ಸಿನಿಮಾ ರಂಗಕ್ಕೆ ಒಂದಾದ ಮೇಲೆ ಒಂದು ಶಾಕ್ ಎದುರಾಗುತ್ತಲೇ ಇದೆ. ಮಲಯಾಳಂ ನಟ ವಿನೋದ್ ಥಾಮಸ್ ನಿಧನದ ಬಳಿಕ ಇದೀಗ ಹೃದಯಾಘಾತದಿಂದ ‘ಧೂಮ್’ 2 (Dhoom 2) ಚಿತ್ರ ನಿರ್ದೇಶಕ ಸಂಜಯ್ ಘಡ್ವಿ (Sanjay Gadhvi) ನಿಧನರಾಗಿದ್ದಾರೆ. 57ನೇ ವಯಸ್ಸಿಗೆ ಸಂಜಯ್ ಇಹಲೋಕ ತ್ಯಜಿಸಿದ್ದಾರೆ.
ಇಂದು (ನವೆಂಬರ್ 19) ಸಂಜಯ್ ಮನೆಯಲ್ಲೇ ಇದ್ದರು. ಬೆಳಿಗ್ಗೆ 8.45ಕ್ಕೆ ಅವರಿಗೆ ಹೃದಯಾಘಾತವಾಗಿದೆ. ಆಗ ಅವರು ಕುಸಿದು ಕೆಳಗೆ ಬಿದ್ದಿದ್ದಾರೆ. ಆ ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಏನೂ ಪ್ರಯೋಜನವಾಗಿಲ್ಲ. ಇದೀಗ ಸಂಜಯ್ ನಿಧನ ಬಗ್ಗೆ ನಿರ್ಮಾಪಕ ಬೋನಿ ಕಪೂರ್ ಖಚಿತಪಡಿಸಿದ್ದಾರೆ. ಸಂಜಯ್ ನಿಧನಕ್ಕೆ ಬಾಲಿವುಡ್ ನಟ-ನಟಿಯರು, ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ.
ಸಂಜಯ್ ಅವರು ಬಾಲಿವುಡ್ಗೆ (Bollywood) ಕಾಲಿಟ್ಟಿದ್ದು 2001ರಲ್ಲಿ. ‘ತೇರೆ ಲಿಯೇ’ ಅವರ ನಿರ್ದೇಶನದ ಮೊದಲ ಸಿನಿಮಾ. ಅವರು ಕೆಲವು ವರ್ಷ ಸೈಕಲ್ ಹೊಡೆದರು. 2004ರಲ್ಲಿ ಅವರು ನಿರ್ದೇಶನ ಮಾಡಿದ ‘ಧೂಮ್’ ಸಿನಿಮಾ ಸೂಪರ್ ಹಿಟ್ ಆಯಿತು. 2006ರಲ್ಲಿ ಧೂಮ್ ಪಾರ್ಟ್ 2ಗೆ ಆ್ಯಕ್ಷನ್ ಹೇಳಿದ್ರು ಸಂಜಯ್. ಈ ಚಿತ್ರ ಕೂಡ ಹಿಟ್ ಆಯ್ತು.