ಮೆಸೇಜಿಂಗ್ ಪ್ಲ್ಯಾಟ್ಫಾರ್ಮ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅಂತೆಯೇ, ಇದೀಗ ವಾಟ್ಸಾಪ್ ದೊಡ್ಡ ಗುಂಪುಗಳಿಗೆ ವಾಯ್ಸ್ ಚಾಟ್ ವೈಶಿಷ್ಟ್ಯವನ್ನು ಅಧಿಕೃತವಾಗಿ ಹೊರತರಲು ಪ್ರಾರಂಭಿಸಿದೆ. ಈ ಬಗ್ಗೆ ವಾಟ್ಸಾಪ್ ಮಾಹಿತಿ ನೀಡಿದೆ. ಈ ಹಿಂದೆ ಬೀಟಾದಲ್ಲಿ ಗುರುತಿಸಲಾಗಿದ್ದ ಈ ವೈಶಿಷ್ಟ್ಯವು, ಈಗಾಗಲೇ ಲಭ್ಯವಿರುವ ಗ್ರೂಪ್ ಚಾಟ್ ವೈಶಿಷ್ಟ್ಯಕ್ಕಿಂತ ಬಹುವಿಧದಲ್ಲಿ ಭಿನ್ನವಾಗಿದೆ.
ಸದ್ಯ ಇರುವ ಗ್ರೂಪ್ ಚಾಟ್ ವೈಶಿಷ್ಟ್ಯಕ್ಕಿಂತ ಹೊಸ ವಾಯ್ಸ್ ಚಾಟ್ ವೈಶಿಷ್ಟ್ಯ ಇನ್ನಷ್ಟು ಬಳಕೆದಾರ ಸ್ನೇಹಿಯಾಗಿದೆ. ಯಾಕೆಂದರೆ, ಗುಂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ರಿಂಗ್ ಮಾಡುವ ಗ್ರೂಪ್ ಚಾಟ್ ವೈಶಿಷ್ಟ್ಯಕ್ಕಿಂತ ಭಿನ್ನವಾಗಿ, ಇದರಲ್ಲಿ ಸಂದೇಶ ಸ್ವೀಕರಿಸುವವರಿಗೆ ರಿಂಗ್ ಮಾಡದೆ ಧ್ವನಿ ಚಾಟ್ ಅನ್ನು ಸದ್ದಿಲ್ಲದೆ ಪ್ರಾರಂಭಿಸಲಾಗುತ್ತದೆ. ಇದರಲ್ಲಿ ರಿಂಗಿಂಗ್ ಬದಲಿಗೆ ನೋಟಿಫಿಕೇಷನ್ ಹಾಗೂ ಇನ್-ಚಾಟ್ ಬಬಲ್ ಇರುತ್ತದೆ. ಅದು ಬಳಕೆದಾರರನ್ನು ಗ್ರೂಪ್ಗೆ ಸೇರಲು ಅನುವು ಮಾಡಿಕೊಡುತ್ತದೆ.
ವಾಯ್ಸ್ ಚಾಟ್ ಆರಂಭಿಸುವುದು ಹೇಗೆ…?
ವಾಯ್ಸ್ ಚಾಟ್ ಆರಂಭಿಸಬೇಕಾದರೆ ಬಳಕೆದಾರರು ಏನು ಮಾಡಬೇಕು ಎಂಬ ಬಗೆಗಿನ ಮಾಹಿತಿಯನ್ನು ಇಲ್ಲಿ ನೋಡೋಣ.
- ನೀವು ವಾಯ್ಸ್ ಚಾಟ್ ಪ್ರಾರಂಭಿಸಲು ಬಯಸುವ ಗ್ರೂಪ್ ಚಾಟ್ ತೆರೆಯಿರಿ
- ಸ್ಕ್ರೀನ್ನ ಮೇಲಿನ ಬಲ ಮೂಲೆಯಲ್ಲಿರುವ ವೇವ್ ಐಕಾನ್ ಅನ್ನು ಟ್ಯಾಪ್ ಮಾಡಿ
- ವಾಯ್ಸ್ ಚಾಟ್ ಆರಂಭಿಸಿ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ
- ವಾಯ್ಸ್ ಚಾಟ್ನಿಂದ ಹೊರಬರಲು ಎಕ್ಸ್ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ