ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ನಿಂದಾದ ರೇಣುಕಾಸ್ವಾಮಿಯ ಭೀಕರ ಕೊಲೆಯ ಒಂದೊಂದೇ ಫೋಟೊಗಳು ರಿವೀಲ್ ಆಗುತ್ತಿದೆ. ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದು ಹಾಗೆ ಈ ಚಾರ್ಜ್ಶೀಟ್ನಲ್ಲಿ ಇರೋ ಮಾಹಿತಿಯ ವಿಚಾರಗಳು ಈಗ ಒಂದೊಂದಾಗಿಯೇ ಹೊರಬರುತ್ತಾ ಇವೆ. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಏನು? ಅವರು ಎಷ್ಟು ಬಾರಿ ಹಲ್ಲೆ ಮಾಡಿದ್ದರು ಎನ್ನುವ ವಿಚಾರ ಕೂಡ ರಿವೀಲ್ ಆಗಿದೆ.
ರೇಣುಕಾ ಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶದ ಬಗ್ಗೆ ಪವನ್ ಬಳಿ ಪವಿತ್ರಾ ಹೇಳಿಕೊಂಡಿದ್ದರು. ಮೆಸೇಜ್ ಬಗ್ಗೆ ದರ್ಶನ್ಗೆ ತೋರಿಸಿದ್ದಾಗ ಅವರನ್ನು ಎತ್ತಿಕೊಂಡು ಬರಲು ದರ್ಶನ್ ಸೂಚನೆ ನೀಡಿದ್ದರು. ದರ್ಶನ್ ಆಣತಿಯಂತೆ ರೇಣುಕಾ ಸ್ವಾಮಿಯನ್ನು ಎತ್ತಿಕೊಂಡು ಬಂದು ಪಟ್ಟಣಗೆರೆ ಶೆಡ್ನಲ್ಲಿ ಇಡಲಾಯಿತು. ಶೆಡ್ನಲ್ಲಿ ಇಟ್ಟ ಬಗ್ಗೆ ದರ್ಶನ್ಗೆ ಮಾಹಿತಿ ರವಾನೆ ಆಗಿತ್ತು. ನೇರವಾಗಿ ಪವಿತ್ರಾ ಮನೆಗೆ ತೆರಳಿದ ದರ್ಶನ್ ಅವರನ್ನು ಪಿಕ್ ಮಾಡಿಕೊಂಡು ಶೆಡ್ಗೆ ಬಂದರು.
ದರ್ಶನ್ ಬಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಾರೆ. ರಿಬ್ ಮುರಿದು ಹಾಕುವ ಅವರು, ಮರ್ಮಾಂಗಕ್ಕೆ ಹೊಡೆಯುತ್ತಾರೆ. ಲಾಠಿನಲ್ಲಿಯೂ ದರ್ಶನ್ ಹಲ್ಲೆ ಮಾಡಿದ್ದಾರೆ. ಪವಿತ್ರಾ ಚಪ್ಪಲಿಯಿಂದ ಹಲ್ಲೆ ಮಾಡುತ್ತಾರೆ. ಆ ಬಳಿಕ ದರ್ಶನ್ ಮತ್ತೆ ಹಲ್ಲೆ ಮಾಡುತ್ತಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಇದೆ.