ಪ್ರತಿ ವರ್ಷ ವಿಶ್ವದಾದ್ಯಂತ 20 ಮಿಲಿಯನ್ಗಿಂತಲೂ ಹೆಚ್ಚು ಮಂದಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 9.5 ಮಿಲಿಯನ್ ಮಂದಿ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿದ್ದಾರೆ. ಕಳಪೆ ಜೀವನ ಶೈಲಿ ಹಾಗೂ ತಂಬಾಕು ಸೇವನೆಯಿಂದಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ಸಾಕಷ್ಟು ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಿದೆ.
ಕ್ಯಾನ್ಸರ್ ಬರಲು ಈ ಆಹಾರ ಸೇವನೆ ಮುಖ್ಯವಾಗುತ್ತೆ. ಅದರ ಬಗ್ಗೆ ತಿಳಿಯೋಣ ಬನ್ನಿ.
ಹುರಿದ ಮಾಂಸ ತಿನ್ನಲು ರುಚಿಕರವಾಗಿರುತ್ತದೆ. ಆದರೆ ಇದನ್ನು ಹೆಚ್ಚು ತಾಪಮಾನದಲ್ಲಿ ಬೇಯಿಸದಿದ್ದರೆ, ಅದರ ರಾಸಾಯನಿಕ ಮತ್ತು ಆಣ್ವಿಕ ರಚನೆಯನ್ನು ಬದಲಾಯಿಸುವ ಕಾರ್ಸಿನೋಜೆನಿಕ್ ಹೈಡ್ರೋಕಾರ್ಬನ್ಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ಹುರಿದ ಮಾಂಸವನ್ನು ಕಡಿಮೆ ಸೇವಿಸುವುದು ಉತ್ತಮ. ಅದರಲ್ಲೂ ಇವುಗಳನ್ನು ಬೇಯಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
ಮೈಕ್ರೋವೇವ್ ಪಾಪ್ಕಾರ್ನ್: ಮೈಕ್ರೋವೇವ್ನಲ್ಲಿ ಬಿಸಿ ಮಾಡಿದ ಪಾಪ್ಕಾರ್ನ್ ಬಹಳ ರುಚಿಕರವಾಗಿರುತ್ತದೆ. ಆದರೆ ಇದರಲ್ಲಿ ಬಿಸಿ ಮಾಡುವುದರಿಂದ ಇದು ವಿಷಕಾರಿಯಾಗುತ್ತದೆ. ಅಲ್ಲದೇ, ಪಾಪ್ಕಾರ್ನ್ ಅನ್ನು ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ತುಂಬುವುದು ಕ್ಯಾನ್ಸರ್ಗೆ ಕಾರಣವಾಗಬಹುದು. ಆದ್ದರಿಂದ ಸಾವಯವ ಕಾಳುಗಳನ್ನು ಖರೀದಿಸಿ, ಅವುಗಳನ್ನು ಆಲಿವ್ ಎಣ್ಣೆಯಿಂದ ಬೇಯಿಸಿ
ತೈಲಗಳು: ಇವುಗಳನ್ನು ಸಸ್ಯಜನ್ಯ ಎಣ್ಣೆ ಮೂಲಗಳಿಂದ ರಾಸಾಯನಿಕವಾಗಿ ಹೊರತೆಗೆಯಲಾಗುತ್ತದೆ. ಇವುಗಳಲ್ಲಿ ಅಪಾಯಕಾರಿ ಪ್ರಮಾಣದ ಒಮೆಗಾ -6 ಕೊಲೆಸ್ಟ್ರಾಲ್ಗಳಿವೆ. ಇದು ಕ್ಯಾನ್ಸರ್ಗೆ ಕಾರಣವಾಗುವ ಜೀವಕೋಶದ ಪೊರೆಗಳ ರಚನೆಯಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ, ಆಲಿವ್ ಎಣ್ಣೆಯಂತಹ ಇತರ ನೈಸರ್ಗಿಕವಾಗಿ ಪಡೆದ ತೈಲಗಳನ್ನು ಬಳಸಿ
ಮೀನು : ಸಾಲ್ಮನ್ ಮೀನುಗಳು ಉತ್ತಮ ಪ್ರೋಟೀನ್ನಲ್ಲಿ ಸಮೃದ್ಧವಾಗಿದ್ದರೂ, ಯುನೈಟೆಡ್ ಸ್ಟೇಟ್ಸ್ನಲ್ಲಿ ಜನರು ಸೇವಿಸುವ 60% ಕ್ಕಿಂತ ಹೆಚ್ಚು ಸಾಲ್ಮನ್ ಸಾಕಣೆ ಕೇಂದ್ರಗಳಿಂದ ಬರುತ್ತದೆ. ಅಲ್ಲದೇ, ಇದು ಕೀಟನಾಶಕಗಳು ಮತ್ತು ಪ್ರತಿಜೀವಕಗಳನ್ನು ಹೊಂದಿರುತ್ತದೆ. ಇವುಗಳ ಸೇವನೆ ನಮ್ಮೊಳಗೂ ಸೇರಿಕೊಳ್ಳುತ್ತದೆ. ಆದ್ದರಿಂದ, ತಾಜಾ ಮೀನುಗಳನ್ನು ಖರೀದಿಸಿ ತಿನ್ನಿ.
ಕೃತಕ ಸಿಹಿಕಾರಕಗಳು: ಹೆಚ್ಚಿನ ಕೃತಕ ಸಿಹಿಕಾರಕಗಳನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ತಯಾರಿಸಲಾಗುತ್ತದೆ. ಇವು ಸುರಕ್ಷಿತವಾಗಿದೆಯೋ ಅಥವಾ ಇಲ್ಲವೋ ಎಂಬುವುದರ ಬಗ್ಗೆ ಅರಿವಿರುವುದಿಲ್ಲ. ಆದರೆ ಕೃತಕ ಸಿಹಿಕಾರಕಗಳು DKP ಎಂಬ ವಿಷಕಾರಿ ವಸ್ತುವನ್ನು ಬಿಡುಗಡೆ ಮಾಡುತ್ತವೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಇದು ದೇಹದಲ್ಲಿ ಸಂಗ್ರಹವಾಗುತ್ತದೆ ಮತ್ತು ಮೆದುಳಿನ ಗೆಡ್ಡೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ, ಕೃತಕ ಸಿಹಿಕಾರಕಗಳನ್ನು ಬಳಸುವ ಬದಲು, ಸ್ಟೀವಿಯಾವನ್ನು ಬಳಸಿ. ಸ್ಟೀವಿಯಾ ಸಿಹಿ ಸಕ್ಕರೆ ಬದಲಿಯಾಗಿದೆ.
ಕೀಟನಾಶಕ ಹಣ್ಣುಗಳು: ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದಕ್ಕೆ ಕೀಟನಾಶಕಗಳನ್ನು ಸಿಂಪಡಿಸಿದ್ದರೆ ಇವು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತವೆ. ಯುರೋಪ್ನಲ್ಲಿ ಈ ರೀತಿಯ ಹಣ್ಣುಗಳ ಮಾರಾಟವನ್ನು ನಿಷೇಧಿಸಲಾಗಿದೆ. ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್ 98% ಕೃಷಿಯು ಕಾರ್ಸಿನೋಜೆನಿಕ್ ಕೀಟನಾಶಕಗಳಿಂದ ಕಲುಷಿತವಾಗಿದೆ ಎಂದು ತಿಳಿಸಿದೆ. ಹಾಗಾಗಿ ಸಾವಯವ ಹಣ್ಣುಗಳನ್ನು ಖರೀದಿಸಿ ತಿನ್ನಿ.
ಆಲೂಗಡ್ಡೆ ಚಿಪ್ಸ್: ಆಲೂಗೆಡ್ಡೆ ಚಿಪ್ಸ್ನಲ್ಲಿ ಸಾಕಷ್ಟು ಉಪ್ಪು ಇರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ. ಆದ್ದರಿಂದ, ಇವುಗಳ ಬದಲಿಗೆ ಬಾಳೆಕಾಯಿ ಚಿಪ್ಸ್ ತಿನ್ನಬಹುದು.
ಮದ್ಯಪಾನ: ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ನಡೆಸಿದ ಅಧ್ಯಯನಗಳು ಅತಿಯಾಗಿ ಮದ್ಯಪಾನ ಮಾಡುವವರು ತಲೆ, ಕುತ್ತಿಗೆ, ಗಂಟಲು, ಯಕೃತ್ತು, ಸ್ತನ ಮತ್ತು ಕರುಳಿನ ಕ್ಯಾನ್ಸರ್ಗಳನ್ನು ಹೊಂದಿರುವುದು ತಿಳಿದು ಬಂದಿದೆ. ಆದ್ದರಿಂದ, ಮದ್ಯಪಾನವನ್ನು ತೊಡೆದುಹಾಕಲು ಪ್ರಯತ್ನಿಸಿ.