ಧಾರವಾಡ:- ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಸುಮಾರು 3 ಗಂಟೆ ತಡವಾಗಿ ಆರಂಭವಾಗಿದೆ.
ಧಾರವಾಡ ಜಿಪಂ ಸಭಾಭವನದಲ್ಲಿ ಬೆಳಿಗ್ಗೆ 9 ಕ್ಕೆ ಆರಂಭವಾಗಬೇಕಿದ್ದ ಜನತಾ ದರ್ಶನ ಮಧ್ಯಾಹ್ನ 12 ಗಂಟೆಯಾದರೂ ಆರಂಭ ಆಗದೇ ಮೂರು ತಾಸು ವಿಳಂಬವಾಗಿ ನಂತರ ಆರಂಭವಾಗಿದೆ. ಇನ್ನೂ ಸಚಿವರ ಆಗಮನಕ್ಕಾಗಿ ಅಧಿಕಾರಿಗಳು, ಸಾರ್ವಜನಿಕರು ಕಾದು ಕುಳಿತಿದರು. ಸಚಿವರಾದಿಯಾಗಿ ಜಿಲ್ಲಾಧಿಕಾರಿಗಳೂ ಜನತಾ ದರ್ಶನಕ್ಕೆ ತಡವಾಗಿ ಆಗಮಿಸಿದರು. ಸಚಿವರು ಹಾಗೂ ಅಧಿಕಾರಿಗಳ ತಡ ಆಗಮನದಿಂದ ಸಾರ್ವಜನಿಕರು ಕಾದು ಕಾದು ಸುಸ್ತಾಗಿದ್ದರು.