ಉಪ್ಪೇನ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಿರ್ದೆಶಕ ಬುಚ್ಚಿಬಾಬು ಇದೀಗ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ಹೊಸ ಸಿನಿಮಾವನ್ನು ಬುಚ್ಚಿಬಾಬು ನಿರ್ದೇಶನ ಮಾಡುತ್ತಿದ್ದಾರೆ.ಇದೀಗ ಈ ಸಿನಿಮಾದ ಕೆಲಸ ಮೈಸೂರಿನಲ್ಲಿ ಆರಂಭವಾಗಿದೆ. ಚಾಮುಂಡೇಶ್ವರಿ ದರ್ಶನ ಪಡೆದು ದೇವಸ್ಥಾನದ ಮುಂದೆ ಸ್ಕ್ರಿಪ್ಟ್ ಹಿಡಿದು ನಿಂತಿರುವ ಫೋಟೋವನ್ನು ನಿರ್ದೇಶಕ ಬುಚ್ಚಿಬಾಬು ಸನಾ ಸೋಶಿಯಲ್ ಹಂಚಿಕೊಂಡಿದ್ದಾರೆ.
‘ಉಪ್ಪೇನ’ ಚಿತ್ರದಿಂದ ಸಕ್ಸಸ್ ಕಂಡಿದ್ದ ನಿರ್ದೇಶಕ ಬುಚ್ಚಿಬಾಬು ಸನಾ ಇದೀಗ ರಾಮ್ ಚರಣ್, ಜಾನ್ವಿ ಕಪೂರ್ ನಟನೆಯ ಹೊಸ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದರ ಮೊದಲ ಹಂತದ ಶೂಟಿಂಗ್ಗಾಗಿ ಮೈಸೂರಿಗೆ ರಾಮ್ ಚರಣ್ ಟೀಮ್ ಆಗಮಿಸಿದೆ. ಸಾಂಸ್ಕೃತಿಕ ನಗರ ಮೈಸೂರಿಗೆ ಚಿತ್ರದ ನಿರ್ದೇಶಕ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ದೇವಿ ಸನ್ನಿಧಿಯ ಮುಂದೆ ಬುಚ್ಚಿಬಾಬು ನಿಂತಿರುವ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಬಹಳ ಮಹತ್ವದ ದಿನ, ನಿರೀಕ್ಷೆಯಿಂದ ಕಾಯುತ್ತಿದ್ದ ದಿನವಿದು. ಮೈಸೂರಿನ ತಾಯಿ ಆಶೀರ್ವಾದೊಂದಿಗೆ ದಿನ ಪ್ರಾರಂಭಿಸಿದ್ದೇನೆ. ನಿಮ್ಮ ಹಾರೈಕೆಯ ಅವಶ್ಯಕತೆಯಿದೆ ಎಂದು ನಿರ್ದೇಶಕ ಬುಚ್ಚಿಬಾಬು ಸನಾ ಬರೆದುಕೊಂಡಿದ್ದಾರೆ.
ಇದೇ ನ.25ರಂದು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ.