ಧಾರವಾಡ: – ಚಾಲಕನ ನಿಯಂತ್ರಣ ತಪ್ಪಿದ ಕಾರವೊಂದು ರಸ್ತೆ ಪಕ್ಕದ ವಾಟರ್ ಪೈಪ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರಿಗೆ ಗಂಭೀರ ಗಾಯವಾದ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಹೊರವಲಯದ ಧಾರವಾಡ ಸವದತ್ತಿ ರಸ್ತೆಯಲ್ಲಿ ನಡೆದಿದೆ.
ಧಾರವಾಡ ಸವದತ್ತಿ ರಸ್ತೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಯುವಕರು ಕಾರನಲ್ಲಿ ದಾಂಡೇಲಿಗೆ ತೆರಳುತ್ತಿದ್ದರು. ಈ ವೇಳೆ ಅಮ್ಮಿನಭಾವಿ ಬಳಿ ಬರುತ್ತಿದಂತೆ ಕಾರ್ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದಾಗಿ ಕಾರ್ ಸ್ಪೀಡಾಗಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ವಾಟರ್ ಪೈಪಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ರಾಮದುರ್ಗ ತಾಲೂಕಿನ ಊದಪೂಡ್ ಗ್ರಾಮದವರೆಂದು ತಿಳಿದು ಬಂದಿದೆ.
ಸಾಗರ ಹಿರೆಮಠ, ಮಹಾಂತೇಶ ಬಡಿಗೇರಿ, ಮಂಜುನಾಥ್ ಕರಡಿಗುಡ್ಡ ಸೇರಿ ಇನ್ನೋರ್ವನಿಗೆ ಗಾಯವಾಗಿದ್ದು, ಧಾರವಾಡ ಜಿಲ್ಲಾ ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.
ಇನ್ನೂ ಘಟನೆ ನಡೆಯುತ್ತಿದಂತೆ, ಜಮೀನಿಗಳಿಗೆ ಬಂದಿದ್ದ ಜನರು ಹಾಗೂ ಸ್ಥಳೀಯರು ಅಪಘಾತಕ್ಕೆ ಒಳಗಾದ ಗಾಯಳುಗಳನ್ನು ರಕ್ಷಣೆ ಮಾಡಿ ಮಾನವೀಯತೆಯ ಮೇರೆದಿದ್ದಾರೆ.