ನಮ್ಮ ದೇಶದಲ್ಲಿ 50 ವರ್ಷಗಳಲ್ಲಿ ಸುಮಾರು 30 ಪಟ್ಟು ಹೆಚ್ಚು ಪೀಡೆನಾಶಕ ಬಳಕೆಯಾಗುತ್ತಿದೆ. ಹೀಗೆ ಹೆಚ್ಚಿನ ಕೀಟನಾಶಕಗಳ ಬಳಕೆಯಿಂದ ಪರಿಸರ ವಿಷಪೂರಿತವಾಗುವುದಲ್ಲದೇ ಅವುಗಳ ಶೇಷ ಮಣ್ಣು, ನೀರು, ಕೃಷಿ ಉತ್ಪನ್ನಗಳಲ್ಲಿ ಉಳಿದುಕೊಳ್ಳುತ್ತದೆ. ಕೃಷಿ ಉತ್ಪನ್ನಗಳಲ್ಲಿ ಗರಿಷ್ಠ ಪರಿಮಿತಿಗಿಂದ ಸುಮಾರು 500 ಪಟ್ಟು ಹೆಚ್ಚು ಕೀಟನಾಶಕಗಳ ಅಂಶ ಶೇಷವಾಗಿ ಉಳಿದುಕೊಳ್ಳುತ್ತಿದೆ.
ಕೀಟನಾಶಕದ ಬಳಕೆ ಭಾರತದಲ್ಲಿ ಆರಂಭವಾದದ್ದು ಸ್ವಾತಂತ್ರ್ಯಾನಂತರ. ಕೀಟಬಾಧೆ ತಡೆಗಟ್ಟಿ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗಿದೆ. ಆದರೆ, ಕಾಲಕ್ರಮೇಣ ಕಿಟನಾಶಕಗಳ ಬಳಕೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿತು. ಪರಿಣಾಮ ಮಣ್ಣು, ನೀರು, ಗಾಳಿ ಕಲುಷಿತಗೊಂಡು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಇನ್ನೂ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳ ಬಳಕೆಗೆ ಮೊದಲು ಮಾಹಿತಿ ಪಡೆದುಕೊಳ್ಳುವುದು ಅವಶ್ಯ. ಮಿತವಾಗಿ ಬಳಸುವುದರಿಂದ ಅವುಗಳ ದುರ್ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು. ಕೀಟನಾಶಕ ಸಿಂಪರಣೆ ಮಾಡುವುದಕ್ಕಿಂತ ಮುಂಚೆ ಏನೇನು ಕ್ರಮಕೈಗೊಳ್ಳಬೇಕೆಂಬುದರ ಮಾಹಿತಿ ಇಲ್ಲಿದೆ.
- ನಾವು ಕೀಟ ನಾಶಕಗಳನ್ನು ಅಥವಾ ಪೀಡೆನಾಶಕಗಳನ್ನು ಬಳಸುವಾಗ ಪೀಡೆಗಳ ಸಂಖ್ಯೆ ಆರ್ಥಿಕ ಹಾನಿಯ ಮಟ್ಟಕ್ಕಿಂತ ಹೆಚ್ಚಿದೆಯೇ? ಎಂದು ಗಮನಿಸಬೇಕು, ಆರ್ಥಿಕ ಮಟ್ಟಕಿಂತ ಹೆಚ್ಚಿದ್ದಾಗ ಮಾತ್ರ ರಾಸಾಯನಿಕಗಳನ್ನು ಉಪಯೋಗಿಸಬೇಕು. ಇದರಿಂದ ಅನಾವಶ್ಯಕ ಖರ್ಚು ಮತ್ತು ಅನಾವಶ್ಯಕ ಬಳಕೆಯನ್ನು ತಡೆಯಬಹುದು.
- ಶಿಫಾರಸ್ಸು ಮಾಡಿದಂತಹ ಪೀಡೆನಾಶಕಗಳನ್ನು ನಿಗದಿಪಡಿಸಿರುವ ಪ್ರಮಾಣದಲ್ಲಿ, ನಿಗದಿತ ಬೆಳೆಗಳಿಗೆ ಮಾತ್ರ ಉಪಯೋಗಿಸಬೇಕು.
- ಇತರೆ ಹತೋಟಿ ಕ್ರಮಗಳನ್ನು ಬಳಸಿ ಕೀಟ ಹತೋಟಿ ಮಾಡಬೇಕು, ಸಾಧ್ಯವಾಗದ ಸಂದರ್ಭದಲ್ಲಿ ಪೀಡೆನಾಶಕಗಳ ಬಳಕೆ ಅಂತಿಮ ಆಯ್ಕೆಯಾಗಬೇಕು.
- ಅವೈಜ್ಞಾನಿಕವಾಗಿ ಸಿಂಪರಣೆ ಹಾಗೂ ವೈಜ್ಞಾನಿಕವಾಗಿ ಎರಡರಿಂದ ಮೂರು ಕೀಟನಾಶಕಗಳನ್ನು ಬೆರೆಸಿ ಸಿಂಪಡಿಸುವುದರಿಂದ ಹೆಚ್ಚಿನ ಹತೋಟಿ ಸಾಧ್ಯವಿಲ್ಲ ಹಾಗೂ ಇದರಿಂದ ಖರ್ಚುಹೆಚ್ಚಾಗುತ್ತದೆ.
- ಒಂದೇ ರೀತಿಯ ಕೀಟನಾಶಕವನ್ನು ಪದೇಪದೇ ಅದೇ ಬೆಳೆಗೆ ಉಪಯೋಗಿಸಬಾರದು.
- ಎರಡು ಸಿಂಪರಣೆಗಳ ಮಧ್ಯೆಎಂಟರಿಂದ ಹದಿನೈದು ದಿನಗಳ ಅಂತರವಿರಬೇಕು.
- ಕೀಟನಾಶಕಗಳ ಸುರಕ್ಷಿತ ಬಳಕೆ
- ಕೀಟನಾಶಕಗಳನ್ನು ಬೆಳಗ್ಗೆ ಅಥವಾ ಸಂಜೆ ಸಿಂಪರಣೆ ಮಾಡಬೇಕು.
- ಪೀಡೆನಾಶಕಗಳನ್ನು ಯಾವುದೇ ತಿನ್ನುವ ಆಹಾರಪದಾರ್ಥಗಳ ಜೊತೆ ಶೇಖರಣೆಮಾಡಬಾರದು.
- ಕೀಟನಾಶಕ ಬಳಸಿದ ನಂತರ ಉಳಿದ ಕೀಟನಾಶಕವನ್ನು ಅದೇ ಡಬ್ಬಿಯಲ್ಲಿ ಶೇಖರಿಸಿಡಬೇಕು.
- ಮಕ್ಕಳ ಕೈಗೆ ಸಿಗುವ ಹಾಗೆ ಕೀಟನಾಶಕಗಳನ್ನು ಶೇಖರಿಸುವುದು ಅಪಾಯ.
- ಚಿಕ್ಕಮಕ್ಕಳು ಮೈಮೇಲೆ ಗಾಯವಿರುವವರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರು ಸಿಂಪರಣೆ ಮಾಡಬಾರದು.
- ಸಿಂಪರಣೆ ಮಾಡುವಾಗ ಮೈ-ಕೈ ಮುಚ್ಚುವ ಹಾಗೆ ಕೋಟು,ಕನ್ನಡಕ, ಕೈಚೀಲ ಹಾಗೂ ಬೂಟುಗಳನ್ನು ಧರಿಸಿದರೆ ಉತ್ತಮ.
- ನಾಜಲ್ಗಳನ್ನು ಬಾಯಿಯಿಂದ ಊದಿ ಸರಿಪಡಿಸಲು ಯತ್ನಿಸಬಾರದು.
- ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಿಂಪಡಣೆ ಮಾಡಬಾರದು ಹಾಗೂ ಸಿಂಪಡಣೆ ಮಾಡುವಾಗ ಗಾಳಿಯ ವೇಗ ಕಡಿಮೆಇರಬೇಕು.
- ಸಿಂಪಡಿಸುವಾಗ ಆಹಾರ, ಹಣ್ಣು-ಹಂಪಲು, ಧೂಮಪಾನ, ಮದ್ಯಪಾನ ಮಾಡಬಾರದು.
- ಸಿಂಪರಣಾ ಉಪಕರಣಗಳನ್ನು ಸ್ವಚ್ಛನೀರಿ ನಿಂದತೊಳೆದು ಒಣಗಿಸಿ ಇಡಬೇಕು.
- ಬಾವಿಯಲ್ಲಿ, ಕೆರೆಯಲ್ಲಿ, ದನಕರು ನೀರು ಕುಡಿಯುವ ತೊಟ್ಟಿಯಲ್ಲಿ, ನಾಲೆಗಳಲ್ಲಿ ಸಿಂಪರಣಾ ಉಪಕರಣಗಳನ್ನು ತೊಳೆಯಬಾರದು.
- ಸಿಂಪಡಣೆ ಮಾಡಿದ ನಂತರ ಉಳಿದ ನೀರು ಮಿಶ್ರಿತ ರಾಸಾಯನಿಕವನ್ನು ಶೇಖರಿಸಿಡಬಾರದು.
- ಸಿಂಪರಣೆ ಮಾಡಿದ ಪ್ರದೇಶದಲ್ಲಿ ಹಸು, ಕರು, ಕುರಿ, ಮೇಕೆ ಮುಂತಾದ ರಾಸುಗಳನ್ನು ಮೇಯಲು ಬಿಡಬಾರದು.
- ಹೊಲದ ಒಂದು ಮೂಲೆಯಲ್ಲಿ ಆಳವಾದ ಗುಂಡಿತೋಡಿ ಅಲ್ಲಿಗೆ ಖಾಲಿಯಾದ ಕೀಟನಾಶಕಗಳ ಡಬ್ಬಿಯನ್ನು ಹಾಕಿ ಮಣ್ಣಿನಲ್ಲಿ ಮುಚ್ಚಬೇಕು.
- ತೆಂಗಿನಲ್ಲಿ ಕೀಟನಾಶಕಗಳ ಬೇರುಣಿಸುವ ಮುನ್ನ ಎಳನೀರು ಅಥವಾ ಕಾಯಿಗಳನ್ನು ಕೀಳಬೇಕು. ಬೇರುಣಿಸಿದ ನಂತರ 30ರಿಂದ 35 ದಿನಗಳವರೆಗೆ ಗಿಡದಿಂದ ತೆಂಗಿನಕಾಯಿ ಅಥವಾ ಎಳನೀರು ಕೀಳಬಾರದು.
- ಸಿಂಪಡಿಸಿದನಂತರ ಸ್ನಾನಮಾಡಬೇಕು, ನಂತರ ಶುಭ್ರ ಬಟ್ಟೆ ಧರಿಸಬೇಕು.
- ಸಿಂಪರಣೆ ಮಾಡಿದ ನಂತರ ಸುರಕ್ಷಿತ ಅವಧಿ ಮುಗಿಯುವವರೆಗೂ ಬೆಳೆ ಕಟಾವು ಮಾಡಬಾರದು,ಹಣ್ಣು-ಕಾಯಿ ಕೀಳಬಾರದು.
- ಕಣ್ಣಿಗೆ, ಮೈಮೇಲೆ, ಚರ್ಮದ