ಉಗುರುಗಳನ್ನು ಕತ್ತರಿಸುವುದು ಆರೋಗ್ಯಕರವಾದ ಅಭ್ಯಾಸ. ಬೆರಳು ಹಾಗೂ ಉಗುರಿನ ಸಂಧಿಯಲ್ಲಿ ಸಿಲುಕಿಕೊಳ್ಳುವ ಕೊಳಕು ಮತ್ತು ಸೂಕ್ಷ್ಮ ಜೀವಿಗಳು ಸಂಗ್ರಹವಾಗುವುದನ್ನು ಸುಲಭವಾಗಿ ತಡೆಗಟ್ಟಬಹುದು. ಹಿಂದೂ ನಂಬಿಕೆ ಹಾಗೂ ಕೆಲವು ಸಂಪ್ರದಾಯಗಳ ಪ್ರಕಾರ ಉಗುರು ಎಲ್ಲಾ ಸಮಯದಲ್ಲೂ ಮಾಡಬಾರದು.
ಅದು ವ್ಯಕ್ತಿಗೆ ನಕಾರಾತ್ಮಕ ಫಲವನ್ನು ನೀಡುವುದು ಎಂದು ಹೇಳಲಾಗುವುದು. ಅದರಲ್ಲೂ ಶುಭಕರವಾದ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕೆಲವು ತಿಥಿಗಳಲ್ಲಿ, ವಿಶೇಷವಾದ ವಾರಗಳಲ್ಲಿ ದಿನದ ಎಲ್ಲಾ ಸಮಯದಲ್ಲಿ ಉಗುರು ಕತ್ತರಿಸುವುದು ಮಾಡಬಾರದು.
ಮಂಗಳವಾರ ಮತ್ತು ಶನಿವಾರ
ಮಂಗಳವಾರ, ಶನಿವಾರ ಮತ್ತು ಗುರುವಾರ ಉಗುರುಗಳನ್ನು ಕತ್ತರಿಸಬಾರದು. ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಿದರೆ, ಅದರ ಕೆಟ್ಟ ಪರಿಣಾಮಗಳನ್ನು ನೀವು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ಹಣ ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅಲ್ಲದೆ, ಮಂಗಳವಾರ ಕತ್ತರಿ, ನೇಲ್ ಕಟರ್ನಂಥ ಚೂಪು ವಸ್ತುಗಳ ಬಳಕೆಗೇ ಶಾಸ್ತ್ರದಲ್ಲಿ ನಿಷೇಧವಿದೆ. ಈ ದಿನ ಯುದ್ಧಕಾರಕ ಮಂಗಳನು ಇವುಗಳ ಬಳಕೆಗೆ ತೊಡಗಿದರೆ ಹೆಚ್ಚಿನ ದೈಹಿಕ ಹಾನಿಗೆ ಕಾರಣನಾಗುತ್ತಾನೆ. ಇದಲ್ಲದೇ ಅಮವಾಸ್ಯೆ ಮತ್ತು ಚತುರ್ದಶಿ ತಿಥಿಯಂದು ಕೂಡ ಉಗುರುಗಳನ್ನು ಕತ್ತರಿಸಬೇಡಿ.
ಭಾನುವಾರ
ನೀವು ಭಾನುವಾರ ಉಗುರುಗಳನ್ನು ಕತ್ತರಿಸಿದರೆ, ಅದು ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ ಮತ್ತು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ.
ಸೂರ್ಯಾಸ್ತದ ನಂತರ
ಸೂರ್ಯಾಸ್ತದ ನಂತರವೂ ಉಗುರುಗಳನ್ನು ಕತ್ತರಿಸಬಾರದು. ಮನೆಯವರನ್ನು ಆಶೀರ್ವದಿಸಲು ಲಕ್ಷ್ಮಿ ದೇವಿಯು ಸಂಜೆ ಹೊತ್ತಿನಲ್ಲಿ ಮನೆಗೆ ಭೇಟಿ ನೀಡುತ್ತಾಳೆ ಎಂದು ನಂಬಲಾಗಿದೆ. ಹಾಗಾಗಿ ಸಂಜೆ ಉಗುರುಗಳನ್ನು ಕತ್ತರಿಸುವುದು ದೇವಿಗೆ ಅಗೌರವವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ದುಃಖ ಮತ್ತು ಬಡತನ ಮನೆ ಮಾಡುತ್ತದೆ.