ತಜ್ಞರ ಪ್ರಕಾರ ಇಂದಿಗೂ ಕೂಡ ನಾವು ಸರಿಯಾಗಿ ನೀರು ಕುಡಿಯುವ ಅಭ್ಯಾಸವನ್ನು ಕಲಿತಿಲ್ಲವಂತೆ. ಕೇಳಿದರೆ ಆಶ್ಚರ್ಯ ಎನಿಸುತ್ತದೆ ಅಲ್ಲವೇ? ಹೆಚ್ಚಾಗಿ ನೀರು ಕುಡಿಯಬೇಕು ಎಂದ ತಕ್ಷಣ ನಿಂತುಕೊಂಡು ನೀರು ಕುಡಿಯಬೇಕು ಎಂದು ಯಾರೂ ಹೇಳಿಲ್ಲ. ಏಕೆಂದರೆ ಇದು ತಪ್ಪಾದ ಅಭ್ಯಾಸ. ನಾವು ಕೂಡ ಇದನ್ನು ಅಭ್ಯಾಸ ಮಾಡಿಕೊಂಡು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೂ ಸಹ ಇದೇ ರೀತಿ ನೀರು ಕುಡಿಯುವಂತೆ ಆಜ್ಞಾಪನೆ ಮಾಡುತ್ತೇವೆ. ಆದರೆ ನಾವು ಮಾಡುವ ತಪ್ಪು ನಮಗೆ ಕೊನೆಯಾಗಬೇಕಲ್ಲವೇ?
ಎಂದಿಗೂ ಅಷ್ಟೇ ನಿಂತುಕೊಂಡು ನೀರು ಕುಡಿಯಬಾರದು
ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ನಾವೇನಾದರೂ ತಿಂಡಿ ತಟ್ಟೆಯನ್ನು ಕೈಯಲ್ಲಿ ಹಿಡಿದು ಓಡಾಡಿಕೊಂಡು ಅಥವಾ ನಿಂತುಕೊಂಡು ಆಹಾರ ಸೇವನೆ ಮಾಡುತ್ತಿದ್ದರೆ ಮನೆಯಲ್ಲಿರುವ ದೊಡ್ಡವರು ಒಂದು ಕಡೆ ಅಚ್ಚುಕಟ್ಟಾಗಿ ಕುಳಿತು ಆಹಾರ ಸೇವನೆ ಮಾಡಲು ಹೇಳುತ್ತಾರೆ. ಇದು ಕುಡಿಯುವ ನೀರಿಗೂ ಸಹ ಅನ್ವಯಿಸುತ್ತದೆ. ಆಯುರ್ವೇದ ಪದ್ಧತಿಯ ಪ್ರಕಾರ, ನಾವು ನಿಂತುಕೊಂಡು ನೀರು ಕುಡಿಯುವ ಅಭ್ಯಾಸವನ್ನು ರೂಡಿ ಮಾಡಿಕೊಂಡಿರುವುದರಿಂದ,
ನೀರಿನಲ್ಲಿರುವ ಅನೇಕ ಪೌಷ್ಟಿಕ ಸತ್ವಗಳು ನೀರಿನ ಸಮೇತ ನೇರವಾಗಿ ನಮ್ಮ ಕೆಳಗಿನ ಹೊಟ್ಟೆಗೆ ಹೋಗಿ ತಲುಪುತ್ತವೆ. ಆದ್ದರಿಂದ ನಿಂತುಕೊಂಡು ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಬಹಳಷ್ಟು ತೊಂದರೆ ಉಂಟು ಮಾಡುವುದಲ್ಲದೆ ನಮ್ಮನ್ನು ಸಹ ಹಲವಾರು ಕಾಯಿಲೆಗಳಿಗೆ ಗುರಿ ಮಾಡಿ ನಮ್ಮ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡದೆ ಇರಲು ಪ್ರೇರೇಪಿಸಿದಂತಾಗುತ್ತದೆ.
ಅನ್ನನಾಳದ ಸಮಸ್ಯೆ:
ಸಮಾನ್ಯವಾಗಿ ನಿಂತ ಭಂಗಿಯಲ್ಲಿ ನೀರು ಕುಡಿಯುತ್ತೇವೆ. ಈ ವೇಳೆ ನೀರು ಅನ್ನನಾಳದ ಮೂಲಕ ವೇಗವಾಗಿ ಹರಿಯುತ್ತದೆ. ಇದರಿಂದ ಅನ್ನನಾಳದ ಸ್ಪಿಂಕ್ಟರ್ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಕ್ಷೀಪ್ರ ಗತಿಯಲ್ಲಿ ನೀರು ದೇಹ ಸೇರುವುದರಿಂದ ನರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕುಳಿತುಕೊಂಡು ನೀರು ಕುಡಿಯುವುದು ಉತ್ತಮ.
ಕಿಡ್ನಿಗಳಿಗೆ ಹಾನಿ;
ನಿಂತು ನೀರು ಕುಡಿಯುವುದರಿಂದ ಕಿಡ್ನಿಯು ಕೆಲವು ಬಾರಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ನೀರು ಒಮ್ಮೆಲೆ ದೇಹ ಸೇರುವುದರಿಂದ ಕಿಡ್ನಿಯು ನೀರನ್ನು ಸರಿಯಾಗಿ ಸೋಸುವುದಿಲ್ಲ. ಇದರಿಂದ ಮೂತ್ರನಾಳಗಳಿಗೆ ಕಲ್ಮಷ ಪ್ರವೇಶಿಸಿ ರಕ್ತದೊಂದಿಗೆ ಮಿಶ್ರಣವಾಗಬಹುದು. ಇದರಿಂದ ಕಿಡ್ನಿಗೆ ಹಾನಿಯುಂಟಾಗಿ, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.
ಹೊಟ್ಟೆಯ ನೋವು:
ನಿಂತ ಭಂಗಿಯಲ್ಲಿ ನೀರು ಕುಡಿದರೆ ರಭಸವಾಗಿ ಅನ್ನನಾಳ ಹಾಗೂ ಹೊಟ್ಟೆ ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲೀಯ ಜಠರ ರಸವನ್ನು ಮಿಶ್ರಣಗೊಳಿಸಬಹುದು. ಇದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಹೊಟ್ಟೆ ನೋವಿಗೂ ಕಾರಣವಾಗಬಹುದು.
ಬಾಯಾರಿಕೆ ತಣಿಯುವುದಿಲ್ಲ:
ನಿಂತು ನೀರು ಕುಡಿಯುವುದಕ್ಕಿಂತಲೂ ಕೂತು ನೀರು ಕುಡಿದರೆ ಬೇಗ ಬಾಯಾರಿಕೆ ತಣಿಯುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಹೀಗಾಗಿ ಕೂತು ನೀರು ಕುಡಿದರೆ ದಣಿವು ಕೂಡ ಶೀಘ್ರ ನಿವಾರಣೆಯಾಗುತ್ತದೆ.
ಸಂಧಿವಾತ ಸಮಸ್ಯೆ:
ನಿಂತುಕೊಂಡು ನೀರು ಕುಡಿದಾಗ ದೇಹದಲ್ಲಿನ ದ್ರವಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ಸಂಧಿವಾತದ ಸಮಸ್ಯೆ ನಿಮ್ಮಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.