ಸತಿ-ಪತಿಗಳು ಚುಂಬನದ ವಿಷಯ ಬಂದಾಗ ಹಗುರವಾಗಿ ಪರಿಗಣಿಸುವಂತಿಲ್ಲ. “ಒಂದು ಕಿಸ್ ತಾನೇ, ಅದೇನು ಮಹಾ ಕೊಡುತ್ತೇನೆ ಬಿಡು” ಎಂದು ಆತುರಬಿದ್ದು ನೀವು ಸಂಗಾತಿಗೆ ಚುಂಬಿಸಲು ಹೋದಿರೋ ಖಂಡಿತ ಎಡವಟ್ಟು ಮಾಡಿಕೊಳ್ಳುತ್ತೀರಿ. ಪ್ರತಿಯೊಬ್ಬರಿಗೂ ಅತ್ಯುತ್ತಮ ಕಿಸ್ಸರ್ ಆಗುವ ಬಯಕೆಯಿರುತ್ತದೆ. ಈ ಮೂಲಕ ತಮ್ಮ ಪಾರ್ಟನರ್ ಅನ್ನು ಮೆಚ್ಚಿಸುವ ತವಕವೂ ಇರುತ್ತದೆ.
- ಚುಂಬನವೇ ಹಾಗೆ, ಅದೊಂದು ರೀತಿಯ ವಿಶೇಷ ಸಂತೋಷವನ್ನು ಉಂಟು ಮಾಡುತ್ತದೆ. ಕೆಲವರಿಗೆ ಲೈಂಗಿಕ ಕ್ರಿಯೆಗಿಂತ ಹೆಚ್ಚು ಚುಂಬನ ಸಂತೋಷವನ್ನು ನೀಡುವುದು. ಗೊಂದಲಗಳಿಂದ ಕೂಡಿರುವ ಮನಸ್ಸು ಕೂಡ ಚುಂಬನದ ವೇಳೆ ತಟಸ್ಥವಾಗುತ್ತದೆ.
- ಮುತ್ತಿಡುವಾಗ ನೋಡುವ ಮತ್ತು ತುಟಿಗಳ ಸಂವೇದನೆ ಎರಡನ್ನು ಮೆದುಳು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗದ ಕಾರಣ ಇಬ್ಬರ ಕಣ್ಣುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ.
- ಸಂಗಾತಿಯ ಸಮ್ಮಿಲನ, ಹೆಚ್ಚು ಕೂಡುಕೊಳ್ಳುವಿಕೆ ಬಯಸಲು ಆತ್ಮೀಯತೆಯ ಅನುರಾಗ ಸಾಧಿಸಲು.
- ಶಾಶ್ವತ ಬೆಸುಗೆ, ಸುಂದರ, ಸಂತೋಷಕರ ದಾಂಪತ್ಯ ಸದಾ ಇರಲೆಂದು
- ಪರಸ್ಪರ ಬಾಯಿಂದ ಬಾಯಿಗೆ ದಂಪತಿಗಳು, ಪ್ರೇಮಿಗಳು ಮುತ್ತಿಡುವ ಸಂದರ್ಭದಲ್ಲಿ ಬಹುತೇಕವಾಗಿ ಕಣ್ಣು ಮುಚ್ಚಿಕೊಳ್ಳುತ್ತಾರೆ. ಏಕೆನ್ನುತ್ತೀರಾ ಅದಕ್ಕೆ ಕಾರಣಗಳು ಇಲ್ಲಿವೆ.
- ಇಬ್ಬರ ಭಾವನೆಗಳು ಬೇರೆಡೆ ಹೋಗಬಾರದು ಹಾಗೂ ಮಿಲನದ ಆಸಕ್ತಿ ಹೆಚ್ಚಾಗುವುದಕ್ಕೆ
- ಮೆದುಳು ಕಣ್ಣುಗಳನ್ನು ಮುಚ್ಚಿ ಭಾವಪರವಶತೆಯನ್ನು ಪರಿಪೂರ್ಣವಾಗಿ ಗ್ರಹಿಸಲು ಸೂಚನೆಗಳನ್ನು ನೀಡುತ್ತದೆ. ಈ ಸಂದರ್ಭದಲ್ಲಿ ತಾನಾಗಿಯೆ ಇಬ್ಬರ ಕಣ್ಣುಗಳು ಮುಚ್ಚಿಕೊಳ್ಳುತ್ತವೆ.
- ಚುಂಬಕದ ಸಂದರ್ಭದಲ್ಲಿ ಮೆದುಲುಗಳಿಗೆ ಅನಗತ್ಯವಾದ ವಿಷಯಗಳು ಸೇರಿಕೊಳ್ಳಬಾರದು ಹಾಗೂ ಪರಿಪೂರ್ಣ ಗಮನ ಒಂದೇ ಕಡೆ ಇರಲಿ ಎಂಬುದಕ್ಕಾಗಿ.
- ಚುಂಬನವೆನ್ನುವುದು ಉದ್ರೇಕಿಸುವಂತಹ ಕ್ರಿಯೆಯಾಗಿದೆ. ಕೋಮಲ, ಶೃಂಗಾರ ಮತ್ತು ಭಾವನಾತ್ಮಕವಾಗಿರುವುದೇ ಚುಂಬನ. ಇದನ್ನು ಸಂಪೂರ್ಣವಾಗಿ ಅನುಭವಿಸುವ ಸಲುವಾಗಿ ಕಣ್ಣುಗಳನ್ನು ಮುಚ್ಚಬೇಕಾಗುತ್ತದೆ.
