ಧ್ರುವ ಸರ್ಜಾ (Dhruva Sarja) ಮತ್ತು ಪ್ರೇಮ್ (Jogi Prem) ಕಾಂಬಿನೇಷನ್ ಕೇಡಿ (KD) ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಕೇಡಿ 2 ಸಿನಿಮಾದ ಕೆಲಸದಲ್ಲಿ ನಿರ್ದೇಶಕ ಪ್ರೇಮ್ ಬ್ಯುಸಿಯಾಗಿದ್ದಾರಂತೆ. ಕೇಡಿ 2 ಚಿತ್ರದ ಸ್ಕ್ರಿಪ್ಟ್ ಸೇರಿದಂತೆ ಹಲವು ಕೆಲಸಗಳನ್ನು ಪ್ರೇಮ್ ಮಾಡುತ್ತಿದ್ದಾರಂತೆ.
ಈ ನಡುವೆ ಧ್ರುವ ಸರ್ಜಾ ಅವರ ಮತ್ತೊಂದು ಚಿತ್ರದ ಬಗ್ಗೆಯೂ ಚರ್ಚೆ ಶುರುವಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ.
ಹೊಸ ವರ್ಷದ ದಿನದಂದು ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮಾರ್ಟಿನ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮಾರ್ಟಿನ್ ಗಿಂತ ಮುಂಚೆ ಕೆಡಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಡಿ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಮಾರ್ಟಿನ್ ಕೆಲಸದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.