ಹಸಿವಾದಾಗ ಆಹಾರಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆ ತುಂಬುತ್ತದೆ ಏನೋ ನಿಜ. ಈ ಎಲ್ಲಾ ಆಹಾರಗಳನ್ನು ಒಟ್ಟಿಗೆ ತಿಂದರೆ, ಹುಳಿತೇಗು ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ಎದುರಾಗುತ್ತದೆ.
ಚಹಾದೊಂದಿಗೆ ಈ ಆಹಾರವನ್ನು ಸೇವಿಸಬೇಡಿ:ಕೆಲವರಿಗೆ ಚಹಾದೊಂದಿಗೆ ಏನಾದರೂ ತಿನ್ನುವ ಅಭ್ಯಾಸವಿರುತ್ತದೆ. ಹಾಗಂತ ನಟ್ಸ್, ಹಸಿರು ಎಲೆಗಳ ತರಕಾರಿಗಳು ಹಾಗೂ ಧಾನ್ಯಗಳಂತಹ ಆಹಾರ ಪದಾರ್ಥಗಳನ್ನು ಮುಟ್ಟಲೇ ಬೇಡಿ.
![Demo](https://ainlivenews.com/wp-content/uploads/2023/12/spoorthi-1.jpg)
ಅಯೋಡಿನ್ ಭರಿತ ಆಹಾರದೊಂದಿಗೆ ಇದರ ಸೇವನೆ ಆದಷ್ಟು ತಪ್ಪಿಸಿ: ಥೈರಾಯ್ಡ್ ಸಮಸ್ಯೆಯಿರುವವರು ಈ ಎಲೆಕೋಸು, ಹೂಕೋಸು ಹಾಗೂ ಕೋಸುಗಡ್ಡೆಯನ್ನು ಅಯೋಡಿನ್ ಭರಿತ ಆಹಾರಗಳೊಂದಿಗೆ ಅಪ್ಪಿ ತಪ್ಪಿಯೂ ಸೇವಿಸಲೇ ಬೇಡಿ. ಸೇವನೆ ಮಾಡಿದರೆ ಥೈರಾಯ್ಡ್ ಗ್ರಂಥಿಯ ಕಾರ್ಯವು ನಿಧಾನವಾಗಿ ಸಮಸ್ಯೆಯು ಅತಿರೇಕಕ್ಕೆ ತಿರುಗುವ ಸಾಧ್ಯತೆಯಿರುತ್ತದೆ.
ಬಾದಾಮಿ, ಕಡಲೆಕಾಯಿ, ಸೋಯಾಬೀನ್ ಮತ್ತು ವಾಲ್ನಟ್ ಗಳಲ್ಲಿ ಫೈಟಿಕ್ ಆಮ್ಲ ಇರುತ್ತವೆ. ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸುವ ಅಭ್ಯಾಸವಿರಲಿ. ಇಲ್ಲದಿದ್ದರೆ ಈ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ನಿಂಬೆ ಸೇರಿದಂತೆ ಇನ್ನಿತ್ತರ ಹಣ್ಣುಗಳನ್ನು ಈ ಹಾಲಿನೊಂದಿಗೆ ಸೇವಿಸುವುದನ್ನು ಆದಷ್ಟು ತಪ್ಪಿಸಿ.
ಅಪ್ಪಿ ತಪ್ಪಿಯೂ ಈ ಆಹಾರವನ್ನು ಒಟ್ಟಿಗೆ ಸೇವಿಸುವಂತಿಲ್ಲ. ಹಾಲಿನಿಂದಲೇ ಮೊಸರನ್ನು ತಯಾರಿಸುತ್ತೇವೆಯಾದರೂ ಒಟ್ಟಿಗೆ ಸೇವನೆ ಮಾಡುವುದರಿಂದ ಅಡ್ಡಪರಿಣಾಮಗಳೇ ಹೆಚ್ಚು. ಇದರಿಂದಾಗಿ ಗ್ಯಾಸ್ಟಿಕ್ ಮತ್ತು ಅಜೀರ್ಣದ ಸಮಸ್ಯೆಗಳು ಉಂಟಾಗುತ್ತದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)