ಸುಂದರವಾಗಿ ಕಾಣ ಬಯಸುವ ಪ್ರತಿಯೊಬ್ಬರು ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ನಾವು ಸುಂದರವಾಗಿ ಕಾಣಬೇಕೆಂದರೆ ಕೂದಲು ಬಲವಾಗಿರಬೇಕು. ಹೆಣ್ಣು – ಗಂಡು ಎಂಬ ಬೇಧವಿಲ್ಲದೇ ಎಲ್ಲರೂ ಕೂದಲ ರಕ್ಷಣೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಅದರಲ್ಲೂ ವಿಶೇಷವಾಗಿ ಕೂದಲಿಗೆ ಎಣ್ಣೆ ಹಚ್ಚುವುದನ್ನು ಎಂದಿಗೂ ಮರೆಯಬಾರದು. ನಿಮ್ಮ ನೆತ್ತಿಯ ಪ್ರಕಾರಕ್ಕೆ ಅನುಗುಣವಾಗಿ ತೈಲಗಳನ್ನು ಆಯ್ಕೆ ಮಾಡಬೇಕು.
IPL 2024: ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಮುಂದುವರೆಸಿದ ಗ್ಲೆನ್ ಮ್ಯಾಕ್ಸ್ವೆಲ್..!
ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲನ್ನು ರಕ್ಷಿಸುತ್ತದೆ. ಹಾಗಾಗಿ ವಾರಕ್ಕೆ ಎರಡು ಬಾರಿ ಎಣ್ಣೆ ಹಚ್ಚುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಮಂದಿ ಕೂದಲು ಜಿಡ್ಡಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದರಿಂದ ಧೂಳು ಮತ್ತು ಕಲ್ಮಶಗಳಂತಹ ಕಣಗಳು ಸಹ ಕೂದಲಿಗೆ ಅಂಟಿಕೊಳ್ಳುತ್ತದೆ. ಇದು ಚರ್ಮದ ರಂಧ್ರಗಳ ಮೂಲಕ ಚರ್ಮಕ್ಕೆ ಆಳವಾಗಿ ತೂರಿಕೊಳ್ಳುತ್ತದೆ. ಆದ್ದರಿಂದ ಈ ಸಮಸ್ಯೆ ನಿವಾರಣೆಗೆ ಕೂದಲಿಗೆ ಎಣ್ಣೆ ಹಚ್ಚಬೇಕು. ಇದು ಕೂದಲಿನ ಬೆಳಣಿಗೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ
ಎಣ್ಣೆಗಳು ನೈಸರ್ಗಿಕವಾಗಿ ಆರ್ಧ್ರಕವಾಗಿವೆ. ಈ ಎಣ್ಣೆಗಳನ್ನು ತ್ವಚೆಗೆ ಹಚ್ಚುವುದರಿಂದ ಅವು ಹೇಗೆ ಮೃದುವಾಗಿ ಮತ್ತು ತೇವಾಂಶದಿಂದ ಕೂಡಿರುತ್ತದೆಯೋ ಅದೇ ರೀತಿ ಕೂದಲಿಗೆ ಹಚ್ಚುವುದರಿಂದ ಕೂದಲು ಒಣಗುವ ಬದಲು ಬೇರುಗಳನ್ನು ಗಟ್ಟಿಯಾಗಿಸುತ್ತದೆ. ಎಣ್ಣೆ ಹಚ್ಚುವುದು ಕೂದಲಿನ ಬೇರುಗಳನ್ನು ಪೋಷಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಹಚ್ಚುವುದರಿಂದ ನೆತ್ತಿಗೆ ತೇವಾಂಶ ಸಿಗುತ್ತದೆ ಮತ್ತು ಅದು ಒಣಗದಂತೆ ಕಾಪಾಡುತ್ತದೆ. ಸೋಂಕಿನಿಂದ ರಕ್ಷಿಸುತ್ತದೆ. ಕೂದಲಿನ ಬುಡವನ್ನು ಸ್ಟ್ರಾಂಗ್ ಮಾಡುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಚರ್ಮದ ರಂಧ್ರಗಳಿಂದ ತೇವಾಂಶದ ನಷ್ಟವನ್ನು ತಡೆಯುತ್ತದೆ
ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಅದು ಆರೋಗ್ಯಕರವಾಗಿರುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಬಿಳಿ ಕೂದಲು ಇರುವುದಿಲ್ಲ. ಕೂದಲಿಗೆ ಹಚ್ಚುವ ಎಣ್ಣೆಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನೆತ್ತಿ ಮತ್ತು ಕೂದಲಿನ ಹೊರಪೊರೆಗಳನ್ನು ಬಲಪಡಿಸುತ್ತದೆ
ತಲೆಹೊಟ್ಟುಗೆ ಮುಖ್ಯ ಕಾರಣವೆಂದರೆ ನೆತ್ತಿಯಲ್ಲಿ ತೇವಾಂಶದ ಕೊರತೆ. ಕೆಲವು ಶಿಲೀಂಧ್ರಗಳ ಸೋಂಕುಗಳು ತಲೆಹೊಟ್ಟನ್ನು ಉಂಟು ಮಾಡುತ್ತವೆ. ಇದು ಚರ್ಮದ ಕಿರಿಕಿರಿಯನ್ನು ಹೆಚ್ಚಿಸದೆ ಕೂದಲಿನ ಸಮಸ್ಯೆಗಳನ್ನು ತಡೆಯುತ್ತದೆ. ಆದ್ದರಿಂದ, ಸಾಕಷ್ಟು ಎಣ್ಣೆಯನ್ನು ಹಚ್ಚುವುದು ಉತ್ತಮ.
ಕೂದಲು ಉದುರುವಿಕೆಗೆ ಮುಖ್ಯ ಕಾರಣ ಕೂದಲು ದೌರ್ಬಲ್ಯ. ಸಾಕಷ್ಟು ಪೋಷಣೆ ಇದ್ದರೂ, ರಕ್ತ ಪೂರೈಕೆಯಾಗದಿದ್ದರೆ, ಕೂದಲಿನ ಕಿರುಚೀಲಗಳು ಕ್ಷೀಣಿಸುತ್ತದೆ. ಕೂದಲಿನ ಬೇರುಗಳಿಗೆ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ
ಎಣ್ಣೆಯಲ್ಲಿರುವ ಪೋಷಕಾಂಶಗಳು ಕೂದಲನ್ನು ಬಲಪಡಿಸುತ್ತದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ವಾರಕ್ಕೆ ಎರಡು ಬಾರಿಯಾದರೂ ಕೂದಲಿಗೆ ಎಣ್ಣೆ ಹಚ್ಚುವುದು ಒಳ್ಳೆಯದು. ಆದರೆ ಎರಡು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡಿ. ಆದರೆ ರಾತ್ರಿ ಪೂರ್ತಿ ಬಿಟ್ಟು ಮರುದಿನ ಸ್ನಾನ ಮಾಡುವುದು ಉತ್ತಮವಲ್ಲ ಎಂಬುವುದನ್ನು ನೆನಪಿಟ್ಟುಕೊಳ್ಳಿ.