ಬೆಂಗಳೂರು:- ರಾಜ್ಯ ಕಾಂಗ್ರೆಸ್ನಲ್ಲಿ ಸದ್ಯ ಒಂದು ರೀತಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಒಂದ್ಕಡೆ ಕೆಪಿಸಿಸಿ ಅಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆ ನಡೀತಾ ಇದ್ದರೆ, ಇನ್ನೊಂದು ಕಡೆ ಸಿಎಂ ಬದಲಾವಣೆ ಟಾಕ್ ಕೂಡ ಬಿಸಿಯೇರಿಸಿದೆ.. ಇದೆಲ್ಲದರ ನಡುವೆ ಎಲ್ಲವೂ ಸರಿಯಾಗೇ ಇದೇ ಅನ್ನೋ ಅಂತ ಮಾಲಿಶ್ ಮಾತುಗಳು ಕೇಳಿ ಬರ್ತಿವೆ.. ಆದರೆ ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಇತ್ತ ಪವರ್ ಶೇರಿಂಗ್ ಗಾಗಿ ಬಿಗಿ ಪಟ್ಟು ಹಿಡಿದಿದ್ದಾರೆ ಡಿಕೆಶಿ.. ಅತ್ತ ಕೆಪಿಸಿಸಿ ಚುಕ್ಕಾಣಿ ಹಿಡಿಯೋಕೆ ರಣತಂತ್ರ ರೂಪಿಸ್ತಿದೆ ಸಿದ್ದು ಬಣ…
ನೀವು ಸ್ಲಿಮ್ ಆಗ್ಬೇಕಾ!? ಹಾಗಿದ್ರೆ ದಿನಾ ಇದೊಂದು ಗಂಜಿ ಕುಡಿರಿ! ಆಮೇಲೆ ನೋಡಿ ಚಮತ್ಕಾರ!
ಸಿಎಂ ಕುರ್ಚಿ.. ಡಿಕೆಶಿಯ ದಶಕಗಳ ಕನಸು ಪಕ್ಷದ ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ 2023ರ ಚುನಾವಣೆಯ ಗೆಲುವಿನ ಬಳಿಕವೇ ಸಿಎಂ ಗದ್ದುಗೆ ಏರುವ ಕನಸು ಕಂಡಿದ್ದರು. ಆದರೆ ಆಗ ಸಿಎಂ ಸಿದ್ದರಾಮಯ್ಯ ಪರ ಹೈಕಮಾಂಡ್ ಒಲವು ತೋರಿತ್ತು. ಆದರೆ ಅಂದೇ ಹೈಕಮಾಂಡ್ ಮಟ್ಟದಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆಯಾಗಿತ್ತು ಅನ್ನೋ ಮಾತುಗಳು ಕೇಳಿ ಬರುತ್ತಲೇ ಇವೆ.. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಡಿಕೆಶಿ ಮತ್ತು ಸಿದ್ದು ಇಬ್ಬರು ಪಾತ್ರವು ಹೆಚ್ಚಿಗೆ ಇತ್ತು.. ಇಬ್ಬರು ಒಗ್ಗೂಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿ ಏನೋ ಆದರು. ಆದರೆ ಸಿಎಂ ಸ್ಥಾನಕ್ಕೆ ಬಂದಾಗ ಇಬ್ಬರ ನಡುವೆಯೂ ಅಷ್ಟೇ ಪೈಪೋಟಿ ಇತ್ತು. ಆದರೆ ಅಂತಿಮವಾಗಿ ಸಿದ್ದರಾಮಯ್ಯ ಶಾಸಕಾಂಗ ನಾಯಕರಾಗಿ ಆಯ್ಕೆಯಾದ್ರು.. ಈ ಸಮಯದಲ್ಲೇ ಅಧಿಕಾರ ಹಂಚಿಕೆ ಅಂದರೆ 2.5 ವರ್ಷ ಸಿದ್ದರಾಮಯ್ಯ ಸಿಎಂ ಅಗಿದ್ದರೆ, ಇನ್ನುಳಿದ 2.5 ವರ್ಷ ಡಿಕೆಶಿ ಅವರಿಗೆ ಸಿಎಂ ಸ್ಥಾನ ಹಂಚಿಕೆಯಾಗಲಿದೆ ಅಂತಾ ಭಾರೀ ಚರ್ಚೆಯಾಗಿತ್ತು.
ಆದ್ರೆ ಇದೀಗ ಇದೇ ವಿಚಾರ ಮತ್ತಷ್ಟು ಕಾವು ಪಡೆದಿದೆ.. ಒಂದ್ ಕಡೆ ಪವರ್ ಶೇರಿಂಗ್ ಕುರಿತ ಹೇಳಿಕೆಗಳೂ ಪ್ರಸ್ತಾವಾಗಿದ್ರೆ, ಸಿದ್ದರಾಮಯ್ಯ ಬಣದ ನಾಯಕರು ಪೂರ್ಣವಾಧಿ ಸಿಎಂ ಸಿದ್ದರಾಮಯ್ಯನವರೇ ಅಂತಿದ್ದಾರೆ.. ಇದರ ಜೊತೆಗೆ ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ.. ಇಷ್ಟು ದಿನ ರಾಜ್ಯದ ನಾಯಕರು ಕೆಪಿಸಿಸಿ ಬದಲಾವಣೇಗೆ ಆಗ್ರಹಿಸಿದರು. ಇದೀಗ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಎಲ್ಲಾ ರಾಜ್ಯಗಳ ಅಧ್ಯಕ್ಷರು ಬದಲಾವಣೆಯಾಗಲಿದ್ದು, ಕಾಂಗ್ರೆಸ್ ಕೂಡ ಇದರಿಂದ ಹೊರತಾಗಿಲ್ಲ ಎಂದಿದ್ದಾರೆ..
ಖರ್ಗೆ ಹೀಗಂದ ಕೆಲ ಸಮಯದ ನಂತರ ಡಿಕೆಶಿ ಮಾರ್ಮಿಕವಾಗಿ ಫೋಸ್ಟ್ ಹಂಚಿಕೊಂಡಿದ್ದಾರೆ. ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನಗೆ ಗೆಲುವು ನಿಶ್ಚಿತ ಎಂದು ಬರೆದುಕೊಂಡಿದ್ದಾರೆ.. ಒಂದು ವೇಳೆ ಅಧಿಕಾರ ಹಂಚಿಕೆಯ ಮಾತು ನಿಜವಾಗಿದ್ದರೇ, ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡಲೇ ಬೇಕಾಗುತ್ತೆ.. ಆಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ಕೊಡಲೇಬೇಕಾಗುತ್ತದೆ.. ಸದ್ಯ ಸಿದ್ದರಾಮಯ್ಯ ಪರ ನಾಯಕರು ಕೆಪಿಸಿಸಿ ಆಧ್ಯಕ್ಷ ಕುರ್ಚಿ ಮೇಲೆ ಟಲವ್ ಹಾಕಿ ಕಾಯ್ತಿದ್ದಾರೆ. ಡಿಕೆಶಿ ಸಿಎಂ ಆದರೂ ಸಹ ಪಕ್ಷದ ಅಧಿಕಾರ ಸಿದ್ದರಾಮಯ್ಯ ಬಣದ ಕೈಯಲ್ಲಿರುತ್ತದೆ ಅನ್ನೋ ಲೆಕ್ಕಾಚಾರವು ಇದೆ…
ಪಕ್ಷದ ಕಷ್ಟದ ದಿನಗಳಲ್ಲಿ ಜೊತೆನಿಂತು ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ಪ್ರತಿಯೊಂದು ಸ್ಥಾನ ಪಡೆಯುವಾಗಲೂ ತಾಳ್ಮೆಯಿಂದ ಕಾಯ್ತಿದ್ದಾರೆ.. ಇದೀಗ ಸಿಎಂ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದ್ದಾರೆ.. ಆಕಸ್ಮಾತ್ ಅವರ ಆಸೆ ನಿರಾಶೆಯಾದರೆ ಡಿಕೆಶಿ ಮುಂದಿನ ರಣತಂತ್ರಗಳು ಏನಾಗಿರಬಹುದು ಎಂಬ ಚರ್ಚೆಗಳು ನಡೀತಿವೆ..