ಬೆಂಗಳೂರು: ದೀಪಾವಳಿ ಅಂಗಡಿ ಕ್ಲೀನ್ ಮಾಡೋಕೆ ಹೇಳಿದ್ದ ಮಾಲಿಕ ಕ್ಲೀನ್ ನೆಪದಲ್ಲಿ ಅಂಗಡಿ ಯಲ್ಲಿ ಇದ್ದ ಚಿನ್ನಾಭರಣ ದೋಚಿದ್ದವರು ಬಂಧನವಾಗಿದೆ.
ಕೆಲಸ ಮಾಡ್ತಿದ್ದ ಜ್ಯುವೆಲರಿ ಶಾಪ್ ನಲ್ಲಿ ಕಳ್ಳತನ ಮಾಡಿ ಪುರಾತನ ಕಾಲದ ಚಿನ್ನಾಭರಣ, ಹಾಗೂ ಹಳೇ ನಾಣ್ಯ ಹಾಗೂ ನೋಟುಗಳನ್ನ ಕದ್ದಿದ್ದ ಕಳ್ಳರನ್ನ ಹಲಸೂರು ಗೇಟ್ ಪೊಲೀಸ್ರು ಬಂಧಿಸಿದ್ದಾರೆ.ದೀಪಾವಳಿ ಹಬ್ಬಕ್ಕೆ ಕ್ಲೀನ್ ಅಂಗಡಿ ಕ್ಲೀನ್ ಮಾಡಲು ಮಾಲಿಕರು ಕೆಲಸದವರಿಗೆ ಹೇಳಿದ್ರು.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಈ ವೇಳೆ ಕ್ಲೀನ್ ಮಾಡ್ತಿದ್ದೇವೆ ಎಂದು ಹೇಳಿ ಸಂಪೂರ್ಣವಾಗಿ ಅಂಗಡಿಯನ್ನೇದೋಚಿದ್ರು. ಹಲಸೂರು ಗೇಟ್ ಠಾಣ ವ್ಯಾಪ್ತಿಯ ಕಾಂಚನಾ ಜ್ಯುವೆಲರಿಯಲ್ಲಿ ಆರೋಪಿಗಳು ಕೆಲಸ ಮಾಡ್ತಿದ್ರು. ಅಂಗಡಿಯಲ್ಲಿಪುರಾತನ ಕಾಲದ ಚಿನ್ನಾಭರಣ ಹಾಗೂಹಣ ಕಳ್ಳತನ ಮಾಡಿದ್ರು.
ಸದ್ಯ ಆರೋಪಿಗಳಾದ ಖೇತರಾಮ್, ಸುರೇಶ್ ನ ಬಂಧಿಸಿ ಅರೋಪಿಗಳಿಂದ 1ಕೆಜಿ, 624 ಗ್ರಾಂ ಚಿನ್ನ, 6.455 ಕೆಜಿ ಬೆಳ್ಳಿ , ಹಳೆಯ ಒಂದು ಮತ್ತು ಎರಡು ರೂಪಾಯಿ ನೋಟುಗಳು,ವಾಚ್ ಗಳು, ಹಳೆ ನಾಣ್ಯಗಳು ಮತ್ತು ದ್ವಿಚಕ್ರ ವಾಹನ ಸೀಜ್ ಮಾಡಿದ್ದಾರೆ.