ದೆಹಲಿ: ಮನೆಯ ಗೇಟ್ ಹಾಕದ್ದಕ್ಕೆ ರೊಚ್ಚಿಗೆದ್ದ ಮಹಿಳೆಯೊಬ್ಬಳು ನೆರೆಮನೆಯವನ ಕಿವಿ ಕಚ್ಚಿ (Agra Woman Bites Neighbour’s Ear) ಬಳಿಕ ಪೀಸ್ ನುಂಗಿದ ಪ್ರಸಂಗವೊಂದು ಆಗ್ರಾದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಕಿವಿ ಕಳೆದುಕೊಂಡ ವ್ಯಕ್ತಿಯನ್ನು ರಾಮ್ವೀರ್ ಬಘೇಲ್ ಎಂದು ಗುರುತಿಸಲಾಗಿದ್ದು, ಇವರು ಸೈಕಲ್ ರಿಕ್ಷಾ ಓಡಿಸುತ್ತಿದ್ದಾರೆ. ರಾಖಿ, ಆರೋಪಿ ಮಹಿಳೆ. ವ್ಯಕ್ತಿಯ ಕುಟುಂಬ ಹಾಗೂ ಮಹಿಳೆಯ ಕುಟುಂಬ ನ್ಯೂ ಆಗ್ರಾ ಪ್ರದೇಶದ ವಸತಿಗೃಹದಲ್ಲಿ ಬಾಡಿಗೆಗೆ ವಾಸವಾಗಿದೆ. ರಾಖಿಯು ಇತರ ಬಾಡಿಗೆದಾರರೊಂದಿಗೆ ಪ್ರತಿದಿನವೂ ಜಗಳ ಮಾಡುತ್ತಿದ್ದಳು ಎಂದು ರಾಮ್ವೀರ್ ಆರೋಪಿಸಿದ್ದಾರೆ.
ನಡೆದಿದ್ದೇನು..?: ಮಾರ್ಚ್ 4 ರಂದು ಬಾಡಿಗೆದಾರರ ಮಗನಿಗೆ ಪರೀಕ್ಷೆ ಇದೆ ಎಂದು ಹೇಳಿದರು. ಹೀಗಾಗಿ ಬೆಳಗ್ಗೆ 6 ಗಂಟೆಗೆ ಮಗುವನ್ನು ಬಿಡಲು ಹೊರಟರು. ಆದರೆ ತರಾತುರಿಯಲ್ಲಿ ಹೊರಟಿದ್ದರಿಂದ ಅವರು ಗೇಟ್ ಮುಚ್ಚಲು ಮರೆತರು. ಹೀಗಾಗಿ ರಾಖಿ ರಾಮ್ವೀರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾಳೆ.
ಈ ವೇಳೆ ರಾಮ್ ವೀರ್ ಮಹಿಳೆಗೆ ತಿಳಿಹೇಳಲು ಪ್ರಯತ್ನಿಸಿದ್ದಾರೆ. ಇದರಿಂದ ಆಕೆ ಮತ್ತಷ್ಟು ಕೋಪಗೊಂಡಳು. ಇದೇ ಸಂದರ್ಭದಲ್ಲಿ ರಾಖಿ ಪತಿ ಸಂಜೀವ್ ಎಂಟ್ರಿ ಕೊಟ್ಟಿದ್ದಾನೆ. ಅಲ್ಲದೇ ಆತ ರಾಮ್ವೀರ್ನನ್ನು ಹಿಡಿದುಕೊಂಡನು. ಸಂಜೀವ್ ಹಿಡಿದುಕೊಳ್ಳುತ್ತಿದ್ದಂತೆಯೇ ಸಿಟ್ಟಲಿದ್ದ ರಾಖಿ, ರಾಮ್ವೀರ್ ಕಿವಿಯನ್ನು ಜೋರಾಗಿ ಕಚ್ಚಿದ್ದಾಳೆ. ಪರಿಣಾಮ ಕಿವಿಯ ತುಂಡು ಆಕೆಯ ಬಾಯಲ್ಲಿತ್ತು. ಈ ವೇಳೆ ಅದನ್ನು ಉಗುಳಲು ಹೇಳಿದ್ದಾರೆ. ಆದರೆ ಕೋಪದಿಂದಿದ್ದ ರಾಖಿ ಅದನ್ನು ನುಂಗಿಯೇ ಬಿಟ್ಟಿದ್ದಾಳೆ.