ಆಧುನಿಕ ಯುಗದಲ್ಲಿ ಹೆಚ್ಚಾಗಿ ಜನರು ತಡವಾಗಿ ಎದ್ದೇಳುವುದು, ರಾತ್ರಿ ತಡರಾತ್ರಿ ತನಕ ಪಾರ್ಟಿಯೆಂದು ಸುತ್ತಾಡಿ, ನಡುರಾತ್ರಿ ಬಳಿಕ ಮಲಗುವುದು ಅಭ್ಯಾಸ ಮಾಡಿಕೊಂಡಿರುವರು. ನಾವು ಹಾಗೆ ನಮ್ಮ ಹಿರಿಯರ ದಿನಚರಿಯನ್ನು ಗಮನಿಸಿದರೆ, ಅವರು ಪ್ರತಿನಿತ್ಯವೂ ಬೇಗನೆ ಎದ್ದೇಳುತ್ತಿದ್ದರು ಮತ್ತು ರಾತ್ರಿ ಕೂಡ ಬೇಗ ಮಲಗುತ್ತಿದ್ದರು.
Bagalakote: ವಿದ್ಯಾರ್ಥಿಗಳ ತಿನ್ನುವ ಅನ್ನದಲ್ಲಿ ಹುಳಗಳ ಪತ್ತೆ!ಪೋಷಕರು ಆಕ್ರೋಶ!
ಹೀಗಾಗಿ ಅವರ ಆರೋಗ್ಯ ಕೂಡ ಉತ್ತಮ ಸ್ಥಿತಿಯಲ್ಲಿ ಇರುತ್ತಿತ್ತು. ಆದರೆ ಈಗ ಮೊಬೈಲ್, ಲ್ಯಾಪ್ ಟಾಪ್ ಮುಂದೆ ತಡರಾತ್ರಿ ತನಕ ಕಾಲ ಕಳೆಯುವ ಕಾರಣದಿಂದಾಗಿ ಬೇಗನೆ ಮಲಗುವವರ ಸಂಖ್ಯೆಯು ತುಂಬಾ ಕಡಿಮೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿ ಯೂಸ್ ಮಾಡುತ್ತಿದ್ದು, ಮೊಬೈಲ್ ನೋಡದೆ ನಿದ್ದೆ ಬರುವುದಿಲ್ಲ ಎನ್ನುವ ವಿಚಾರವನ್ನು ತಲೆಗೆ ಅಂಟಿಸಿಕೊಂಡು ಬಿಟ್ಟಿರುತ್ತಾರೆ. ಹಾಗಾಗಿ ಮಲಗುವ ಮುನ್ನ ಮೊಬೈಲ್ ನೋಡಲೇ ಬೇಕು ಎನ್ನುವ ಅಲಿಖಿತ ನಿಯಮ ರೂಪಿಸಿಕೊಂಡು ಬಿಟ್ಟಿರುತ್ತಾರೆ. ಆದರೆ, ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡಿಕೊಂಡೆ ನಿದ್ದೆಗೆ ಜಾರುವ ಅಭ್ಯಾಸ ಖಂಡಿತಾ ಸರಿಯಲ್ಲ. ಇದರಿಂದ ಐದು ಸಮಸ್ಯೆಗಳು ನಿಮ್ಮನ್ನು ಕಾಡುವುದಕ್ಕೆ ಎಡೆಮಾಡಿಕೊಡುತ್ತದೆ.
ತಡರಾತ್ರಿಯವರೆಗೆ ಮೊಬೈಲ್ ಫೋನ್ನಲ್ಲಿ ಚಲನಚಿತ್ರ, ಸಿರೀಸ್, ರೀಲ್ಸ್ ನೋಡುವ ಅಭ್ಯಾಸ ಅಥವಾ ಫೋನ್ ಅನ್ನು ನಿರಂತರವಾಗಿ ಬಳಸುವುದು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಉಂಟಾಗುವ 5 ಪ್ರಮುಖ ಆರೋಗ್ಯ ಅಪಾಯಗಳ ಬಗ್ಗೆ ಮಾಹಿತಿ ಇಲ್ಲಿದೆ.
1. ಕಣ್ಣಿನ ಆಯಾಸ ಮತ್ತು ಬೆಳಕಿನ ಮೇಲೆ ಪರಿಣಾಮ:
ಮೊಬೈಲ್ ಪರದೆಯ ನೀಲಿ ಬೆಳಕು ಕಣ್ಣುಗಳಿಗೆ ತುಂಬಾ ಅಪಾಯಕಾರಿ. ರಾತ್ರಿಯಲ್ಲಿ ಕತ್ತಲೆಯಲ್ಲಿ ಫೋನ್ ನೋಡುವುದರಿಂದ ಕಣ್ಣಿನ ಕಿರಿಕಿರಿ,ಆಯಾಸ ಮತ್ತು ದೃಷ್ಟಿ ಸಮಸ್ಯೆ ಉಂಟಾಗುತ್ತದೆ.ಈ ಅಭ್ಯಾಸವು ದೀರ್ಘಾವಧಿಯಲ್ಲಿ ದೃಷ್ಟಿಯನ್ನು ಕಡಿಮೆ ಮಾಡುತ್ತದೆ.
2. ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ:
ರಾತ್ರಿಯಲ್ಲಿ ಚಲನಚಿತ್ರಗಳು ಅಥವಾ ವೀಡಿಯೊಗಳನ್ನು ನೋಡುವುದು ನಿದ್ರೆಯ ಮಾದರಿಗಳ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಮೊಬೈಲ್ಗಳಿಂದ ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಆಳವಾದ ಮತ್ತು ಶಾಂತಿಯುತ ನಿದ್ರೆಯನ್ನು ತಡೆಯುತ್ತದೆ.
ಮಾನಸಿಕ ಒತ್ತಡ ಮತ್ತು ಆತಂಕ:
ಗಂಟೆಗಟ್ಟಲೆ ಮೊಬೈಲ್ ಫೋನ್ ನಲ್ಲಿ ಕಳೆಯುವುದರಿಂದ ಮಾನಸಿಕ ಒತ್ತಡ ಮತ್ತು ಆತಂಕ ಹೆಚ್ಚುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ ಮತ್ತು ಮನಸ್ಸನ್ನು ಆಯಾಸದ ಸ್ಥಿತಿಗೆ ಕೊಂಡೊಯ್ಯುತ್ತದೆ.
ಬೆನ್ನುಮೂಳೆ ಮತ್ತು ಕತ್ತಿನ ಸಮಸ್ಯೆಗಳು:
ಮೊಬೈಲ್ ಫೋನ್ ಅನ್ನು ಹೆಚ್ಚು ಹೊತ್ತು ಬಾಗಿ ನೋಡುವುದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದನ್ನು ‘ಟೆಕ್-ನೆಕ್’ ಸಮಸ್ಯೆ ಎಂದು ಕರೆಯಲಾಗುತ್ತದೆ.ಇದು ನೋವು ಮತ್ತು ಸ್ನಾಯು ಸೆಳೆತವನ್ನು ಉಂಟುಮಾಡಬಹುದು.