ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ಬ್ರಷ್ ಮಾಡಿ ತಮ್ಮ ದಿನವನ್ನು ಆರಂಭಿಸುತ್ತಾರೆ. ಏಕೆಂದರೆ ದಿನವಿಡೀ ಬಹಳಷ್ಟು ಆಹಾರ ಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಸೇವಿಸಲಾಗಿರುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡಿ ಮಲಗುತ್ತಾರೆ. ಆದರೆ ಕೇವಲ ಕೆಲವರು ಮಾತ್ರ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸವನ್ನು ಹೊಂದಿರುತ್ತಾರೆ.
ರಾತ್ರಿ ಹಲ್ಲುಜೋದ್ರಿಂದ ಹಲ್ಲಿನ ಹುಳುಕು, ದುರ್ವಾಸನೆ ಸೇರಿದಂತೆ ಹಲವು ಸಮಸ್ಯೆಗಳನ್ನು ತಡೆಯುತ್ತದೆ. ಹಾಗಾದರೆ ರಾತ್ರಿ ಹಲ್ಲುಜ್ಜುವುದು ಹಾಗೂ ಹೃದಯದ ಆರೋಗ್ಯ ಎರಡಕ್ಕೂ ಏನು ಸಂಬಂಧವಿದೆ ಅದಕ್ಕೆ ಉತ್ತರ ಇಲ್ಲಿದೆ. ರಾತ್ರಿ ನಿದ್ರೆ ಬಂದುಬಿಡ್ತು ಹಾಗಾಗಿ ಹಲ್ಲುಜ್ಜಲು ಮರೆತುಹೋಯಿತು ಎಂಬುವ ಸಬೂಬು ನೀಡಬೇಡಿ ಇದು ದೀರ್ಘಾವಧಿಯಲ್ಲಿ ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡಬಹುದು, ಹೃದಯಾಘಾತಕ್ಕೂ ಕಾರಣವಾಗಬಹುದು.
ಡಾ. ಕುನಾಲ್ ಸೂದ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಒಂದು ರೀಲ್ ಹಂಚಿಕೊಂಡಿದ್ದು, ಅದರಲ್ಲಿ ನಿಮ್ಮ ಬಾಯಿಯ ಆರೋಗ್ಯ ಎಷ್ಟು ಮುಖ್ಯ ಎಂಬುದರ ಬಗ್ಗೆ ವಿವರಿಸಿದ್ದಾರೆ. ರಾತ್ರಿ ವೇಳೆ ಹಲ್ಲುಜ್ಜುವುದನ್ನು ನಿರ್ಲಕ್ಷಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ರಾತ್ರಿ ಹಲ್ಲುಜ್ಜುವುದುನ್ನು ಕೇವಲ ಹುಳುಕು ಹಲ್ಲಾಗುವುದನ್ನು ತಪ್ಪಿಸುವುದಕ್ಕಾಗಿ ಅಲ್ಲ. ಅದಕ್ಕಿಂತ ಹೆಚ್ಚು ಅಪಾಯವನ್ನು ತಂದುಕೊಳ್ಳುವ ಸಾಧ್ಯತೆ ಇದೆ
ನಿಮ್ಮ ಬಾಯಿಯಿಂದ ಬ್ಯಾಕ್ಟೀರಿಯಾಗಳು ನಿಮ್ಮ ರಕ್ತನಾಳವನ್ನು ಪ್ರವೇಶಿಸಬಹುದು, ಇದು ಕಾಲಾನಂತರದಲ್ಲಿ ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಬಹುದು. ಉರಿಯೂತ ಉಂಟು ಮಾಡಬಹುದು. ಮೌಖಿಕ ನೈರ್ಮಲ್ಯವು ನೇರವಾಗಿ ಹೃದಯ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸದಿದ್ದರೂ ಬಲವಾದ ಸಂಬಂಧವಿದೆ ಎಂಬುದನ್ನು ಹೇಳಿದ್ದಾರೆ.