ಕರಿಮೆಣಸು ಹೂ ಬಿಟ್ಟ ನಂತರ ಕಾಳುಗಳು ಸಂಪೂರ್ಣವಾಗಿ ಬೆಳೆಯಲು 7-8 ತಿಂಗಳು ತೆಗೆದುಕೊಳ್ಳುತ್ತದೆ.ಭಾರತದ ಬಯಲು ಪ್ರದೇಶದಲ್ಲಿ ಬೆಳೆಯನ್ನು ಡಿಸೆಂಬರ್-ಜನವರಿಯಲ್ಲ್ಹಿ ಕೊಯಿಲು/ಕಟಾವ್ರ ಮಾಡಲಾಗುವುದು ಮತ್ತು ಪಶ್ಚಿಮ ಘಟ್ಟಗಳ ಹೆಚ್ಚಿನ ಶ್ರೇಣಿಯಲ್ಲಿ / ಗುಡ್ಡಗಾಡು ಪ್ರದೇಶಗಳಲ್ಲಿ ಜನವರಿ-ಏಪ್ರಿಲ್ ವರೆಗೆ ಕೊಯಿಲು ಮಾಡಲಾಗುತ್ತದೆ. ಕೊಯಿಲನ್ನು ಕಾಳುಗಳು ಸರಿಯಾಗಿ ಬಲಿಯುವಿಕೆಯ ಹಂತದಲ್ಲಿ ಮಾಡುವುದರಿಂದ ಉತ್ತಮ ಬಣ್ಣ ಹಾಗೂ ಅಧಿಕ ಒಣ ಉತ್ಪನ್ನವನ್ನು ಪಡೆಯಲು ಅತ್ಯವಶ್ಯಕವಾಗಿದೆ. ಒಂದು ಅಥವಾ ಎರಡು ಕಾಳುಗಳು ಹಳದಿ ಬಣ್ಣಕ್ಕೆ ತಿರುಗಿದಾದ ಕೊಯಿಲನ್ನು ಪ್ರಾರಂಭಿಸಬಹುದು.
ಕಾಳುಮೆಣಸಿನ ಗೊಂಚಲನ್ನು ಕೈಯಿಂದ ಬಿಡಿಸಿ ಚೀಲದಲ್ಲಿ ಸಂಗ್ರಹಿಸಲಾಗುತ್ತದೆ. ಒಂದು ಕಂಬದ ಬಿದಿರಿನ ಏಣಿಯನ್ನು ಸಾಮಾನ್ಯವಾಗಿ ಕೊಯಿಲು ಮಾಡಲು ಬಳಸಲಾಗುತ್ತದೆ. ಕಾಳುಗಳನ್ನು ತುಂಬಾ ಬಲಿಯಲು ಬಿಟ್ಟರೆ ನೆಲಕ್ಕೆ ಬಿದ್ದು ಮತ್ತು ಪಕ್ಷೆಗಳು ತಿಂದು ಇಳುವರಿ ಕ್ಷೀಣಿಸುತ್ತದೆ. ಕೊಯಿಲು ಮಾಡಲಾದ ಗೊಂಚಲನ್ನು ಸ್ವಚ್ಚವಾದ ಗೋಣಿ ಚೀಲದಲ್ಲಿ ಸಂಗ್ರಹಿಸಲಾಗುವುದು. ನೆಲಕ್ಕೆ ಬಿದ್ದ ಗೊಂಚಲನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸ್ವಚ್ಚಮಾಡಿ, ಬೇರೆಯದರೊಂದಿಗೆ ಸೇರಿಸಬೇಕು.

ಬಿಳಿಮೆಣಸು
ಚೆನ್ನಾಗಿ ಬಲಿತಿರುವ ಹಸಿರು ಮೆಣಸಿನ ಕಾಳುಗಳಿಂದ ಬಿಳಿಮೆಣಸನ್ನು ಮಾಡಲಾಗುತ್ತದೆ. ಬಲಿತಿರುವ ಹಸಿರು ಕಾಳುಗಳನ್ನು ನೀರಿನಲ್ಲಿ 7 ರಿಂದ 8 ದಿನಗಳ ಕಾಲ ನೆನೆಸಿ, ಉಜ್ಜಿ ಸಿಪ್ಪೆ ತೆಗೆದು, ಚೆನ್ನಾಗಿ ತೊಳೆದು ನಂತರ ತೇವಾಂಶವು ಶೇ. 10 ರಷ್ಟು ಇರುವಂತೆ ಒಣಗಿಸಬೇಕು. ನೀರನ್ನು ಪ್ರತಿದಿನ ಬದಲಾವಣೆ ಮಾಡುತ್ತಿರಬೇಕು. ಹಣ್ಣಾದ ಮೆಣಸನ್ನು ವಿಶಿಷ್ಟ ವಿಧಾನದಲ್ಲಿ ನೆನೆಹಾಕುವುದು ಮತ್ತು ಹಬೆಯಲ್ಲಿ ನೆನೆಸುವುದು ಮುಂತಾದ ವಿಧಾನಗಳಿಂದ ಬಿಳಿಮೆಣಸನ್ನು ತಯಾರಿಸಬಹುದು.
ತಾಜಾ ಹಣ್ಣುಗಳನ್ನು ಒಕ್ಕಣೆ ಮಾಡಿದ ನಂತರ ಒಣಗಿಸುವ ಮೊದಲು ಬಿಸಿ ನೀರಿನಲ್ಲಿ ಒಂದು ನಿಮಿಷ ಕಾಲ ಅದ್ದುವುದರಿಂದ ಉತ್ತಮ ಗುಣಮಟ್ಟದ ಹಾಗೂ ಆಕರ್ಷಕ ಕಪ್ಪು ಬಣ್ಣ ಬೆಳವಣಿಗೆಯಾಗಿ ಒಣಗುವ ಅವಧಿಯನ್ನು ಕಡಿಮೆ ಮಾಡಿತ್ತದೆ.
ಈ ಕ್ರಿಯೆಯಿಂದಾಗುವ ಹಲವಾರು ಉಪಯೋಗಗಳು:
* ಉತ್ತಮ ಗುಣಮಟ್ಟದ ಹಾಗೂ ಆಕರ್ಷಕ ಕಪ್ಪು ಬಣ್ಣ ಬೆಳವಣೆಗೆಯಾಗಿ ಒಣಗುವ ಅವಧಿಯನ್ನು ಕಡಿಮೆ ಮಾಡುತ್ತದೆ.
* ಒಣಗಿಸಿದ ನಂತರ ಏಕರೂಪದ ಬಣ್ಣದ ಕರಿಮೆಣಸು ದೊರೆಯುತ್ತದೆ.
* ಸೂಕಾಾಣುಜೀವಿಯ ಸಂಖ್ಯೆಯನ್ನು ಕೀಣಿಸುತದೆ.
* ಒಣಗುವ ಅವಧಿಯನ್ನು 5-6 ದಿನದಿಂದ 3-4 ದಿನಕ್ಕೆ ಕಡಿಮೆಗೊಳಿಸುತ್ತದೆ.
* ಕಾಳುಗಳಿಗೆ ಅಂಟಿದ ಧೂಳು ಮತ್ತು ಹೊರ ಕಲ್ಮಶಗಳನ್ನು ತೆಗೆಯುತ್ತದೆ.
ಒಕ್ಕಣೆ ಬಿಸಿನೀರಿನಲ್ಲಿ ಅದ್ದಿ ತೆಗೆಯುವುದು (ಬ್ಲಾಂಚಿಂಗ್), ಒಣಗಿಸುವುದು, ಸ್ವಚ್ಚಮಾಡುವ್ರದು, ವರ್ಗೀಕರಣ ಹಾಗು ಚೀಲದಲ್ಲಿ ತುಂಬಿಡುವುದು ಕಾಳುಮೆಣಸಿನ ವಿವಿಧ ಕೊಯ್ಲೋತ್ತರ ಕಾರ್ಯಗಳಾಗಿವೆ. ಈ ಎಲ್ಲಾ ಕಾರ್ಯಗಳ ಸಮಯದಲ್ಲಿ ಅತ್ಯಂತ ಹೆಚ್ಚಿನ ಎಚ್ಚರವಹಿಸುವ್ರುದರಿಂದ ಉತ್ತಮ ಗುಣಮಟ್ಟವನ್ನು ಕಾಪಾಡಬಹುದು.
