ಅಮೇರಿಕಾದ ಯುಜೀನ್ನಲ್ಲಿ ನಡೆದ ಡೈಮಂಡ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಂಡು ಈ ಸಾಧನೆ ಮಾಡಿದ ವಿಶ್ವದ 3ನೇ ಅಥ್ಲೇಟಿಕ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತಾದರೂ ಜೆಕ್ ರಿಪಬ್ಲಿಕ್ ನ ಯಾಕೊಬ್ ವಾಡ್ಲಿಚ್ ಅವರ ವಿರುದ್ಧ ಮಣಿದು 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, 2022ರಲ್ಲಿ ಜೂರಿಚ್ ಡೈಮಂಡ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಯೂಜಿನ್ ಡೈಮಂಡ್ ಲೀಗ್ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಂಡ 3ನೇ ಅಥ್ಲೀಟ್ ಎನಿಸಿಕೊಳ್ಳುವ ಅವಕಾಶವಿತ್ತು. 2012 ಮತ್ತು 2013ರಲ್ಲಿ ಜೆಕ್ ಗಣರಾಜ್ಯದ ವಿಟೆಸ್ಲಾವ್ ವೆಸ್ಲಿ, 2016 ಮತ್ತು 2017 ರಲ್ಲಿ ಜಾಕೊಬ್ ವಾಡ್ಲಿಚ್ ಈ ಸಾಧನೆ ಮಾಡಿದ್ದರು.

ಕಳೆದ ತಿಂಗಳು ಬುದಾಪೆಸ್ಟ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಯೂಜಿನ್ ಡೈಮಂಡ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಾರೆ ಎಂಬ ಭರವಸೆ ಮೂಡಿಸಿದ್ದರೂ, ಆದರೆ ಕಂಚಿನ ಪದಕ ಗೆದ್ದಿದ್ದ ಯಾಕೊಬ್ ವಾಡ್ಲಿಚ್ ವಿರುದ್ಧ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡು ಡೈಮಂಡ್ ಲೀಗ್ ಚಾಂಪಿಯನ್ ಪಟ್ಟ ಕೈಚೆಲ್ಲಿಕೊಂಡರು.
