ಹುಬ್ಬಳ್ಳಿ: ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ವತಿಯಿಂದ ಶನಿವಾರ ರಂದು ಎಪಿಎಂಸಿ ಆವರಣದಲ್ಲಿರುವ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ (ರಿ) ಹುಬ್ಬಳ್ಳಿ ಯ ಶ್ರೀಮತಿ ಗಂಗಮ್ಮ ಗಿರಿಯಪ್ಪಗೌಡ ಬಾಳನಗೌಡರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಾಸಿಸುವ ಮಕ್ಕಳಿಗೆ ಹೊಸ ಉಡುಪು ಹಾಗೂ ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ದೀಪಾವಳಿ ಹಾಗು ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷರಾದ ದಯಾನಂದ ಅಂಬರಕರ ಮಾತನಾಡುತ್ತ ಪಟಾಕಿ ಹಚ್ಚುವುದರಿಂದ ಪರಿಸರ ಮಾಲಿನ್ಯದ ಜತೆಗೆ ಹಕ್ಕಿ, ಪ್ರಾಣಿ, ಜಾನುವಾರುಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಅದರ ಬದಲಾಗಿ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವದರ ಜತೆಗೆ ಸಮಾಜಕ್ಕೆ ಉಪಯೋಗವಾಗುವಂತೆ ಸಮಾಜ ಮುಖಿಯಾಗಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಬಹುದೆಂದರು.
ಸಂಸ್ಥೆಯ ಮಕ್ಕಳ ಕಲ್ಯಾಣ ನಿರ್ದೇಶಕಿ ಸ್ನೇಹಾ ಬೇದರೆ ಮಾತನಾಡುತ್ತ ಮಕ್ಕಳು ವಸತಿ ನಿಲಯದಲ್ಲಿ ಶಿಸ್ತಿನಿಂದ ಇರುವುದನ್ನು ಕಂಡು ಮೆಚ್ಚುಗೆ ವೆಕ್ತಪಡಿಸಿ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಸಂಸ್ಥೆಯ ಹಿರಿಯ ಸದಸ್ಯರಾದ ಪ್ರಕಾಶ್ ತಿರುಮಲ್ಲೆಯವರು ಮಾತನಾಡುತ್ತ ಜಗತ್ತಿನಲ್ಲೇ ನಮ್ಮ ದೇಶದ ಸಂಸ್ಕೃತಿ ಅತ್ತ್ಯುತ್ತಮವಾದದ್ದು, ಹೀಗಾಗಿ ಪಾಶ್ಚಿಮಾತ್ಯರು ಸಹಿತ ನಮ್ಮ ಸಂಸ್ಕೃತಿಯಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದರು.
ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷರಾದ ರಮೇಶ್ ಧಾರಜಕರ ಮಾತನಾಡುತ್ತ ಈ ಒಂದು ಸುಸಂಸ್ಕೃತ ವಾತಾವರಣದಲ್ಲಿರುವ ಮಕ್ಕಳು ಮುಂದೆ ವಿಜ್ಞಾನಿಗಳಾಗಿ ಹಾಗೂ ದೊಡ್ಡ ದೊಡ್ಡ ಹುದ್ದೆಯಲ್ಲಿ ತೊಡಗಿಕೊಂಡು ನಮ್ಮ ದೇಶದ ಉತ್ತಮ ಪ್ರಜೆಯಾಗುವುದರಲ್ಲಿ ಸಂಶಯವಿಲ್ಲವೆಂದು ಹೇಳಿದರು.
ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ನ ಅಧ್ಯಕ್ಷರಾದ ಡಾ|| ರಾಮು ಮೂಲಗಿ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಗೆ ಧನ್ಯವಾದಗಳನ್ನು ತಿಳುಸಿದರು.
ಕಾರ್ಯಕ್ರಮದಲ್ಲಿ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷರಾದ ರಮೇಶ್ ಧಾರಜಕರ, ಕಾರ್ಯದರ್ಶಿಗಳಾದ ಅನಂತ ಸುಲಾಖೆ, ಮಕ್ಕಳ ಕಲ್ಯಾಣ ನಿರ್ದೇಶಕಿ ಸ್ನೇಹಾ ಬೇದರೆ, ಪ್ರಕಾಶ್ ತಿರುಮಲ್ಲೆ, ಎಮ್ ಕೆ ರಾಶಿನಕರ, ಡಾ|| ರಾಮು ಮೂಲಗಿ, ದಯಾನಂದ ಅಂಬರಕರ, ರಾಮಚಂದ್ರ ಬೇಂದ್ರೆ, ಜಗದೀಶ ಹಂಚಾಟೆ, ಮಂಜುನಾಥ್ ರಾಶಿನಕರ ಇನ್ನೂ ಅನೇಕರು ಉಪಸ್ಥಿತರಿದ್ದರು.