ಬೆಂಗಳೂರು ;- ಡಿಕೆ ಶಿವಕುಮಾರ್ ಅವರದ್ದು ಒಂದು ರೀತಿ ಅತಿರೇಕದ ನಡೆ ಎಂದು ಕಂದಾಯ ಸಚಿವ ಆರ್ ಅಶೋಕ್ ಆರೋಪಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಡಿಕೆಶಿ ಸಿಎಂ ಅಲ್ಲ, ಆಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರದ್ದು ಒಂದು ರೀತಿ ಅತಿರೇಕದ ನಡೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ತನಗೆ ಸಿಎಂ ಸ್ಥಾನ ಸಿಗಲ್ಲ ಅನ್ನೋದು ಅವರಿಗೆ ಗ್ಯಾರಂಟಿ ಇದೆ. ನಾನೇ ಸಿಎಂ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ. ಇದೇನು ಸಮ್ಮಿಶ್ರ ಸರ್ಕಾರವ ಎಂದು ಯಾರಿಗೆ ಹೇಳಿದ್ದಾರೆ. ಡಿಕೆಶಿಗೆ ಹೇಳಿದ್ದು ಎಂಬುದು ಜಗಜ್ಜಾಹೀರು. ಈಗಿನಿಂದಲೇ ಓವರ್ಟೇಕ್ ಮಾಡಿ ಏನಾದರೂ ಕಿರಿಕಿರಿ ಮಾಡಲು ಡಿಕೆಶಿ ಹೊರಟಿದ್ದಾರೆ. ಇವರ ಕಿರಿ ಕಿರಿ ಬೀದಿಗೆ ಬಂದರೆ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಟೀಕಿಸಿದರು. ಸಿಎಂ ಆದವರು ಹಿಂದಿನ ಸಿಎಂರನ್ನು ಭೇಟಿ ಮಾಡುವುದು ಮಾಮೂಲಿ. ನಾನು ಡಿಸಿಎಂ ಆಗಿದ್ದೆ, ಆದರೆ ನಿವೃತ್ತ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು.

