ಆಹಾರದಿಂದ ಹೊಟ್ಟೆ ಕೆಟ್ಟು ಹೋಗುವುದನ್ನು ಫುಡ್ ಪಾಯ್ಸನಿಂಗ್ ಎಂದು ಕರೆಯುತ್ತಾರೆ. ಫುಡ್ ಪಾಯ್ಸನಿಂಗ್ ಆದಾಗ ವಾಕರಿಕೆ, ವಾಂತಿ, ಭೇದಿ, ಕೆಲವರಿಗೆ ಜ್ವರ, ಹೊಟ್ಟೆ ನೋವು ಬರುವುದು ಸಾಮಾನ್ಯ. ಆಹಾರ ಸೇವನೆ ಮಾಡುವಾಗ ಸರಿಯಾಗಿ ಸ್ವಚ್ಛತೆ ಕಾಯ್ದುಕೊಳ್ಳದೇ ಇದ್ದರೆ ಈ ರೀತಿ ಆಗುತ್ತದೆ.
ತೂಕ ಇಳಿಕೆಯ ಬಗ್ಗೆ ಭರಪೂರ ವಿಡಿಯೋಗಳು ಬರುತ್ತವೆ. ಸಾಕಷ್ಟು ಸಲಹೆಗಳು ಬರುತ್ತವೆ. ಅವುಗಳಲ್ಲಿ ಇದು ಒಂದು ಶುಂಠಿ ಮತ್ತು ಲವಂಗಗಳನ್ನ ಮಿಶ್ರಣ ಮಾಡಿ ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ ಅನ್ನೋ ಸಲಹೆಯೊಂದು ಸದ್ಯ ಸೋಷಿಯಲ್ ಮಿಡಿಯಾಗಳಲ್ಲಿ ಹವಾ ಸೃಷ್ಟಿಸಿದೆ. ಅದು ಎಷ್ಟು ನಿಜ ಮತ್ತು ಎಷ್ಟು ಸುಳ್ಳು ಅನ್ನೋದನ್ನ ನಾವು ನಿಮಗೆ ಹೇಳ್ತೀವಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಮೊದಲು ಸಮಸ್ಯೆಯ ಮೂಲವನ್ನು ನೋಡಬೇಕಾಗುತ್ತದೆ.
ಬೀಟ್ರೂಟ್ ಅತೀಯಾಗಿ ತಿಂದ್ರೂ ಒಳ್ಳೆಯದಲ್ಲ: ಯಾರೆಲ್ಲಾ ತಿನ್ನಬಾರದು ಗೊತ್ತಾ?
- ಶುಂಠಿಯಲ್ಲಿ ನಿಮ್ಮ ವಾಕರಿಕೆ ಮತ್ತು ವಾಂತಿಯ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವಿದೆ. ಹೊಟ್ಟೆ ಕೆಟ್ಟು ಹೋದ ಸಂದರ್ಭದಲ್ಲಿ ಶುಂಠಿ ಸಾಕಷ್ಟು ಉಪಯೋಗಕ್ಕೆ ಬರಲಿದೆ.
- ಫುಡ್ ಪಾಯಿಸೋನಿಂಗ್ ಸಮಸ್ಯೆಗೆ ಶುಂಠಿ ರಾಮಬಾಣವಾಗಿ ಕೆಲಸ ಮಾಡಲಿದೆ. ನೀವು ಬೇಕೆಂದರೆ ಶುಂಠಿ ಚಹಾ ತಯಾರು ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು.
- ಆದರೆ ಇದಕ್ಕೆ ಸಿಹಿಯ ಪ್ರಮಾಣಕ್ಕೆ ಸಕ್ಕರೆ ಬಳಕೆ ಮಾಡದೆ ಒಂದು ಟೇಬಲ್ ಚಮಚ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡಬಹುದು. ವಾಕರಿಕೆ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಲು ಇದು ಅನುಕೂಲಕರವಾಗಿ ಕೆಲಸ ಮಾಡಲಿದೆ.
- ನಿಂಬೆಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇನ್ಫಾಮೇಟರಿ, ಆಂಟಿ ಫಂಗಲ್, ಆಂಟಿ ಮೈಕ್ರೋಬಿಯಲ್ ಗುಣ ಲಕ್ಷಣಗಳ ಪ್ರಮಾಣ ತುಂಬಾ ಹೆಚ್ಚಾಗಿ ಕಂಡು ಬರುತ್ತದೆ.
- ಅಷ್ಟೇ ಅಲ್ಲದೆ ನಿಂಬೆಹಣ್ಣಿನಲ್ಲಿ ವಿಟಮಿನ್-ಸಿ ಅಂಶದ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತು ಇದರಲ್ಲಿ ನಿಸರ್ಗದತ್ತವಾಗಿ ಔಷಧಿಯ ರೂಪದಲ್ಲಿ curcuminಅಂಶ ಕೂಡ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಹೊಟ್ಟೆಯ ಭಾಗಕ್ಕೆ ಉಂಟಾಗಿರುವ ಸೋಂಕು ದೂರವಾಗುತ್ತದೆ.
- ಫುಡ್ ಪಾಯ್ಸನಿಂಗ್ ಸಮಸ್ಯೆಯಿಂದ ಹೊರಬರಲು ಇದೊಂದು ಅದ್ಭುತ ಉಪಾಯ. ನಿಮಗೆ ಬೇಕೆಂದರೆ ಒಂದು ಲೋಟ ನೀರಿಗೆ ಒಂದು ಟೀ ಚಮಚ ನಿಂಬೆ ಹಣ್ಣಿನ ರಸ, ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪ ಬೆರೆಸಿ ದಿನದಲ್ಲಿ ಎರಡು ಅಥವಾ
- ಮೂರು ಬಾರಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದ ಬಹಳ ಬೇಗನೆ ನಿಮಗೆ ಹೊಟ್ಟೆನೋವು ಮತ್ತು ಅದಕ್ಕೆ ಸಂಬಂಧಪಟ್ಟ ರೋಗಲಕ್ಷಣಗಳು ದೂರವಾಗುತ್ತವೆ.