Facebook Twitter Instagram YouTube
    ಕನ್ನಡ English తెలుగు
    Wednesday, November 29
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಸಾರ್ವಜನಿಕರ ಕುಂದುಕೊರತೆ ಅರ್ಜಿಯನ್ನು 15 ದಿನದೊಳಗಾಗಿ ವಿಲೇವಾರಿ ಮಾಡಿ : ಎನ್. ಚಲುವರಾಯಸ್ವಾಮಿ

    AIN AuthorBy AIN AuthorNovember 18, 2023
    Share
    Facebook Twitter LinkedIn Pinterest Email

    ಮಂಡ್ಯ :– ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಕುಂದು ಕೊರತೆ ಅರ್ಜಿಯನ್ನು 15 ದಿನದೊಳಗಾಗಿ ವಿಲೇವಾರಿ ಮಾಡಿ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದರು.

    Demo

    ಸಾರ್ವಜನಿಕರು ತಮ್ಮ ಕುಂದು ಕೊರತೆಗೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಯ ಅಧಿಕಾರಿಗಳನ್ನು ಸಂಪರ್ಕಿಸಿ. ಕೆಲಸವಾಗದೇ ಇದ್ದ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ. ಈ ಹಂತದಲ್ಲೂ ಕೆಲಸವಾಗದಿದ್ದಲ್ಲಿ ನನ್ನ ಕಛೇರಿಯನ್ನು ಸಂಪರ್ಕಿಸಬಹುದು ಎಂದರು.

    ಕೊಪ್ಪ ಹೋಬಳಿಗೆ ಸಂಬಂಧಿಸಿದಂತೆ 8 ಗ್ರಾಮ ಪಂಚಾಯಿತಿಗಳಿದ್ದು, ಈ ವ್ಯಾಪ್ತಿಯ ಜನರ ಕುಂದು ಕೊರತೆಗಳನ್ನು ಪರಿಹರಿಸಲು ಇಂದು ಜನತಾ ದರ್ಶನವನ್ನು ಆಯೋಜಿಸಲಾಗಿದೆ. ಕೊಪ್ಪ ಭಾಗದ ಜನರು ಆಧಾರ್ ತಿದ್ದುಪಡಿ ಹಾಗೂ ನೋಂದಣಿಗಾಗಿ ತಾಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಿತ್ತು ಇದನ್ನು ತಪ್ಪಿಸಲು ಕೊಪ್ಪದಲ್ಲಿ ಹೊಸ ಆಧಾರ್ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ 100 ದಿನದೊಳಗಾಗಿ 04 ಗ್ಯಾರಂಟಿಗಳನ್ನು ಈಡೇರಿಸಿದೆ. ಜನಪ್ರತಿನಿಧಿಗಳು ಸಾರ್ವಜನಿಕರಿಗೆ ನೀಡುವ ಭರವಸೆಗಳನ್ನು ಪೂರ್ಣಗೊಳಿಸಿದರೆ ಮಾತ್ರ ಸಾರ್ವಜನಿಕರ ನಂಬಿಕೆ ಹಾಗೂ ವಿಶ್ವಾಸಗಳಿಸಲು ಸಾಧ್ಯವಾಗುತ್ತದೆ ಎಂದರು.

    ಕೊಪ್ಪ ಹೋಬಳಿಯಲ್ಲಿ ಪೌತಿ ಖಾತೆ ಆಂದೋಲನ ಯೋಜನೆ ಸಂಬಂಧ ಮೃತರ ಪಟ್ಟಿಯೊಂದಿಗೆ ಮನೆ ಮನೆಗೆ ಭೇಟಿ ನೀಡಿ ವಾರಸುದಾರರಿಂದ 658 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಇವರಿಗೆ ಪೌತಿ ಖಾತೆ ಮಾಡಿಕೊಡಲಾಗುವುದು ಎಂದರು.

    ಅತಿವೃಷ್ಠಿ ಹಾಗೂ ಅನಾವೃಷ್ಠಿ ಉಂಟಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪರಿಹಾರ ಒದಗಿಸಲಿದೆ. ರಾಜ್ಯದಲ್ಲಿ ಉಂಟಾಗಿರುವ ಬರ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಬರದ ಹಿನ್ನೆಲೆಯಲ್ಲಿ ಜನರಿಗೆ ರಾಜ್ಯ ಸರ್ಕಾರ ಸ್ಪಂದಿಸಲು ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಸಬ್ಸಿಡಿ, ಸಹಾಯಧನ, ಸಾಮಾಜಿಕ ಪಿಂಚಣಿ ಮೂಲಕ 75 ಸಾವಿರ ಕೋಟಿ ವೆಚ್ಚ ಮಾಡಿದೆ ಎಂದರು.

    ಬೆಳೆ ವಿಮೆ ಯೋಜನೆಯಡಿ 53,000 ರೈತರ ಹೆಸರು ನೊಂದಾಯಿಸಿದ್ದು, ಸರ್ಕಾರ 1500 ಕೋಟಿ ಹಾಗೂ ರೈತರು 50 ಕೋಟಿ ವಿಮೆ ಕಂಪನಿಗೆ ಪಾವತಿಸಿದೆ. ಮಳೆಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿ ಬೆಳೆ ನಾಶವಾಗಿದ್ದು, ಪ್ರತಿ ಎಕರೆಗೆ 9,438 ರೂಗಳಂತೆ ಮದ್ದೂರು ತಾಲ್ಲೂಕಿನಲ್ಲಿ 103 ಕೋಟಿ ಹಾಗೂ ರಾಜ್ಯಾದ್ಯಂತ 230 ಕೋಟಿ ರೂಗಳನ್ನು ಪಾವತಿಸಿದೆ ಎಂದರು.

    ಸಾಮಾಜಿಕ ಭದ್ರತಾ ಯೋಜನೆ ಅಡಿ 100 ಫಲಾನುಭವಿಗಳಿಗೆ ಪಿಂಚಣಿ ಮಾಸಾಸನ ವಿತರಣೆ ಮಾಡಲಾಯಿತು ಹಾಗೂ 11ಇ ಮತ್ತು ಆರ್. ಆರ್. ಟಿ ಶಾಖೆಯ 180 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು. ಇತರೆ ಇಲಾಖೆಗಳಿಂದ ಒಟ್ಟು 119 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.

    ಇದೇ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನವೀನ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಮದ್ದೂರು ತಹಶೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ಆನಂದ್ ಕುಮಾರ್, ಜಂಟಿ ಕೃಷಿ ನಿರ್ದೇಶಕರಾದ ಅಶೋಕ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರಿದ್ದರು.

    ಇಂದು ಜನತಾ ದರ್ಶನದಲ್ಲಿ ಒಟ್ಟು 84 ಅರ್ಜಿಗಳು ಸ್ವೀಕೃತವಾಗಿದ್ದು, ವಿವರ ಇಂತಿದೆ.
    ಕಂದಾಯ ಇಲಾಖೆ – 48 ಗ್ರಾಮೀಣ ಅಭಿವೃದ್ಧಿ ಇಲಾಖೆ – 09, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-01, ಕೆ.ಎಸ್.ಆರ್.ಟಿ.ಸಿ-02, ಭೂಸ್ವಾಧೀನ ಇಲಾಖೆ-11, ಆರೋಗ್ಯ ಇಲಾಖೆ -02, ಲೋಕೋಪಯೋಗಿ ಇಲಾಖೆ -05, ಕೆ.ಇ.ಬಿ-02, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ -01, ಕೃಷಿ ಇಲಾಖೆ -02, ಹಿಂದುಳಿದ ವರ್ಗಗಳ ಇಲಾಖೆ -01 ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದೆ.


    Share. Facebook Twitter LinkedIn Email WhatsApp

    Related Posts

    Satish Jarakiholi : ಬಿ.ಆರ್.ಪಾಟೀಲ್ ಸಿಎಂ ಗೆ ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ -ಸತೀಶ್ ಜಾರಕಿಹೊಳಿ

    November 29, 2023

    ಪ್ರೆಸ್ v/s ಪೋಲೀಸ್ ಕ್ರಿಕೆಟ್ ಪಂದ್ಯ, ಮೀಡಿಯಾ ಟೀಂ ಭರ್ಜರಿ ಗೆಲುವು

    November 29, 2023

    ರಾಜೀನಾಮೆ ಕುರಿತು ಸಿಎಂಗೆ ಬಿಆರ್ ಪಾಟೀಲ್ ಪತ್ರ ವಿಚಾರ – ಬಸವರಾಜ್ ಹೊರಟ್ಟಿ ಹೇಳಿದಿಷ್ಟು!

    November 29, 2023

    ಕೋಲಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ, ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

    November 29, 2023

    ನೆಲಮಂಗಲ: ವೃದ್ದ ಮಹಿಳೆ ಮೇಲೆ ಚಿರತೆ ದಾಳಿ, ಸೊಂಟದ ಭಾಗ ಗಂಭೀರ ಗಾಯ

    November 29, 2023

    ಹಿಡಕಲ್ ಡ್ಯಾಂ: ಅನಾಮಿಕ ಮುಸುಕದಾರಿ ವ್ಯಕ್ತಿಗಳಿಂದ ಕಳ್ಳತನಕ್ಕೆ ಯತ್ನ

    November 29, 2023

    ಬೆಳಗಾವಿ: ಚೀಟಿ ತೋರಿಸಿ ಮಾಂಗಲ್ಯ ಎಗರಿಸಿದ ಐನಾತಿ ಕಳ್ಳ

    November 29, 2023

    Chaluvarayaswamy: ಕೃಷಿ ಸಚಿವರಿಂದ ಬಳ್ಳಾರಿ ತಾಲ್ಲೂಕಿನಲ್ಲಿ ಬರ ಪರಿಶೀಲನೆ

    November 29, 2023

    Dharwad: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

    November 29, 2023

    MP Renukacharya: ಇದು ಕೊಲೆಯಿಂದ ಸಂಭವಿಸಿರೋ ಸಾವಲ್ಲ. ಅಪಘಾತದಿಂದ ಸಂಭವಿಸಿರೋ ಸಾವು: ಸಿಐಡಿ ವರದಿ

    November 29, 2023

    536ನೇ ಶ್ರೀ ಕನಕ ಜಯಂತ್ಯೋತ್ಸವವನ್ನು ಉದ್ಘಾಟಿಸಿದ CM ಸಿದ್ದರಾಮಯ್ಯ

    November 29, 2023

    ದಾನಮ್ಮ ದೇವಿ ಸಾಮೂಹಿಕ ವಿವಾಹಕ್ಕೆ ಪ್ರೇರಣೆ ನೀಡುತ್ತಿದ್ದಾರೆ: ಶ್ರೀ ಗುರುಸಿದ್ದೇಶ್ವರ

    November 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.