ಧಾರವಾಡ : ಕಲಘಟಗಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಾಟೀಲ ಭುವನೇಶ್ ದೇವಿದಾಸ ಅವರ ಅಧ್ಯಕ್ಷತೆಯಲ್ಲಿ ಕಲಘಟಗಿ ಹಾಗೂ ಅಳ್ಳಾವರ ತಾಲೂಕಿನ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ವೇಳೆ ತಾಲೂಕಿನ ಗ್ರಾಮ ಪಂಚಾಯಿತಿ ಭಾಗದಲ್ಲಿ ನಡೆದಿರುವ ವಿವಿಧ ಕಾಮಗಾರಿ ಹಾಗೂ ನರೇಗಾ ಯೋಜನೆ ಬಗ್ಗೆ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸಿದರು. ಕೆಲವು ಗ್ರಾಮಗಳಲ್ಲಿ ಜನರು ಫ್ಯಾಕ್ಟರಿ ಕೆಲಸಕ್ಕೆ ತೆರಳುತ್ತಿದ್ದಾರೆ ಆದ ಕಾರಣ ನರೇಗಾ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದಿದ್ದು, ಈ ವೇಳೆ ಕಾರ್ಯನಿರ್ವಾಹಕ ಮುಖ್ಯ ಪಾಟೀಲ ಭುವನೇಶ ದೇವಿದಾಸ ಅವರು ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ನರೇಗಾ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸಿ ಎಂದು ತಾಕೀತು ಮಾಡಿದರು. ಸುಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸಿದ್ದು, ಇನ್ನುಳಿದ ನರೇಗಾ ಕಾಮಗಾರಿಯಲ್ಲಿ ಅತಿ ಹೆಚ್ಚು ಜಾಬ್ ಕಾರ್ಡನ್ನು ನೀಡಿ ಕಾಮಗಾರಿಯ ಬಗ್ಗೆ ಗಮನಹರಿಸಲು ತಿಳಿಸಿದರು. ಸಮರ್ಪಕವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಕಾರ್ಯ ವಿಳಂಬವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ನರೇಗಾ ಕೆಲಸ ಕಾರ್ಯ ವಿಳಂಬವಾದರೆ, 10 ದಿನ ಅದೇ ಗ್ರಾಮದಲ್ಲಿ ಗ್ರಾಮ ವಾಸ್ತವ ನಾವೇ ಮಾಡುತ್ತೇವೆ ಎಂದರು.
ಸಭೆಯಲ್ಲಿ ಕಾರ್ಯದರ್ಶಿ ಬಿ.ಎಸ್.ಮೂಗುನೂರುಮಠ, ತಾಪಂ ಕಾರ್ಯನಿರ್ವಾಹಕ ಪರಶುರಾಮ ಸಾವಂತ, ಪ್ರಶಾಂತ ತುರಕಾಣಿ, ಕೃಷಿ ಇಲಾಖೆ ಅಧಿಕಾರಿ ಅರ್ಮ ನಾಯ್ಕರ್, ಕಾರ್ಯಪಾಲಕ ಅಭಿಯತರು ಸಂತೋಷ ಸತಾಳೆ, ತೋಟಗಾರಿಕೆ ಇಲಾಖೆ ಅಧಿಕಾರಿ ಎಚ್ ವೈ ಆಸಂಗಿ, ವಿದ್ಯಾ ಬಡಿಗೇರ, ವಲಯ ಅರಣ್ಯ ಅಧಿಕಾರಿ ಅರುಣ್ ಕುಮಾರ್ ಅಷ್ಟಗಿ, ಲತಾ ಟಿಎಸ್, ಎ ಜೆ. ಯೋಗಪ್ಪನವರ, ಸಿದ್ದಯ್ಯಸ್ವಾಮಿ ಹಿರೇಮಠ, ಕುಮಾರ್ ಕೆ.ಎಫ್, ತಾಲೂಕಿನ ಅಧಿಕಾರಿಗಳು ಇದ್ದರು.