ದೊಡ್ಮನೆಯ ಆಟ 6 ವಾರಗಳನ್ನ ಪೂರೈಸಿದೆ. ದಿನದಿಂದ ದಿನಕ್ಕೆ ರೋಚಕ ಹಂತಗಳನ್ನ ತಲುಪುತ್ತಿದೆ. ಇನ್ನೂ ಪ್ರತಿ ವಾರದಂತೆ ಈ ವಾರವೂ ಕೂಡ ಕಳಪೆ ಯಾರೆಂದು ತೀರ್ಮಾನಿಸಿ ಮನೆಮಂದಿ ಜೈಲಿಗಟ್ಟಿದ್ದಾರೆ. ನಟಿ ತನಿಷಾ ಕುಪ್ಪಂಡಗೆ (Tanisha Kuppanda) ಜೈಲೂಟ ಫಿಕ್ಸ್‌ ಆಗಿದೆ.

ದೊಡ್ಮನೆಯ ಆಟ ಜದರ್‌ದಸ್ತ್ ಆಗಿ ಮೂಡಿ ಬರುತ್ತಿದೆ. ಬಿಗ್ ಮನೆಯ (Bigg Boss House) ಡ್ರಾಮಾ ನೋಡೋಕೆ ಅಭಿಮಾನಿಗಳು ಪ್ರತಿ ದಿನ ಹಾಜರಿ ಹಾಕ್ತಿದ್ದಾರೆ. ಹೀಗಿರುವಾಗ ಮನೆಯ ಬಹುಮತದೊಂದಿಗೆ ಜೈಲಿಗೆ ಹೋಗಿದ್ದಾರೆ ತನಿಷಾ.

ಇಡೀ ವಾರದ ಟಾಸ್ಕ್, ಆ್ಯಕ್ಟಿವಿಟಿ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತನಿಷಾಗೆ ಕಳಪೆ ಹಣೆಪಟ್ಟಿ ಹೋಗಿದೆ. ಟಾಸ್ಕ್‌ವೊಂದರಲ್ಲಿ ನಿಧಾನವಾಗಿ ಆಟ ಆಡಿದ್ರು ಅನ್ನೋದನ್ನೇ ಕಾರಣ ಇಟ್ಟುಕೊಂಡು ವಿನಯ್, ನಮ್ರತಾ ಕಳಪೆ ಕೊಟ್ಟರು. ಅದಕ್ಕಾಗಿ ಮೂವರ ಪತ್ರ ಮಿಸ್ ಆಯ್ತು ಎಂದು ತನಿಷಾಗೆ ಟಾರ್ಗೆಟ್ ಮಾಡಿದ್ದಾರೆ ಮನೆಮಂದಿ.

ಸಂಗೀತಾ (Sangeetha Sringeri) ಜೊತೆಗಿನ ಜಗಳ, ಟಾಸ್ಕ್‌ನಲ್ಲಿ ಯಡವಟ್ಟು, ಇವೆಲ್ಲವೂ ಸೇರಿ ತನಿಷಾ ವಿರುದ್ಧ ಮನೆಮಂದಿ ನಿಂತಿದ್ದರು. ಮನೆಮಂದಿಯ ಬಹುಮತ ವೋಟ್‌ನಿಂದ ತನಿಷಾ ಜೈಲಿಗೆ ಹೋದರು. ಈ ವೇಳೆ, ತನಿಷಾ ಗಳಗಳನೇ ಅತ್ತಿದ್ದಾರೆ.

Share.