ಹುಬ್ಬಳ್ಳಿ: ಉತ್ತರ ಕರ್ನಾಟಕ ದಿ.ಎ.ಜೆ ಮುಧೋಳ ಅಭಿಮಾನಿಗಳ ಕಟ್ಟಡ ಹಾಗೂ ಇನ್ನಿತರ ನಿರ್ಮಾಣ ಕಾರ್ಮಿಕ ಸಂಘ ತಾಲೂಕ ಘಟಕದ ಆಶ್ರಯದಲ್ಲಿ ಉಪ್ಪಿನ ಬೆಟಗೇರಿ ಯಲ್ಲಿರುವ ಶಾದಿಮಹಲದಲ್ಲಿ ಕಾರ್ಮಿಕರಿಗೆ ಕಿಟ್ಟ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಬಾಬಾಜಾನ್ ಮುಧೋಳ ಮಾತನಾಡಿ ಪ್ರತಿಯೊಂದು ಕಟ್ಟಡ ನಿರ್ಮಾಣ ಮಾಡಬೇಕಾದರೆ ಗೌoಡಿಗಳು ಅತಿ ಅವಶ್ಯ. ಅವರಿಗೆ ಸರಕಾರದ ಭದ್ರತೆ ಬೇಕಾಗಿದೆ. ಅಸಂಘಟಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರಾಗಿ ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಯಬೇಕೆಂದು ಹೇಳಿದರು. ಆ ನಿಟ್ಟಿನಲ್ಲಿ ಸಂಘವನ್ನು ಕಟ್ಟಿ ಬೆಳಸಬೇಕು ಅಂದಾಗ ಮಾತ್ರ ತಾವುಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಒತ್ತಿ ಹೇಳಿದರು.
ಗ್ರಾ ಪ ಅಧ್ಯಕ್ಷ ಬಶೀರ್ ಅಹಮದ್ ಮಾಳಗಿಮಣಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಬಾಬಾ ಮೊಯಿದ್ದಿನ್ ಚೌದರಿ, ಜಿಲ್ಲಾ ಎ ಐ ಟಿ ಯು ಸಿ ಅಧ್ಯಕ್ಷ ಬಿ ಎ ಮುಧೋಳ , ಧರ್ಮಗುರು ಹಾಷಮಪೀರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಒಟ್ಟು 48 ಸರ್ಕಾರದ ಉದ್ಯೋಗದ ಕಿಟ್ಟುಗಳನ್ನು ವಿತರಿಸಿದರು.
ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಫಾತಿಮಾ ತಡಕೋಡ, ನಗಿನಾ ಮುಲ್ಲಾ, ಸರ್ಜಾನ್ ರಾಟ್ಟಣ್ಣವರ, ರಮೇಶ ಬೋಸಲೇ ,ಜಾಕಿರ್ ಅತ್ತಾರ, ಸಿಕಂದರ್ ನದಾಫ್, ಮಂಜುನಾಥ ಮಮ್ಮಿಗಟ್ಟಿ ,ರೈಮಾ ನಸಾಬ್, ಮಖಾನದರ ,ಶಂಕರ್ ಕೋತಿ, ಸೋಮಯ್ಯ ಹಿರೇಮಠ, ಅಬ್ದುಲಕರೀಮ್ ಲಡಮನ್ನವರ, ಹಸೀಮಪೀರ್ ದೊಡ್ಡವಾಡ ಸೇರಿದಂತೆ ನೂರಾರು ಕಾರ್ಮಿಕರು ಭಾಗಿಯಾಗಿದ್ದರು.