ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಬ್ಯಾಟರ್ಗಳು ಪರದಾಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಭಾರತ ತಂಡದ ಆರಂಭದಲ್ಲಿ ವೇಗದ ರನ್ ಗಳಿಕೆಗೆ ಯತ್ನಿಸಿದರೂ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡಿತು. ಹೀಗಾಗಿ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿದ ಭಾರತ ತಂಡಕ್ಕೆ ಹಿನ್ನಡೆ ಉಂಟಾಯಿತು.
ಭಾರತ ತಂಡ ಮೊದಲ 39 ಎಸೆತಗಳಿಗೆ 50 ರನ್ ಬಾರಿಸಿತ್ತು. ಹೀಗಾಗಿ ದೊಡ್ಡ ಮೊತ್ತ ಗ್ಯಾರಂಟಿ ಎಂದು ನಂಬಲಾಗಿತ್ತು. ಆದರೆ ಅದಕ್ಕಿಂತ ಮೊದಲೇ ಶುಭ್ಮನ್ ಗಿಲ್ 4 ರನ್ ಬಾರಿಸಿ ಔಟಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯೂ ರನ್ ಗತಿ ಇಳಿಕೆಯಾಗದಂತೆ ನೋಡಿಕೊಂಡಿತು. ಆದರೆ, ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಮುಂದಾದ ರೋಹಿತ್ ಶರ್ಮಾ 47 ರನ್ಗಳಿಗೆ ಔಟಾದರು. ಅವರು 31 ಎಸೆತಗಳಿಗೆ 47 ರನ್ ಬಾರಿಸಿದ್ದರು. ಆದರೆ, ಆ ಬಳಿಕ ಬ್ಯಾಟ್ ಮಾಡಲು ಬಂದ ಶ್ರೇಯಸ್ ಅಯ್ಯರ್ 4 ರನ್ ಗೆ ಔಟಾದರು. ಅವರು ಅದಕ್ಕಿಂತ ಮೊದಲು ಅವರು ಒಂದು ಫೋರ್ ಬಾರಿಸಿದ್ದರು.
ಮೊದಲ ಮೂರು ವಿಕೆಟ್ಗಳು 81 ರನ್ಗೆ ಪತನಗೊಂಡ ಕಾರಣ ಭಾರತ ತಂಡದ ಮೇಲೆ ಒತ್ತಡ ಬಿತ್ತು. ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ಕೆ. ಎಲ್ ರಾಹುಲ್ ಮೇಲೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಬಿತ್ತು. ಬಲಿಕ ಅವರಿಬ್ಬರು 67 ರನ್ಗಳ ಜತೆಯಾಟವಾಡಿದರು. ಈ ವೇಳೆ ಭಾರತ ತಂಡದ ರನ್ ಗಳಿಕೆ ಕುಸಿತಗೊಂಡಿತ್ತು. 11 ಓವರ್ಗಳ ಒಳಗೆ ಮೂರು ವಿಕೆಟ್ ನಷ್ಟ ಮಾಡಿಕೊಂಡಿದ್ದರಿಂದ ವಿಕೆಟ್ ಕಾಪಾಡುವುದು ಈ ಬ್ಯಾಟರ್ಗಲಳ ಪಾಳಿಗೆ ದೊಡ್ಡ ಸವಾಲಾಯಿತು. ಇವರಿಬ್ಬರ ಜತೆಯಾಟದ ವೇಳೆ ಸಿಂಗಲ್ ರನ್ಗಳೇ ಹೆಚ್ಚು ಗಳಿಕೆಯಾಯಿತು.
ಏತನ್ಮಧ್ಯೆ ವಿರಾಟ್ ಕೊಹ್ಲಿಯ ವಿಕೆಟ್ ದುರದೃಷ್ಟಕರವಾಗಿ ನಷ್ಟವಾಯಿತು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರ ಎಸೆತವನ್ನು ರಕ್ಷಿಸಲು ಮುಂದಾದ ಅವರು ಇನ್ಸೈಡ್ ಎಜ್ ಆಗಿ ಬೌಲ್ಡ್ ಆದರು. ಈ ವೇಳೆ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಯಾಕೆಂದರೆ ಮುಂದೆ ಆಡಲು ಬಂದ ರವೀಂದ್ರ ಜಡೇಜಾ 9 ರನ್ಗಳಿಗೆ ಔಟ್ ಆದರು.
ಈ ಮೂಲಕ ಭಾರತವು 50 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ ಕೇವಲ 240 ಗಳಿಸಲಷ್ಟೇ ಶಕ್ತವಾಗಿದೆ.