ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಅಂಡ್ ಗ್ಯಾಂಗ್ನ ಪ್ರಕರಣವು ಹೊಸ ಸ್ವರೂಪ ಪಡೆದುಕೊಂಡಿದೆ.
ಚಾರ್ಜ್ಶೀಟ್ ಬೆನ್ನಲ್ಲೇ ಪೊಲೀಸರ ವಿಚಾರಣೆಗೆ ಸಂಬಂಧಿಸಿದ ಕೆಲವು ಮಹತ್ವದ ವಿಚಾರಗಳು ಬಳಕಿಗೆ ಬರುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಜೈಲಿಗೆ ದರ್ಶನ್ ಶಿಫ್ಟ್ ಆದ ಬಳಿಕ ವಿಜಯಲಕ್ಷ್ಮಿ ಒಮ್ಮೆ ಅವರನ್ನು ಭೇಟಿ ಮಾಡಿದ್ದರು.
ಈಗ ಎರಡನೇ ಬಾರಿಗೆ ಪತಿಯ ಭೇಟಿಗೆ ವಿಜಯಲಕ್ಷ್ಮಿ ಬಳ್ಳಾರಿಗೆ ಬಂದಿದ್ದಾರೆ. ಬಳ್ಳಾರಿ ಕೇಂದ್ರಕಾರಾಗೃಹಕ್ಕೆ ದರ್ಶನ್ ಬಂದ ಮೇಲೆ ಇದೇ ಮೊದಲ ಬಾರಿಗೆ ದಿನಕರ್ ತೂಗದೀಪ ಆಗಮಿಸಿದ್ದು, ಚಾರ್ಜ್ಶೀಟ್ ಸಲ್ಲಿಕೆಯ ಬಳಿಕ ದರ್ಶನ್ರನ್ನ ಮೀಟ್ ಮಾಡಲು ವಿಜಯಲಕ್ಷ್ಮಿಯವರು ದಿನಕರ್ ತೂಗದೀಪ ಜೊತೆ ಬಂದಿದ್ದಾರೆ. ಜೈಲಿನಲ್ಲಿ ದರ್ಶನ್ ಜೊತೆ ಚಾರ್ಜ್ಶೀಟ್ ಸಲ್ಲಿಕೆ ಆಗಿರುವ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.