ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಪೊಲೀ ಸರು ಜಪ್ತಿ ಮಾಡಿದ್ದಾರೆ. ಓಮಿಕ್ರಾನ್ ನಿಯಂತ್ರಣದ ಹಿನ್ನೆಲೆ 10 ದಿನಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಡಿಸೆಂಬರ್ 28 ರಿಂದ ಜನವರಿ 1 ರ ಬೆಳ್ಳಿಗ್ಗಿನ ಜಾವದ ತನಕ ಬರೋಬ್ಬರಿ 318 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಪಶ್ಚಿಮ ವಿಭಾಗದಲ್ಲಿ 104 ದ್ವಿಚಕ್ರ ವಾಹನ,
6 ಆಟೋಗಳು, 3 ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಉತ್ತರ ವಿಭಾಗದಲ್ಲಿ 12 ದ್ವಿಚಕ್ರ ವಾಹನ, 3 ಆಟೋಗಳು, 17 ಕಾರುಗಳು, ಅದರಂತೆ ಈಶಾನ್ಯದಲ್ಲಿ 48 ದ್ವಿಚಕ್ರ ವಾಹನ, 1 ಆಟೋ, 8 ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಕರ್ಫ್ಯೂ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ನಗರದ ಸುತ್ತ ಪೊಲೀಸರು ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದರು ಎಂದು ಹೇಳಲಾಗಿದೆ.

