ಕೋಲಾರ: ಮಕ್ಕಳು ಟಿ.ವಿ, ಮೊಬೈಲ್, ದುಚ್ಚಟ, ಸಿನಿಮಾಗಳಿಗೆ ದಾಸರಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎ.ತಬಲ ನಾರಾಯಣಪ್ಪ ಸಲಹೆ ನೀಡಿದರು.
Women’s Asia Cup 2024: ಶ್ರೀಲಂಕಾಗೆ ಒಲಿದ ಏಷ್ಯನ್ ಕಿರೀಟ: ಹರ್ಮನ್ ಪಡೆಗೆ ನಿರಾಸೆ!
ಜಿಲ್ಲಾ ಕುಂಬಾರರ ಸಂಘ ಭಾನುವಾರ ಜನಾಂಗದ ವಿದ್ಯಾರ್ಥಿಗಳಿಗೆ ನಗರದ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಸ್ತಿನಿಂದ ವ್ಯಾಸಂಗ ಮಾಡಿ, ಉನ್ನತ ಸ್ಥಾನಗಳಿಗೆ ಏರಬೇಕು ಹಾಗೂ ಜನಾಂಗದ ಬಡವರಿಗೆ ಸಹಾಯ ಮಾಡುವ ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು ಎಂದರು.
ಕುಂಬಾರ ಜನಾಂಗ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಕುಲಕಸುಬಿನಿಂದ ಜೀವನ ನಡೆಸಲು ಸಾಧ್ಯವಿಲ್ಲದಂತಾಗಿದೆ. ಮಕ್ಕಳನ್ನು ಶಾಲೆಗಳಿಗೆ ಸೇರಿಸಿ, ಉತ್ತಮ ಶಿಕ್ಷಣ ಕೊಡಿಸಿದರೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಅಧೀಕ್ಷಕ ಅಭಿಯಂತರರು ಬಿ.ಪಿ.ಸಂಜೀವರಾಜು, ವಿಧಾನ ಪರಿಷತ್ ಅಪರ ಕಾರ್ಯದರ್ಶಿ ಎಸ್.ನಿರ್ಮಲ, ಕಾರ್ಯಪಾಲಕ ಅಭಿಯಂತರರು ಎಚ್.ಎಂ.ಟಿ.ಸ್ವಾಮಿ, ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಕೆ. ಎಸ್.ಮಂಜುನಾಥ, ಜಿಲ್ಲಾ ಕುಂಬಾರರ ಸಂಘದ ಗೌರವಾಧ್ಯಕ್ಷ ವೆಂಕಟಾಸ್ವಾಮಿ, ಉಪಾಧ್ಯಕ್ಷ ಬಿ.ನಂಜುಂಡಪ್ಪ, ಗೌಡಹಳ್ಳಿ ವೆಂಕಟಸ್ವಾಮಿ, ಕೋಶಾಧಿಕಾರಿ ಶ್ರೀನಿವಾಸಪ್ಪ, ಕಾರ್ಯದರ್ಶಿ ಎನ್.ರೆಡ್ಡಪ್ಪ, ಕುಲಬಾಂಧವರು ಹಾಗೂ ಮತ್ತಿತರರು ಭಾಗವಹಿಸಿದ್ದರು.