ಬೆಂಗಳೂರು: ರಾಜಧಾನಿ ಅಭಿವೃದಿಗೆ ಬಿಡಿಎ ಜವಾಬ್ದಾರಿ ದೊಡ್ಡದ್ದೇ ಇದೆ. ಆದ್ರೆ ಇದೇ ಪ್ರಾಧಿಕಾರ ಇದೀಗ ದುಡ್ಡಿಲ್ಲ ಅಂತಾ ಬಾಯಿ ಬಾಯಿ ಪಡೆದುಕೊಳ್ಳುತ್ತಿದೆ.ಹೀಗಾಗಿ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರೋ ಕಾಮಗಾರಿಗಳು ಅರ್ಧಂಬರ್ಧಕ್ಕೆ ನಿಲ್ಲಿಸಿಬಿಟ್ಟುದೆ. ದಮ್ಮಯ್ಯಾ ದುಡ್ಡು ಕೊಡಿ ಅಂದರು ಸರ್ಕಾರ ನೀಡ್ತಿಲ್ಲ.ಹೀಗಾಗಿ ನಗರದ ಅಭಿವೃದ್ದಿ ಹೊಣೆ ಹೊತ್ತಿರೋ ಪ್ರಾಧಿಕಾರ ಸ್ಥಿತಿ ಡೋಲಾಯಮಾನವಾಗಿದೆ.
ರಾಜಧಾನಿ ಬೆಂಗಳೂರನ್ನ ಇಡೀ ವಿಶ್ವವೇ ನೋಡ್ತಿದೆ. ನಗರದ ಅಭಿವೃದ್ದಿ ಹೊಣೆ ಬಿಬಿಎಂಪಿ ಹಾಗೂ ಬಿಡಿಎ ಹೆಗಲಿಗೆ ಸರ್ಕಾರ ವಹಿಸಿದೆ. ಆದ್ರೆ ಇಡೀ ನಗರದ ಅಭಿವೃದ್ದಿಗೆ ದೊಡ್ಡ ಕೊಡುಗೆ ಕೊಡಬೇಕಾದ ಬಿಡಿಎಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೌದು ನಗರದ ಅಭಿವೃದ್ದಿ ಜವಾಬ್ದಾರಿ ಹೊಣೆ ಹೊತ್ತಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಆರ್ಥಿಕ ಗಂಡಾಂತರಕ್ಕೆ ಸಿಲಿಕಿ ಒದ್ದಾಡ್ತಿದೆ.. ಬಿಡಿಎ ಈಗಾಗಲೇ ನಗರದ ಹಲವೆಡೆ ಹಲವು ಲೇಔಟ್ ಗಳನ್ನ ಮಾಡಿದೆ. ಆದರ ಜತೆಗೆ ಹಲವೆಡೆ ಪ್ಲೈಓವರ್ ಕೂಡ ನಿರ್ಮಾಣ ಮಾಡುತ್ತೆ. ಆದರೆ ಇತ್ತೀಚಿಗೆ ಬಿಡಿಎ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರೋ ಕಾರಣ ಯಾವದೇ ಕಾಮಗಾರಿ ಕೈಗೆತ್ತಿಗೊಳ್ಳಲು ಸಾಧ್ಯವಾಗ್ತಿಲ್ಲ. ಈ ಸಂಬಂಧ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದ್ದು, ಅನುಮಾನ ನೀಡಿ ಅಂತ ಹೇಳಿದ್ರೂ ಇಲ್ಲಿಯವರಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡದೆ ಇರೋ ಕಾರಣ ಕಾಮಗಾರಿಗಳೆಲ್ಲಾ ಅರ್ಧಂಬರ್ಧಕ್ಕೆ ನಿಂತುಬಿಟ್ಟಿವೆ.
ಹೌದು.. ಪ್ರಸ್ತುತ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಿಡಿಎಗೆ ಸುಮಾರು 30ಸಾವಿರ ಕೋಟಿ ಬೇಕಂತೆ. ಆದರೆ ಸಮಪಕವಾಗಿ ಹಣ ಹೊಂದಿಸಲು ಬಿಡಿಎ ಗೆ ಸಾಧ್ಯವಾಗದೆ ಪರದಾಡುತ್ತಿದೆ. 2016-17ರಲ್ಲಿ ಬಿಡಿಎ ಕೈಗೆತ್ತಿಕೊಂಡಿರುವ ಹೊಸ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಿಗೆ 5,500 ಕೋಟಿ ರೂ. ಅವಶ್ಯಕತೆಯಿದೆ. ಔಟರ್ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಯೋಜನೆಗೆ 22.ಸಾವಿರ ಕೋಟಿ ರೂ.ಹೊರವರ್ತಲ ರಸ್ತೆ ಅಲೈನ್ವೆುಂಟ್ ಯೋಜನೆಗೆ 700 ಕೋಟಿ ರೂ. ಮತ್ತು ಯಶವಂತಪುರದಲ್ಲಿನ ಕಾಮಗಾರಿಗೆ 131 ಕೋಟಿ ರೂ. ಬೇಕಾಗಿದೆ.. ಈ ಎಲ್ಲ ಕಾಮಗಾರಿಗಳಿಗೆ ಹಣ ಹೊಂದಿಸುವುದು ಬಿಡಿಎಗೆ ದುಸ್ತರವಾಗಿದೆ.ಇದರಿಂದ ಇವೆಲ್ಲಾ ಯೋಜನೆ ಪೂರ್ಣಗೊಳಿಸಲು ಕನಿಷ್ಟ ಹಣ ನೀಡಿ ಅಂತ ಹೇಳಿದರು ಸರ್ಕಾರ ಒಪ್ಪುತ್ತಿಲ್ಲ.
ಈಗಾಗಲೇ ಆರು ವಸತಿ ಯೋಜನೆಗಳಿಗೆ ಬಿಡಿಎ ಹುಡ್ಕೋದಿಂದ 200 ಕೋಟಿ, ಎಸ್ ಬಿಎಂ ಬ್ಯಾಂಕ್ ನಿಂದ 73 ಕೋಟಿ, ಕಾಪೋರೇಷನ್ ಬ್ಯಾಂಕ್ ನಿಂದ 46 ಕೋಟಿ, ಕೆನರಾ ಬ್ಯಾಂಕ್ ನಿಂದ 250 ಕೋಟಿ ಸಾಲ ಪಡೆದಿದೆ. ಇವೆಲ್ಲಾಕ್ಕೂ ಬಡ್ಡಿ ಕಟ್ಟೋದಕ್ಕೆ ಪರದಾಡ್ತಿದೆ. ಬಿಡಿಎ ವಸತಿ ಯೋಜನೆ, ಲೇಔಟ್ ಗಳಿಂದ ನಿರೀಕ್ಷೆ ಮಾಡಿದಷ್ಟು ಹಣ ಬರುತ್ತಿಲ್ಲ ಬರುತ್ತಿದೆ. ಹೀಗಾಗಿ ಖಾಜನೆಯಲ್ಲಿ ಕೇವಲ 40 ಕೋಟಿಯಷ್ಟು ಮಾತ್ರ ಹಣ ಇದ್ದು, ಅಭಿವೃದ್ದಿ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ.
ಒಟ್ಟಿನಲ್ಲಿ ದಿವಾಳಿ ಅಂತ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡುತ್ತಲ್ಲೇ ಬಂದಿರುವ ಪ್ರಾಧಿಕಾರ ಬಡ್ಡಿ ಕಟ್ಟುವದಕ್ಕೆ ಹೆಣಗಾಡುತ್ತಿದೆ.ಇಷ್ಟು ಆದರು ಸರ್ಕಾರ ಬಿಡಿಎ ಗೆ ಅನುದಾನ ನೀಡುತ್ತಿಲ್ಲ ಅನ್ನೋ ಕೂಗು ಕೇಳಿಬಂದಿದೆ. ಹೀಗಾಗಿ ಇರೋ ಬರೋ ಆಸ್ತಿಗಳನ್ನ ಹರಾಜು ಹಾಕೋದಕ್ಕೆ ಬಿಡಿಎ ಮುಂದಾಗಿದೆ. ಇದೇ ರೀತಿ ಮುಂದುವರಎದರೆ ಎನ್ನಷ್ಟು ಬಾರ್ಬದ್ ಆಗಿ ಒಂದಲ್ಲ ಒಂದು ದಿನ ಬೀಗ ಜಡಿಯುವ ದಿನಗಳು ಬರಬಹುದುದೇನೋ.