ಬೆಂಗಳೂರು:ಪೊಲೀಸ್ ಠಾಣೆ ಕೂಗಳತೆ ದೂರದಲ್ಲೆ ನಡೀತಿದೆ ಮಾಂಸ ದಂಧೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿನಡೆಸಿದ್ದಾರೆ.
ದಂಧೆ ಎಲ್ಲಾ ಗೊತ್ತಿದ್ರು ಕಣ್ಮುಚ್ಚಿ ಕುಳಿತಿದ್ರಾ ಕಬ್ಬನ್ ಪಾರ್ಕ್ ಪೊಲೀಸರು? ಅನ್ನೋ ಅನುಮಾನ ಎದ್ದಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಇರುವ ಚಾನ್ಸರಿ ಪೆವಿಲಿಯನ್ ಹೊಟೇಲ್ ನಲ್ಲಿ
ವಿದೇಶದಿಂದ ಯುವತಿಯರನ್ನ ಕರೆತಂದು ವೇಶ್ಯಾವಾಟಿಕೆ ನಡೆಸ್ತಿದ್ರು ಅನ್ನೋ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ರು ನಿನ್ನೆ ರಾತ್ರಿ ದಾಳಿ ನಡೆಸಿದ್ದರೆ.
ಆದ್ರೆ ದಾಳಿ ನಂತರ ಸಿಸಿಬಿ ಪೊಲೀಸ್ರೆ ಹೈ ಡ್ರಾಮ ಕ್ರಿಯೇಟ್ ಮಾಡಿದ್ದಾರೆ. ದಾಳಿಯಲ್ಲಿ ಮೂರ್ನಾಲ್ಕು ವಿದೇಶಿ ಯುವತಿಯರು ಸಿಕ್ರು ಅನ್ನೋಮಾಹಿತಿದೆ ಇದೆ ಆದ್ರ ಸಿಸಿಬಿ ಪೊಲೀಸ್ರು ಓರ್ವ ಯುವತಿಯ ರಕ್ಷಣೆ,ಠಾಣೆಗೆ ಕರೆತಂದು ವಿಚಾರಣೆ ನಡರಸಿದ್ದಾರೆ.
ಅಷ್ಟು ದೊಡ್ಡ ಹೊಟೇಲ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಗಳು ಪರಾರಿ ಯಾಗಿದ್ದಾರೆ ಸಿಸಿಬಿ ಪೊಲೀಸ್ರು ಹೇಳ್ತಿರೋದು ನೋಡಿದ್ರೆ
ಸಿಸಿಬಿ ಪೊಲೀಸ್ರೆ ಆರೋಪಿಗಳ ರಕ್ಷಣೆ ಮಾಡಿದ್ರಾ? ಇಲ್ಲ ಯಾರೋದ್ದ ಒತ್ತಡಕ್ಕೆ ಇನ್ಯಾರನ್ನೊ ರಕ್ಷಣೆ ಮಾಡಲು ನಿಂತ್ರಾ ಅನ್ನೋ ಪ್ರಶ್ನೆ ಕೂಡ ಮೂಡುತ್ತೆ.
ಯಾಕಂದ್ರೆ ದಾಳಿ ಬಳಿಕ ರಕ್ಷೆಣೆ ಮಾಡಿದ ಯುವತಿಯನ್ನ ನೇರವಾಗಿ ಪಕ್ಕದಲ್ಲಿದ್ದ ಕಬ್ಬನಗ ಪಾರ್ಕ್ ಠಾಣೆಗೆ ಕರೆದೊಯ್ಯಬೇಕಾದ ಅಧಿಕಾರಿಗಳು ಯುವತಿಯನ್ನ ಮಾಧ್ಯಮದವ್ರ ಕಣ್ಣು ತಪ್ಪಿಸಲು ಇನ್ನಿಲ್ಲದ ಸರ್ಕಸ್ ನಡೆದಿದ್ದಾರೆ.
ನಡು ರಾತ್ರಿಯಲ್ಲಿ ಯುವತಿಯನ್ನ ಜೀಪ್ ನಲ್ಲಿ ಕೂರಿಸಿ ಕೊಂಡು ಅರ್ಧ ಬೆಂಗಳೂರು ಸುತ್ತಾಡಿಸಿ ಕೊನೆಗೆ ಪಕ್ಕದಲ್ಲೇ ಇದ್ದ ಕಬ್ಬನ್ ಪಾರ್ಕ್ ಠಾಣೆಗೆ ಕರೆತಂದಿದ್ದಾರೆ.
ಇದು ಆರೋಪಿಗಳ ರಕ್ಷಣೆಗೆ ಹೈಡ್ರಾಮ ಮಾಡಿದ್ರಾ ಅನ್ನೋ ಶಂಕೆಯನ್ನ ಹುಟ್ಟು ಹಾಕ್ತಿದೆ. ಹಾಗಾದ್ರೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದವ್ರು ಅಷ್ಟು ಪ್ರಭಾವಿಗಳಾ?
ಹೇಳಿ ಕೇಳಿ ವೇಶ್ಯಾವಾಟಿಕೆ ದಂಧೆ ನಡಿತಾ ಇದ್ದಿದ್ದು ಪ್ರತಿಷ್ಠಿತ ಹೋಟೆಲ್ ನಲ್ಲಿ. ಇದಕ್ಕೆಲ್ಲ ಉತ್ಯರ ಹಿರಿಯ ಅಧಿಕಾರಿಗಳೇ ನೀಡಬೇಕು