ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಎಂಜಿನಯರ್ಸ್ ಕಚೇರಿಯ ಆವರಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಹಾತ್ಕರ್ಗಾ ಕೈಮಗ್ಗ ಮೇಳ ಹಾಗೂ ಕೈಮಗ್ಗಗಳ ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿದರು.
ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಇಲ್ಲಿ ಆಯೋಜನೆ ಮಾಡಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ನ.4 ರಿಂದ ಆರಂಭವಾಗಿರುವ ಈ ಮೇಳದಲ್ಲಿ ಇಲ್ಲಿಯವರೆಗೂ 62 ಲಕ್ಷ ರೂಪಾಯಿಯಷ್ಟು ವ್ಯಾಪಾರವಾಗಿದೆ.
BPL ರೇಷನ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ.? ಇಲ್ಲಿದೆ ಮಾಹಿತಿ
ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ಇತರ ರಾಜ್ಯಗಳಿಂದಲೂ ಕೈಮಗ್ಗ ಉತ್ಪನ್ನಗಳು ಇಲ್ಲಿ ಮಾರಾಟಕ್ಕೆ ಬಂದಿವೆ. ಮಂಗಳವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ಕೂಡ ಮಾರಾಟ ಮೇಳಕ್ಕೆ ಭೇಟಿ ಕೊಟ್ಟು ಕೈಮಗ್ಗ ಉತ್ಪನ್ನಗಳನ್ನು ಕುತೂಹಲದಿಂದ ವೀಕ್ಷಿಸುವುದರ ಜೊತೆಗೆ ತಾವೂ ಕೂಡ ಕೆಲ ಉತ್ಪನ್ನಗಳನ್ನು ಖರೀದಿ ಮಾಡಿದರು. ಕೈಮಗ್ಗ ಉತ್ಪನ್ನಗಳನ್ನೇ ಹೆಚ್ಚು ಖರೀದಿ ಮಾಡುವ ಮೂಲಕ ನೇಕಾರರ ಬದುಕು ಸುಧಾರಿಸುವ ಕೆಲಸವನ್ನು ಜನ ಮಾಡಬೇಕಿದೆ ಎಂದರು.
ಕಾಟನ್ ಸೀರೆಗಳು, ವಸ್ತ್ರಗಳು, ಚಿಕ್ಕಮಕ್ಕಳ ಬಟ್ಟೆ, ಖುರ್ತಾ, ಜಾಕೆಟ್ ಹೀಗೆ ಕೈಮಗ್ಗ ಉತ್ಪನ್ನಗಳಿಂದಲೇ ಸಿದ್ಧವಾಗಿ ಬಂದ ಬಟ್ಟೆಗಳು ಇಲ್ಲಿ ಮಾರಾಟಕ್ಕಿವೆ. ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನಡೆದಿರುವ ಈ ಮೇಳ ನ.14ರವರೆಗೂ ನಡೆಯಲಿದೆ.