ಪ್ರತಿದಿನ ನಾವು ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೆ ಅನೇಕ ಕೆಲಸಗಳನ್ನು ಮಾಡುತ್ತೇವೆ. ಉಗುರು ಕತ್ತರಿಸುವುದರಿಂದ ಹಿಡಿದು ಮಲಗುವವರೆಗೆ ಮಾಡಬೇಕಾದ ಕೆಲಸಗಳಲ್ಲಿ ಸ್ನಾನವೂ ಒಂದು. ಆದರೆ ಈಗ ನಮ್ಮ ಪೂರ್ವಜರು ಮತ್ತು ವೇದ ಶಾಸ್ತ್ರಗಳು ಸ್ನಾನದ ಬಗ್ಗೆ ಏನು ಹೇಳಿದೆ ಅಂತ ಗೊತ್ತಿದ್ಯಾ?
ಕಾಂಗ್ರೆಸ್ ಇರುವವರೆಗೆ ಈ ದೇಶಕ್ಕೆ ನೆಮ್ಮದಿ ಇಲ್ಲ: ಛಲವಾದಿ ನಾರಾಯಣಸ್ವಾಮಿ!
ಹಿಂದೂ ಧರ್ಮದಲ್ಲಿ, ದೇಹವನ್ನು ಪವಿತ್ರವಾಗಿಡುವುದು ಅಂದರೆ ಸಂಪೂರ್ಣ ಸ್ನಾನ ಮಾಡುವುದು ಬಹಳ ಮುಖ್ಯ. ಗಂಗೆಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಇನ್ನೂ ವಿಶೇಷ. ಹಬ್ಬಗಳು ಅಥವಾ ಮರಣದಂತಹ ಸಂದರ್ಭಗಳಲ್ಲಿ ಈ ರೀತಿ ಶುದ್ಧೀಕರಣ ಮಾಡಿಕೊಳ್ಳುವುದು ಶುಭವೆಂದು ನಂಬಲಾಗಿದೆ.
ದಿನಾ ಸ್ನಾನ ಮಾಡೋದು ಕೇವಲ ಶುಚಿತ್ವ ಅಷ್ಟೇ ಅಲ್ಲ, ಅದು ನಮ್ಮನ್ನ ನಾವು ನೋಡಿಕೊಳ್ಳೋದು, ತನ್ಮಯತೆಯಿಂದ ಶುದ್ಧೀಕರಣ ಮಾಡಿಕೊಳ್ಳೋದು ಮತ್ತು ನವಶಕ್ತಿ ತುಂಬಿಕೊಳ್ಳೋ ಒಂದು ವಿಧಾನ. ನೀರಿನ ಪಾವಿತ್ರ್ಯತೆಯ ಬಗ್ಗೆ ನಮಗೆಲ್ಲಾ ಗೊತ್ತು.
ಬಹಳಷ್ಟು ಜನ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡೋದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಸ್ನಾನ ಮಾಡದೆ ಅಡುಗೆ ಮನೆಗೂ ಹೋಗೋಕೆ ಇಷ್ಟ ಪಡಲ್ಲ. ಸ್ನಾನದಿಂದ ನಮ್ಮ ಶರೀರ ಶುದ್ಧವಾಗುತ್ತದೆ. ಸ್ನಾನ ಮಾಡಿದ ಮೇಲೆ ದೇಹ ಹಗುರವಾಗುತ್ತದೆ.
ನಾವು ಸ್ನಾನ ಮಾಡುವಾಗ ಅನೇಕ ತಪ್ಪುಗಳನ್ನು ಮಾಡ್ತೀವಿ. ಈ ತಪ್ಪುಗಳಿಂದ ನಮಗೆ ಸಮಸ್ಯೆಗಳು ಬರಬಹುದು ಅಂತ ಹೇಳಲಾಗುತ್ತದೆ. ಸ್ನಾನದ ಬಗ್ಗೆ ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಕೂಡ ಹೇಳಲಾಗಿದೆ. ಆ ಗ್ರಂಥಗಳ ಪ್ರಕಾರ, ಸ್ನಾನ ಮುಗಿಸಿದ ಮೇಲೆ ಕಾಲಿನಿಂದ ಒಂದು ಕೆಲಸ ಮಾಡೋಕೆ ಹೋಗಬಾರದು.
ಇವಾಗ ದಿನಾ ಸ್ನಾನ ಮಾಡುವಾಗ ಬಹುತೇಕ ಜನ ಬಟ್ಟೆ ಹಾಕಲ್ಲ. ಕೆಲವರು ಬಕೆಟ್ನಲ್ಲಿ ನೀರು ತುಂಬಿ ಸ್ನಾನ ಮಾಡ್ತಾರೆ, ಇನ್ನು ಕೆಲವರು ನೇರವಾಗಿ ಶವರ್ ಕೆಳಗೆ ನಿಂತು ಸ್ನಾನ ಮಾಡ್ತಾರೆ. ಆದ್ರೆ ಸ್ನಾನ ಮುಗಿಸಿ ಹೊರಗೆ ಬಂದ ಮೇಲೆ ಸಿಂಕ್ ಅಥವಾ ನೀರು ಹೋಗುವ ಜಾಗದಲ್ಲಿರೋ ಕೂದಲನ್ನ ಮುಟ್ಟಬಾರದು.
ಕಾಲಿನಿಂದ ಕೂದಲು ಸರಿಸುವುದು, ಇಲ್ಲ ಕಾಲಿನಿಂದ ಕಟ್ಟಿಕೊಂಡಿದ್ದ ಕೂದಲ್ಲನ್ನು ಎತ್ತಿ ಬೇರೆಡೆ ಹಾಕುವಂಥ ಕೆಲಸಗಳನ್ನು ಯಾರೂ ಮಾಡಬಾರದು. ಇದ್ರಿಂದ ನಿಮಗೆ ಪಾಪ ಸುತ್ತಿಕೊಳ್ಳುತ್ತೆ ಅಂತ ಹೇಳಲಾಗುತ್ತೆ. ಹಣಕಾಸಿನ ಸಮಸ್ಯೆ ಜೊತೆಗೆ ದಾರಿದ್ರ್ಯ ಅಟ್ಕಾಯಿಸಿಕೊಳ್ಳುತ್ತೆ ಅಂತ ಹೇಳಲಾಗುತ್ತೆ.
ಬೆತ್ತಲೆಯಾಗಿ ಸ್ನಾನ ಮಾಡುವುದರಿಂದ ಸಮಸ್ಯೆಗಳು ಬರಬಹುದು ಅಂತ ಜನ ಹೇಳ್ತಾರೆ. ಹಾಗೆ ಬಟ್ಟೆ ಇಲ್ಲದೆ ಸ್ನಾನ ಮಾಡಿದ್ರೆ ಕೆಟ್ಟ ಶಕ್ತಿಗಳು ಮನೆಗೆ ಬರುತ್ತವೆ ಅಂತ ನಂಬಿಕೆ ಇದೆ. ಅದನ್ನ ನಂಬುವವರೂ ಇದ್ದಾರೆ. ಹೀಗೆ ಮಾಡುವುದರಿಂದ ಸ್ನಾನ ಮಾಡುವವರ ಮನಸ್ಸಿನ ಮೇಲೂ, ಮನೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಅಂತ ಹಿರಿಯರು ಹೇಳ್ತಾರೆ.
ನಮ್ಮ ಹಿರಿಯರು ಸ್ನಾನ ಮಾಡುವಾಗ ದೇಹಕ್ಕೆ ಏನಾದರೂ ಹಾಕಿಕೊಳ್ಳಿ ಅಂತ ಹೇಳೋದೇ ಇದಕ್ಕೆ. ಬಟ್ಟೆ ಇಲ್ಲದೆ ಸ್ನಾನ ಮಾಡಿದ್ರೆ ಲಕ್ಷ್ಮಿ ದೇವಿಗೆ ಸಿಟ್ಟು ಬರುತ್ತೆ ಅಂತಾರೆ. ಹಾಗೆ ಬೆತ್ತಲೆಯಾಗಿ ಸ್ನಾನ ಮಾಡಿದ್ರೆ ನಮ್ಮ ಹಣಕಾಸಿನ ಪರಿಸ್ಥಿತಿ ಮೇಲೂ ಪರಿಣಾಮ ಬೀರುತ್ತೆ ಅಂತ ಹೇಳ್ತಾರೆ. ಅದಕ್ಕೇ ತಲೆಗೆ ಏನಾದ್ರೂ ಹಾಕಿಕೊಂಡು ಇಲ್ಲ ಅಂದ್ರೆ ಟವಲ್ ಕಟ್ಟಿಕೊಂಡು ಸ್ನಾನ ಮಾಡಿ ಅಂತ ಹೇಳೋದು.