ಸಿಹಿಗೆಣಸು ತನ್ನದೇ ಆದ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಆಹಾರದಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಆಲೂಗಡ್ಡೆ, ಕ್ಯಾರೆಟ್ ಮುಂತಾದ ಬೇರು ಗಡ್ಡೆಗಳೊಂದಿಗೆ ಹೆಚ್ಚು ಸಾಮಾನ್ಯವಾಗಿದೆ. ಇದನ್ನು ಸಿಹಿ ಆಲೂಗಡ್ಡೆ ಎಂತಲೂ ಕರೆಯಲಾಗುತ್ತದೆ.
ಮನುಷ್ಯರಿಗಷ್ಟೇ ಅಲ್ಲ ಬೆಕ್ಕುಗಳಿಗೆ ಹಾರ್ಟ್ ಅಟ್ಯಾಕ್ ಆಗಲು ಇದೇ ಕಾರಣ!?
ಚಳಿಗಾಲದಲ್ಲಿ ಕಾಡುವ ಅನೇಕ ಸಮಸ್ಯೆಗಳನ್ನು ಸಿಹಿ ಗೆಣಸು ನಿವಾರಿಸುತ್ತದೆ. ಹಾಗಂತ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸಿಹಿ ಗೆಣಸನ್ನು ತಿನ್ನಬಾರದು. ಹಾಗಾದ್ರೆ ಯಾರು ಸಿಹಿ ಗೆಣಸನ್ನು ತಿನ್ನಬಾರದು ಮತ್ತು ಏಕೆ ತಿನ್ನಬಾರದು ಎಂದು ತಿಳಿಯೋಣ ಬನ್ನಿ.
ಕಿಡ್ನಿ ಸಮಸ್ಯೆ: ಸಿಹಿ ಗೆಣಸಿನಲ್ಲಿ ಆಕ್ಸಲೇಟ್ ಇರುತ್ತದೆ. ಇದು ಕಿಡ್ನಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಹೀಗಾಗಿ ಈಗಾಗಲೇ ಕಿಡ್ನಿ ಸಮಸ್ಯೆಯನ್ನು ಹೊಂದಿರುವವರು ಸಿಹಿ ಗೆಣಸನ್ನು ತಿನ್ನಬಾರದು. ಏಕೆಂದರೆ ಇದು ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ
ಮಧುಮೇಹಿಗಳು: ಸಿಹಿ ಗೆಣಸಿನಲ್ಲಿ ನೈಸರ್ಗಿಕ ಸಕ್ಕರೆಯ ಅಂಶ ಇರುತ್ತದೆ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ಆಲೂಗಡ್ಡೆಗೆ ಹೋಲಿಸಿದರೆ ಸಿಹಿ ಗೆಣಸು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿದೆ. ಹಾಗಾಗಿ ಮಧುಮೇಹ ಹೊಂದಿರುವವರು ಮಿತವಾಗಿ ಸಿಹಿಗೆಣಸನ್ನು ಸೇವಿಸಬೇಕು.
ಕಡಿಮೆ ರಕ್ತದೊತ್ತಡ: ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವುದರಿಂದ ಇದನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆಯಾಗಬಹುದು. ಅನೇಕ ಮಂದಿಗೆ ಸಿಹಿ ಗೆಣಸು ರುಚಿಕರವೆನಿಸಿದರೂ, ಕಡಿಮೆ ಬಿಪಿ ಇರುವವರು ಅಥವಾ ಬಿಪಿ ಔಷಧಿಗಳನ್ನು ತೆಗೆದುಕೊಳ್ಳುವವರು ಸಿಹಿ ಗೆಣಸಿನ ಸೇವನೆಯನ್ನು ತಪ್ಪಿಸಬೇಕು.
ಜೀರ್ಣಕ್ರಿಯೆ ಸಮಸ್ಯೆಗಳು: ಸಿಹಿ ಗೆಣಸಿನಲ್ಲಿ ನಾರಿನಂಶ ಹೇರಳವಾಗಿದೆ. ಹಾಗಾಗಿ ಇದನ್ನು ಹೆಚ್ಚಾಗಿ ತಿನ್ನುವುದರಿಂದ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವಿಕೆ ಅಥವಾ ಅಜೀರ್ಣದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡಬಹುದು. ಕಳಪೆ ಜೀರ್ಣಕ್ರಿಯೆ ಅಥವಾ ಜೀರ್ಣಕಾರಿ ಸಮಸ್ಯೆ ಇರುವವರು ಸಿಹಿ ಗೆಣಸನ್ನು ಕಡಿಮೆ ತಿನ್ನಬೇಕು.
ಹೈಪರ್ ಥೈರಾಯ್ಡಿಸಮ್: ಸಿಹಿ ಗೆಣಸು ಥೈರಾಯ್ಡ್ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಥೈರಾಯ್ಡ್ ಗ್ರಂಥಿಯ ಸಮಸ್ಯೆ ಇರುವವರು ಸಿಹಿ ಗೆಣಸನ್ನು ತಿನ್ನಬಾರದು.
ತೂಕ ಇಳಿಕೆ ಮತ್ತು ಅಲರ್ಜಿ ಪೀಡಿತರು: ಸಿಹಿ ಗೆಣಸಿನಲ್ಲಿ ಕ್ಯಾಲೋರಿ ಅಧಿಕವಾಗಿದೆ. ಇವುಗಳು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದ್ದರೂ, ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಕ್ಯಾಲೊರಿ ಹೆಚ್ಚಾಗಬಹುದು ಮತ್ತು ತೂಕ ಕೂಡ ಹೆಚ್ಚಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಮೊದಲು ಸಿಹಿ ಗೆಣಸು ತಿನ್ನುವುದನ್ನು ನಿಲ್ಲಿಸಿ.
ಚರ್ಮದ ಅಲರ್ಜಿಗಳು: ಸಿಹಿ ಗೆಣಸನ್ನು ತಿಂದ ನಂತರ ಕೆಲವರು ಕೆಲವು ರೀತಿಯ ಅಲರ್ಜಿಯನ್ನು ಹೊಂದಬಹುದು. ಚರ್ಮದಲ್ಲಿ ಕೆಂಪು, ತುರಿಕೆ, ಉಸಿರಾಟದ ಸಮಸ್ಯೆ ಮುಂತಾದ ರೋಗಲಕ್ಷಣಗಳು ಕಂಡುಬಂದರೆ, ತಕ್ಷಣವೇ ಸಿಹಿ ಗೆಣಸು ತಿನ್ನುವುದನ್ನು ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ.