ಕೋವಿಡ್ ನಿರ್ಬಂಧ ಎಲ್ಲರಿಗೂ ಅನ್ವಯ, ಉಲ್ಲಂಘಿಸಿದರೆ ಕಾನೂನು ಕ್ರಮ ಎಂಬ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ರೂಲ್ಸ್ ತಂದರೂ ನಮ್ಮ ಪಾದಯಾತ್ರೆ ಕೈಬಿಡುವುದಿಲ್ಲ, ಇದು ರಾಜ್ಯಕ್ಕಾಗಿ ಮಾಡುತ್ತಿರುವ ಹೋರಾಟ. ಇನ್ನೂ ಪಾದಯಾತ್ರೆ ಮಾಡಿದರೆ ಅರೆಸ್ಟ್ ಮಾಡಲಾಗುತ್ತದೆ ಅಂತಾರಲ್ಲ, ಮಾಡಲಿ ಅವರ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಹೇಳಿದರು. ಇನ್ನೂ ಪಾದಯಾತ್ರೆಯಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸಿ ಹೋರಾಡುತ್ತೇವೆ, ಜೈಲಿಗೆ ಹೋಗಲು ನಾನು ಸಿದ್ಧನಿದ್ದೇನೆ. ನಾವು 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇವೆ. ಇದನ್ನು ನಿಲ್ಲಿಸೋಕೆ ಹೋಂ ಮಿನಿಸ್ಟರ್ ಇನ್ನೊಂದು ಜನ್ಮ ಹುಟ್ಟಿ ಬರಬೇಕು ಎಂದು ಸವಾಲ್ ಹಾಕಿದ್ದರು. ಅಲ್ಲದೇ ಪಾದಯಾತ್ರೆ ಮಾಡೇ ಮಾಡ್ತೀವಿ ತಾಕತ್ ಇದ್ದರೆ ಅರೆಸ್ಟ್ ಮಾಡಲಿ, ಅವರ ತಾಕತ್ತು ಏನಿದೆ ಎಂಬುವುದನ್ನು ತೋರಿಸಲಿ, ಆಮೇಲೆ ನಾವು ಏನು ಎಂಬುವುದನ್ನು ತೋರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಗೃಹ ಸಚಿವರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

