪಪ್ಪಾಯಿಗಳು
ಅನಾನಸ್ನಂತೆ ಪಪ್ಪಾಯಿ ಕೂಡ ಗರ್ಭದಲ್ಲಿರುವ ಮಗುವಿಗೆ ಹಾನಿಯನ್ನು ತಂದೊಡ್ಡುತ್ತದೆ. ಪಪ್ಪಾಯಿಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ರುಚಿಕರ ಹಣ್ಣಾಗಿದೆ. ಆದಾಗ್ಯೂ, ಗರ್ಭಿಣಿಯರಿಗೆಇದು ಸೂಕ್ತವಾದ ಹಣ್ಣಲ್ಲ. ಪಪ್ಪಾಯಿಯಲ್ಲಿನ ಲ್ಯಾಟೆಕ್ಸ್ ಅಂಶವು ಗರ್ಭಾಶಯದ ಸಂಕೋಚನ, ರಕ್ತಸ್ರಾವ ಮತ್ತು ಗರ್ಭಪಾತಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಭ್ರೂಣದ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ.
ಕಪ್ಪು ದ್ರಾಕ್ಷಿ
ಗರ್ಭಿಣಿಯರು ಕರಿ ದ್ರಾಕ್ಷಿಯನ್ನು ಸೇವಿಸಬಹುದೇ ಬೇಡವೇ ಎಂಬುದರ ಬಗ್ಗೆ ಸಂಶೋಧನೆಗಳು ಮುಂದುವರೆದಿದೆಯಾದರೂ, ಗರ್ಭಾವಸ್ಥೆಯಲ್ಲಿ ಕಪ್ಪು ದ್ರಾಕ್ಷಿಗಳನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ದ್ರಾಕ್ಷಿಗಳ ಬೆಳವಣಿಗೆಯಲ್ಲಿ ಹೆಚ್ಚಾಗಿ ಕೀಟನಾಶಕಗಳನ್ನು ಬಳಸುವ ಕಾರಣ ಭ್ರೂಣದಲ್ಲಿರುವ ಮಗುವಿಗೆ ಹಾನಿಯನ್ನು ಉಂಟು ಮಾಡಬಹುದು ಎಂದು ನಂಬಲಾಗಿದೆ.
ಹಾಗಾದರೆ ಯಾವ ಹಣ್ಣುಗಳನ್ನು ಗರ್ಭಿಣಿಯರು ತಿನ್ನಬೇಕು?
ಸೇಬುಗಳು
ಬಾಳೆಹಣ್ಣುಗಳು
ಕಿತ್ತಳೆಗಳು
ದಾಳಿಂಬೆ
ಮಾವಿನ ಹಣ್ಣುಗಳು
ಬೆರ್ರಿ ಹಣ್ಣುಗಳು
