ಬೆಂಗಳೂರು :– ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನ ಪ್ರಶ್ನಿಸಿ ನಾನು ಕೋರ್ಟ್ಗೆ ಹೋಗುತ್ತೇನೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಜೆಡಿಎಸ್ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು ತಪ್ಪು. ಹಾಗೂ ವಜಾಗೊಳಿಸಬೇಕೆಂದಿದ್ದರೆ ಸಭೆ ಕರೆದು 2/3 ಬೆಂಬಲದೊಂದಿಗೆ ಮಾಡಬೇಕು. ಯಾವುದೇ ನಿಯಮ ಪಾಲನೆ ಮಾಡದೇ ನನ್ನನ್ನು ಏಕಾಏಕಿ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ನಾನು ಕೋರ್ಟ್ಗೆ ಹೋಗುತ್ತೇನೆ ಎಂದರು.
ಇನ್ನು ಏನು ಉಚ್ಚಾಟನೆ ರೀ, ಅವರೇ ಪಕ್ಷದಲ್ಲಿ ಇಲ್ಲ, ದೇವೇಗೌಡರ ಜೊತೆ ಯಾರು ಇದ್ದಾರೇ ರೀ? ದೇವೇಗೌಡರು ಪ್ರಧಾನಿಯಾಗಿದ್ದವರು. 70 ವರ್ಷದಿಂದ ರಾಜಕಾರಣ ಮಾಡ್ತಾ ಇದ್ದಾರೆ. ಪಕ್ಷವನ್ನು ನಡೆಸಿದವರು. ತಪ್ಪುಗಳ ಮೇಲೆ ತಪ್ಪು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಮೊದಲ ತಪ್ಪು. ನನ್ನನ್ನು ಅಮಾನತು ಮಾಡಿದ್ದು ಎರಡನೇ ತಪ್ಪು. ನೀವು ಬಿಜೆಪಿ ಜೊತೆ ಹೋಗೋದು ತಪ್ಪು ಅಂತ ಹೇಳಿದ್ದಕ್ಕೆ ಈ ಶಿಕ್ಷೆನಾ? ಮಗ ಕುಮಾರಸ್ವಾಮಿಯನ್ನು ತೆಗೆಯಬೇಕಿತ್ತು. ನಾನು ನಾಲ್ಕು ವರ್ಷಗಳಿಂದ ಇದ್ದ ಎಂಎಲ್ಸಿ ಸ್ಥಾನ ಬಿಟ್ಟು ಜೆಡಿಎಸ್ಗೆ ಬಂದೆ. ಅದಕ್ಕೆ ಕೊಟ್ಟ ಶಿಕ್ಷೆನಾ ದೇವೇಗೌಡರೇ?. ಮಗನಿಗಾಗಿ ಇನ್ನು ಎಷ್ಟು ಜನರನ್ನು ಬಲಿ ಕೋಡ್ತೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.