ವೀಳ್ಯದೆಲೆ ಕೇವಲ ಪಾನ್ ಮಾಡಿ ಜಗಿಯುವುದಕ್ಕೆ ಮಾತ್ರವಲ್ಲ, ಇದು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ ಎಂದು ನಿಮಗೆತಿಳಿದಿದೆ. ಅದೇ ರೀತಿ ತುಳಸಿ ಬೀಜಗಳೊಂದಿಗೆ ವೀಳ್ಯದೆಲೆಯನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ತುಳಿಸಿ ಬೀಜ ಹಾಗೂ ವೀಳ್ಯದೆಲೆ ತಿನ್ನೋದರ ಪ್ರಯೋಜನಗಳೇನು ಅನ್ನೋದನ್ನು ತಿಳಿಯೋಣ .
ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ
ವೀಳ್ಯದೆಲೆಯೊಂದಿಗೆ ತುಳಸಿ ಬೀಜಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯನ್ನು ಸುಧಾರಿಸಬಹುದು. ವಾಸ್ತವವಾಗಿ, ವೀಳ್ಯದೆಲೆಯೊಂದಿಗೆ ತುಳಸಿ ಬೀಜಗಳನ್ನು ತಿನ್ನುವುದು ನಿಮ್ಮ ಲಾಲಾರಸ ಗ್ರಂಥಿಯನ್ನು ಸಕ್ರಿಯವಾಗಿಡಲು ಸಹಾಯಕವಾಗಿದೆ. ಈ ಗ್ರಂಥಿಯು ಆಹಾರವನ್ನು ಸಣ್ಣ ತುಂಡುಗಳಾಗಿ ವಿಭಜಿಸಲು ಕೆಲಸ ಮಾಡುತ್ತದೆ, ಇದು ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಲ್ಲದೇ ಗ್ಯಾಸ್ಟ್ರಿಕ್ ಅಲ್ಸರ್ ಹೋಗಲಾಡಿಸಲು ಇದು ಸಹಕಾರಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ಯಾವುದೇ ಸಣ್ಣಪುಟ್ಟ ರೋಗಗಳು ನಮ್ಮನ್ನು ಆಕ್ರಮಿಸುವುದಿಲ್ಲ. ವೀಳ್ಯದೆಲೆ ಮತ್ತು ತುಳಸಿ ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿವೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರೊಂದಿಗೆ ನೀವು ಅನೇಕ ಸಾಮಾನ್ಯ ರೋಗಗಳನ್ನು ದೂರವಿಡಬಹುದು.
ಶೀತದಿಂದ ಪರಿಹಾರ
ವೀಳ್ಯದೆಲೆ ಮತ್ತು ತುಳಸಿ ಬೀಜಗಳ ಮಿಶ್ರಣವು ಶೀತ ಮತ್ತು ಜ್ವರದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ವಾಸ್ತವವಾಗಿ, ವೀಳ್ಯದೆಲೆಯು ತಲೆನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ತುಳಸಿ ಬೀಜಗಳಲ್ಲಿರುವ ಗುಣಲಕ್ಷಣಗಳು ಗಂಟಲು ನೋವು ಮತ್ತು ಕಫದಿಂದ ಪರಿಹಾರವನ್ನು ನೀಡುತ್ತದೆ.
ಒಸಡುಗಳ ಊತವನ್ನು ಕಡಿಮೆ ಮಾಡುತ್ತದೆ
ವೀಳ್ಯದೆಲೆ ಮತ್ತು ತುಳಸಿ ಬೀಜಗಳು ಒಸಡುಗಳ ಉರಿಯೂತವನ್ನು ಕಡಿಮೆ ಮಾಡಲು ಉಪಕಾರಿಯಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಊತ ಮತ್ತು ಗಡ್ಡೆಗಳನ್ನು ಕಡಿಮೆ ಮಾಡುತ್ತದೆ. ನಿಮಗೆ ಒಸಡುಗಳು ಊದಿಕೊಂಡಿದ್ದರೆ, ಪ್ರತಿದಿನ ತುಳಸಿ ಬೀಜದ ಜೊತೆ ವೀಳ್ಯದೆಲೆಗಳನ್ನು ಅಗಿಯಿರಿ.
ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ವೀಳ್ಯದೆಲೆಯು ದೈಹಿಕ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇದು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ. ನೀವು ದೈಹಿಕವಾಗಿ ದುರ್ಬಲರಾಗಿದ್ದರೆ, ನಿಮ್ಮ ಆಹಾರದಲ್ಲಿ ನಿಯಮಿತವಾಗಿ ವೀಳ್ಯದೆಲೆ ಮತ್ತು ತುಳಸಿ ಬೀಜಗಳನ್ನು ಸೇರಿಸಿ ಸೇವಿಸಿ.