ಹುಬ್ಬಳ್ಳಿ; ಗೋಕುಲ ರಸ್ತೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ನ ಬಾಪನಾ ಪೆಟ್ರೋಲ್ ಬಂಕ್ ನಲ್ಲಿ ಶುಕ್ರವಾರ ಗ್ರಾಹಕರಿಗೆ ಎಳ್ಳು ಬೆಲ್ಲ ಹಂಚಿ ಪರಸ್ಪರ ಶುಭಾಶಯ ಕೋರಲಾಯಿತು. ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ, ಸಡಗರದಿಂದ ಆಚರಿಸ ಲಾಗುತ್ತಿದೆ. ಮಕರ ಸಂಕ್ರಾಂತಿ ದಿನದಂದು ಎಳ್ಳು , ಬೆಲ್ಲ ಹಂಚುವ ಸಂಪ್ರದಾಯ ಅನಾದಿ ಕಾಲದಿಂದಲೂ ಬಂದಿದೆ. ಎಳ್ಳು ದಾನ ಮಾಡಬಾರದು, ತಿಲದಾನ ಸ್ವೀಕರಿಸಿದರೆ ಪಾಪ ಬರುತ್ತೆ ಎಂಬ ನಂಬಿಕೆ ಹಿಂದೆ ರೂಢಿಯಲ್ಲಿತ್ತು.
ಈ ನಂಬಿಕೆ ಹೋಗಲಾಡಿಸಲು ಸಂಕ್ರಾಂತಿ ದಿನ ಎಳ್ಳು ಹಂಚುವ ಪದ್ಧತಿ ರೂಢಿಗೆ ಬಂತು. ಜ್ಞಾನಿಗೆ ಯಾವ ಪಾಪ ಅಂಟುವುದಿಲ್ಲ. ಭಗವ ದ್ಗೀತೆಯಲ್ಲಿ ಹೇಳಿದಂತೆ ‘ಲಿಪ್ಯತೇ ನ ಸ ಪಾಪೇನ ಪದ್ಮ ಪತ್ರಮಿವಾಂಬಸ’ ಅಂದರೆ, ತಾವರೆ ಎಲೆಗೆ ನೀರು ಹೇಗೆ ಅಂಟುವುದಿಲ್ಲವೋ ಹಾಗೆ ಜ್ಞಾನಿಗೆ ಪಾಪ ಅಂಟಲ್ಲ. ಹಾಗಾಗಿ ಈ ಮೂಲಕವಾದರೂ ಸರ್ವರೂ ಜ್ಞಾನಿಗಳಾಗಲಿ, ಜ್ಞಾನಿಯಾದವರು ಎಳ್ಳುಬೆಲ್ಲ ಹಂಚಲಿ ಎಂಬುದೇ ಈ ಹಬ್ಬದ ಉದ್ದೇಶ. ಆದರೆ, ಇತ್ತೀಚೆಗೆ ಬರೀ ಎಳ್ಳಿನ ಹಂಚಿಕೆ ಅಷ್ಟೇ ಅಲ್ಲ ಜೊತೆಗೆ ಕಡಲೆ, ಬೆಲ್ಲ, ಕೊಬರಿ ಹಂಚುತ್ತಾರೆ.
